ನೋಟ್ ಬ್ಯಾನ್ ಬಳಿಕ, ಬರೋಬ್ಬರಿ 246ಕೋಟಿ ಜಮೆ ಮಾಡಿದ ಉದ್ಯಮಿ!!

0
528
ಭಾರತದ ಈಗಿನ ಜನರು ಏನೇ ನೆನಪು ಹಾರಿದ್ರೂ ಸಹ, ನವಂಬರ್ 8ನ್ನು ಮರೆಯಲು ಸಾಧ್ಯವಿಲ್ಲ. ಈ ದಿನದಂದು ಕೇಂದ್ರ ಸರ್ಕರ 500 ಹಾಗೂ 1೦೦೦ ಮುಖ ಬೆಲೆಯ ನೋಟ್‍‍ ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು.
ಡಿ.31ರ ಒಳಗೆ ತಮ್ಮಲ್ಲಿನ ಹಣವನ್ನು ಬ್ಯಾಂಕ್ ಗಳಿಗೆ ಜಮೆ ಮಾಡುವಂತೆ ಸರ್ಕಾರ ಕೇಳಿಕೊಂಡಿತ್ತು.ಇದರಂತೆ ತಮಿಳುನಾಡು ಮೂಲದ ನಾಮಕ್ಕಳ್ ಜಿಲ್ಲೆಯ ತಿರುಚಿನ್ಗೊಡ್ನ ಉದ್ಯಮಿ 246 ಕೋಟಿ ರೂಪಾಯಿಯನ್ನು ಬ್ಯಾಂಕ್ಗೆ ಜಮೆ ಮಾಡಿದ್ದಾರೆ. ಈ ಉದ್ಯಮಿಯ ಹೆಸರನ್ನು ಐಟಿ ಅಧಿಕಾರಿಗಳು ಬಹಿರಂಗ ಪಡಿಸಿಲ್ಲ. ಇಂಡಿಯನ್ ಓವರ್ಸಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಉದ್ಯಮಿಗೆ,
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿ ಶೇ.45 ರಷ್ಟು ತೆರಗೆ ಬೀಳಲಿದೆ.
ತಮಿಳುನಾಡಿನಲ್ಲಿ ನೋಟ್ ರದ್ದಾದ ಬಳಿಕ ಸುಮಾರು 600 ಕೋಟಿ ರೂ. ಗೂ ಅಧಿಕ ಹಣವನ್ನು ವಿವಿಧ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟಿದ್ದಾಗಿ ತಿಳಿದು ಬಂದಿದೆ.
ಇಷ್ಟೋಂದು ಹಣವನ್ನು ಹೊಂದಿದ ವ್ಯಕ್ತಿಗೆ ಐಟಿ ಅಧಿಕಾರಿಗಳು ಪಿಎಂಜಿಕೆವೈ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದು, ಇದರಲ್ಲಿ ಹಣ ತೊಡಗಿಸುವಂತೆ ಸೂಚಿಸಿದ್ದಾರೆ. ಇದರ ಅಡಿ ಕಪ್ಪು ಹಣಕ್ಕೆ 49.9 ರದಂಡ ವಿಧಿಸಲಾಗುತ್ತದೆ. ಹಾಗೂ ಶೇ.25 ರಷ್ಟು ಹಣವನ್ನು ಆರ್ ಬಿಐ ನಾಲ್ಕು ವರ್ಷಗಳ ಕಾಲ ಠೇವಣಿ ಇಟ್ಟುಕೊಳ್ಳುತ್ತದೆ. ಈ ಠೇವಣಿಗೆ ಆರ್ಬಿಐ ಬಡ್ಡಿ ನೀಡುವುದಿಲ್ಲ. ಈ ಯೋಜನೆ ಹೊರತು ಪಡಿಸಿ ಸಾಮಾನ್ಯ ಪ್ರಕ್ರಿಯೆಯಲ್ಲಿ ಹಣ ತೊಡಗಿಸಿದಲ್ಲಿ 77.9 ರಷ್ಟು ದಂಡ ಕಟ್ಟಬೇಕಾಗುತ್ತದೆ.
ಒಂದು ವೇಳೆ ಐಟಿ ದಾಳಿ ವೇಳೆ ಕಪ್ಪು ಹಣ ಸಿಕ್ಕಿದರೆ, ದಂಡ ಮತ್ತು 7 ವರ್ಷ ಜೈಲು ಶಿಕ್ಷೆ ವಿಧಿಸುವದಾಗಿ ಇಲಾಖೆ ತಿಳಿಸಿದೆ.