ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಇಂದಿಗೆ ಅಂತ್ಯವಾಗಲಿದೆ; ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಂಜನ್ ಗೋಗೊಯಿ ಸ್ಪಷ್ಟನೆ.!

0
114

ಬಹುದಿನಗಳಿಂದ ವಿವಾದ ಸೃಷ್ಟಿಸಿ ಇಡಿ ದೇಶದಲ್ಲಿ ಶಾಂತಿಯನ್ನು ಕದಲಿದ ಅಯೋಧ್ಯೆ ಭೂ ವಿವಾದ ಕೊನೆಗೂ ಮುಕ್ತಾಯದ ಹಂತ ತಲುಪಿದ್ದು, 40 ದಿನಗಳಿಂದ ನಿರಂತರ ವಿಚಾರಣೆಗೆ ಒಳಗಾಗುವ ಮೂಲಕ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಯೋಧ್ಯೆ ಭೂ ವಿವಾದವನ್ನು ಸುಪ್ರೀಂ ಕೋರ್ಟ್ ಇಂದು ಸಂಜೆ.5 ಗಂಟೆಯ ವೇಳೆಗೆ ತನ್ನ ವಿಚಾರಣೆಯನ್ನು ಮುಗಿಸಲಿದೆ. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯಿ ಬುಧವಾರ ಸ್ಪಷ್ಟಪಡಿಸಿದ್ದಾರೆ.

ಅಂತ್ಯವಾಗಲಿದೆ ಅಯೋಧ್ಯೆ ವಿವಾದ?

ಹೌದು ಅಕ್ಟೋಬರ್ 16ರಂದೇ ಅಯೋಧ್ಯೆ ಪ್ರಕರಣದ ವಾದ, ಪ್ರತಿವಾದ ಅಂತ್ಯಗೊಳಿಸಲು ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿರುವ ಸುಪ್ರೀಂಕೋರ್ಟ್ ಸಿಜೆಐ, ಅಯೋಧ್ಯೆ ವಿವಾದ ಕುರಿತ ಅಂತಿಮ ತೀರ್ಪು ಬರೆಯಲು ಸಮಯಾವಕಾಶ ಸಾಕಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ. ಅಯೋಧ್ಯೆ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಮಾತುಕತೆ ಮೂಲಕ ನಡೆಸಿದ ಸಂಧಾನ ನಡೆಸಲು ಸುಪ್ರೀಂಕೋರ್ಟ್ ನ ಪಂಚಸದಸ್ಯ ಸಾಂವಿಧಾನಿಕ ಪೀಠ ಮಧ್ಯಸ್ಥಿಕೆ ಸಮಿತಿಯನ್ನು ನೇಮಕ ಮಾಡಿತ್ತು. ಆದರೆ ಸಂಧಾನ ಮಾತುಕತೆ ವಿಫಲವಾಗಿತ್ತು. ನಂತರ ಸಮಿತಿ ಸುಪ್ರೀಂಕೋರ್ಟ್ ಗೆ ವರದಿಯನ್ನು ಸಲ್ಲಿಸಿತ್ತು.

ಅಯೋಧ್ಯೆ ಭೂ ವಿವಾದಕ್ಕೆ 134 ವರ್ಷಗಳ ಕಾನೂನು ಹೋರಾಟದ ಇತಿಹಾಸವಿದೆ. ಆದರೆ, ರಾಮಜನ್ಮ ಭೂಮಿಗೆ ಒತ್ತಾಯಿಸಿ 1992 ಡಿಸೆಂಬರ್ 6 ರಂದು ರಾಮ ಕರಸೇವಕರು ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದರು. ಪರಿಣಾಮ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಕೋಮುಗಲಭೆಗೆ ಇದು ಕಾರಣವಾಗಿತ್ತು. ಹೀಗಾಗಿ ದೀರ್ಘ ಕಾಲ ಈ ಕುರಿತು ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿತ್ತು.

ಇಂದು ಸಂಜೆ 5ಗಂಟೆಯೊಳಗೆ ಈ ವಿಚಾರಣೆ ಅಂತ್ಯಗೊಳ್ಳಬೇಕು. ಈ ವಿಚಾರಣೆ ಸಾಕು ಎಂದು ಸಿಜೆಐ ಗೋಗೊಯಿ ತಿಳಿಸಿದ್ದಾರೆ. ಜಸ್ಟೀಸ್ ಗಳಾದ ಎಸ್.ಎ ಬೋಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್ ಎ ನಝೀರ್ ಅವರನ್ನೊಳಗೊಂಡ ಪೀಠ 40ನೇ ದಿನದ ವಿಚಾರಣೆ ನಂತರ ಕೊನೆಯ ಪ್ರಕ್ರಿಯೆ ಆರಂಭಿಸಲಿದೆ ಎಂದು ವರದಿ ತಿಳಿಸಿದೆ. ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ಅತೀ ಸೂಕ್ಷ್ಮವಾಗಿರುವ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪ್ರಕರಣದ ವಿವಾದದ ವಿಚಾರಣೆ ಅಕ್ಟೋಬರ್ 16ರಂದು ಮುಕ್ತಾಯಗೊಳ್ಳಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ಅವರು ನವೆಂಬರ್ 17ರಂದು ಸೇವೆಯಿಂದ ನಿವೃತ್ತಿಯಾಗಲಿದ್ದು, ಅದಕ್ಕೂ ಮುನ್ನ ಐತಿಹಾಸಿಕ ತೀರ್ಪನ್ನು
ಪ್ರಕಟಿಸುವ ಸಾಧ್ಯತೆ ಇದೆ ಎಂದು ಹಲವು ವರದಿಗಳು ವಿಶ್ಲೇಷಿಸಿವೆ.

ಕಳೆದ ತಿಂಗಳ ವಿಚಾರಣೆ ಸಂದರ್ಭದಲ್ಲಿ ಅಯೋಧ್ಯೆ ವಿವಾದದ ವಿಚಾರಣೆಯನ್ನು ಅಕ್ಟೋಬರ್ 18ರೊಳಗೆ ಮುಕ್ತಾಯಗೊಳಿಸುವಂತೆ ಉಭಯ ಪಕ್ಷಗಳ ವಕೀಲರಿಗೆ ಸಿಜೆಐ ಗೋಗೊಯಿ ಸೂಚನೆ ನೀಡಿದ್ದರು. ಒಂದು ವೇಳೆ ಅಗತ್ಯವಿದ್ದರೆ ಪ್ರತಿ ದಿನ ಒಂದು ಗಂಟೆ ಹೆಚ್ಚುವರಿ ವಿಚಾರಣೆ ನಡೆಸಲು ಸಿದ್ಧ ಎಂದು ಸುಪ್ರೀಂ ಪೀಠ ಅಭಿಪ್ರಾಯವ್ಯಕ್ತಪಡಿಸಿತ್ತು, ಅಕ್ಟೋಬರ್ 16ರಂದೇ ಅಯೋಧ್ಯೆ ಪ್ರಕರಣದ ವಾದ, ಪ್ರತಿವಾದ ಅಂತ್ಯಗೊಳಿಸಲು ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿರುವ ಸುಪ್ರೀಂಕೋರ್ಟ್ ಸಿಜೆಐ, ಅಯೋಧ್ಯೆ ವಿವಾದ ಕುರಿತ ಅಂತಿಮ ತೀರ್ಪು ಬರೆಯಲು ಸಮಯಾವಕಾಶ ಸಾಕಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.

Also read: ಮತ್ತೆ ಉತ್ತರ ಕರ್ನಾಟಕದಲ್ಲಿ ಮೋಡಬಿತ್ತನೆ ಮಾಡುತ್ತಿರುವ ಹುಚ್ಚು ಸರ್ಕಾರ; ಹಣದ ಆಸೆಗೆ ನೆರೆ ಸಂತ್ರಸ್ತ ಜೀವನದ ಜೊತೆಗೆ ಆಟವಾಡುತ್ತಿರುವ ಸರ್ಕಾರದ ನಡೆ ಸರಿಯಾ??