ಭತ್ತದ ಬೆಳೆಯಲ್ಲಿ ವಿಶೇಷ ಅಭಿಮಾನ ಮೆರೆದ ಅಂಬಿ ಅಭಿಮಾನಿಗಳು; ಈ ಅಭಿಮಾನಕ್ಕೆ ಚಿತ್ರರಂಗದ ಹಲವರ ಪ್ರತಿಕ್ರಿಯೆ ಹೇಗಿದೆ ನೋಡಿ..

0
395

ರೆಬೆಲ್ ಸ್ಟಾರ್ ಅಂಬರೀಶ್ ಎಂದರೆ ಅದೇನೋ ಅಭಿಮಾನ. ಅಂಬಿ ವಿಧಿವಶರಾದ್ದಾಗ ಅಂತು ಇಡಿ ರಾಜ್ಯವೇ ದುಖದಲ್ಲಿ ಮುಳುಗಿತ್ತು ಅದೆಷ್ಟು ಜನ! ಅದೆಷ್ಟು ಅಭಿಮಾನ ಹೇಳಲು ನೋಡಲು ಸಾಧ್ಯವಾಗದಷ್ಟು ಪ್ರೀತಿ ಅಂಬಿಯವರ ಅಂತಿಮ ನಮನದಲ್ಲಿತ್ತು. ಅದಕ್ಕೆ ಅವರನ್ನು ಕಲಿಯುವ ಕರ್ಣ ಎಂದೇ ಕನ್ನಡ ಚಿತ್ರರಂಗದ ಕರೆಯುತ್ತಿತು. ಹಾಗೆಯೇ ಅವರ ಅಭಿಮಾನಿಗಳು ಅಂತು ಎಂತಹದೇ ಕೆಲಸ ಇದ್ದರು ಮಾಡುತ್ತಾರೆ ಅದಕ್ಕೆ ಸಾಕ್ಷಿ ಎಂದರೆ ಅಂಬಿ ನಮ್ಮನು ಅಗಲಿ 3 ತಿಂಗಳು ಆಗುವಲ್ಲಿ ರೈತರೊಬ್ಬರು ಅಭಿಮಾನ ಸೂಚಿಸಿರುವುದು ನೋಡಿದರೆ ಅಂಬಿ ಮತ್ತೆ ಹುಟ್ಟಿ ಬರುವುದಲ್ಲಿ ಅನುಮಾನವೇ ಇಲ್ಲ ಅನಿಸುತ್ತೆ.

Also read: ಬಾಹುಬಲಿಯ ರೆಕಾರ್ಡ್-ಅನ್ನು ಮೀರಿ ಇನ್ನೂ ಮುನ್ನುಗುತ್ತಿದೆ ನಮ್ಮ ಕೆ.ಜಿ.ಎಫ್!! ಇನ್ಮುಂದೆ ಯಾರೂ ಕನ್ನಡ ಸಿನಿಮಾವನ್ನು ಹೀಯಾಳಿಸುವಂತಿಲ್ಲ!!

ಹೌದು ರೆಬೆಲ್ ಸ್ಟಾರ್ ಅಂಬರೀಷ್ ಭೌತಿಕವಾಗಿ ನಮ್ಮನ್ನು ಅಗಲಿರಬಹುದು, ಆದರೆ, ಅವರು ಕನ್ನಡಿಗರ ಮನೆ, ಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅದರಲ್ಲೂ ಸಕ್ಕರೆ ನಾಡಿನ ಅಚ್ಚು ಮೆಚ್ಚಿನ ಅಣ್ಣನಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಮಂಡ್ಯದ ಅಭಿಮಾನಿಗಳು ಅಂಬರೀಷ್ ಅವರ ದೈಹಿಕವಾಗಿ ಅಗಲಿ ಮೂರು ತಿಂಗಳುಗಳೇ ಆಗುತ್ತಿರುವ ಈ ಹೊತ್ತಿನಲ್ಲಿ ಕೆಲ ಅಭಿಮಾನಿಗಳು ಇಂದು ಅಂಬಿಗಾಗಿ ವಿಶೇಷ ಅಭಿಮಾನ ಮೆರೆದಿದ್ದಾರೆ. ಆ ಅಭಿಮಾನ ಹೇಗಿದೆ ಅಂದರೆ ನೋಡಿದರೆ ಇನ್ನೂ ರೆಬೆಲ್ ಜೀವಂತವಾಗಿ ಇದ್ದಾರೆ ಅನಿಸುತ್ತೆ.

ಭತ್ತದ ಪೈರಿನಲ್ಲಿ ಅಂಬಿ ಅಭಿಮಾನ

ಅಂಬರೀಷ್ ಅಭಿಮಾನಿಗಳು ವಿಶಿಷ್ಠ ರೀತಿಯಲ್ಲಿ ತಮ್ಮ ಅಭಿಮಾನ ಮೆರೆಯುತ್ತಿದ್ದು, ಭತ್ತದ ಪೈರಿನಲ್ಲೂ ಮತ್ತೆ ಹುಟ್ಟಿ ಬಾ ಅಂಬರೀಷ್ ಅಣ್ಣ ಎಂದು ಸಾರಿ ಹೇಳುತ್ತಿದೆ. ತಾಲೂಕಿನ ಮೊತ್ತಹಳ್ಳಿ ಗ್ರಾಮದ ಎಂ.ಪಿ. ಹರ್ಷಿತ್, ರಾಜು ಕಾಳಪ್ಪ, ಎಂ. ಜೆ. ದಿಲೀಪ್ ಕುಮಾರ್ ಸಹೋದರರು ತಮ್ಮ ಗದ್ದೆಯಲ್ಲಿ ಭತ್ತದ ಬಿತ್ತನೆ ಬೀಜ ಬಿತ್ತುವ ಮೂಲಕವೇ ಅಂಬರೀಷ್ ಮೇಲಿನ ಅಭಿಮಾನ ಮೆರೆದಿದ್ದಾರೆ. ಬೇಸಿಗೆ ಬೆಳೆಗೆ ಕಳೆದ 15 ದಿನಗಳ ಹಿಂದೆ ಗದ್ದೆಯಲ್ಲಿ ಭತ್ತದ ಹೊಟ್ಟಲು ಹಾಕಿದ್ದಾರೆ. ಗದ್ದೆಯ ನಡುವೆ ಹೃದಯಾಕಾರದಲ್ಲಿ ಮತ್ತೆ ಹುಟ್ಟಿ ಬಾ ಅಂಬರೀಷ್ ಅಣ್ಣಾ ಎಂದು ಬರೆದು ಬಿತ್ತನೆ ಬೀಜ ಬಿತ್ತಿದ್ದಾರೆ. ಈಗ ಪೈರು ಮೇಲಕ್ಕೆ ಬೆಳೆದು ಬಂದಿದ್ದು, ಅಂಬರೀಷ್ ಮೇಲಿನ ಅಭಿಮಾನವನ್ನು ಸಾಕ್ಷಿಕರಿಸುತ್ತಿದೆ. ಇವರು ಅಂಬರೀಷ್ ಪುಣ್ಯತಿಥಿಯ ದಿನ ಕೇಶಮುಂಡನ ಮಾಡಿಸಿಕೊಂಡು ಶ್ರದ್ದಾಂಜಲಿ ಸಲ್ಲಿಸಿದ್ದರು.

ಟ್ವೀಟರ್ ನಲ್ಲಿ ಸುಮಲತಾ ಪೋಸ್ಟ್

ಅಂಬರೀಷ್ ಪತ್ನಿ ಸುಮಲತಾ ಟ್ವೀಟರ್ ನಲ್ಲಿ ಈ ಚಿತ್ರಗಳನ್ನು ಪ್ರಕಟಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಶಾಶ್ವತ ಪ್ರೇಮ, ಅಭಿಮಾನ ತೋರಿಸಲು ಎಂತಹ ಸುಂದರ ಅಭಿವ್ಯಕ್ತಿ, ಮನಸ್ಸು ತುಂಬಿ ಬಂದಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೇ ಖ್ಯಾತ ನಟ ಸುದೀಪ್ ಸಹ ರೇಟ್ವೀಟ್ ಮಾಡಿವ ಮೂಲಕ ಅಂಬಿ ಮಾಮ ಹಸಿರಾದರು ಎಂದು ಸಂತಸ ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಅಂಬರೀಶ್ ಅವರು ಎಮ್ಮನೆಲ್ಲ ಅಗಲಿದರು ಅವರ ಅಭಿಮಾನ ಮಾತ್ರ ದಿನದಿಂದ ದಿನಕ್ಕೆ ವಿಬ್ಬಿನ ರೀತಿಯಲ್ಲಿ ಅಭಿಮಾನ ತೋರಿಸಿ ಕೊಡುತ್ತಿದ್ದಾರೆ. ಇನ್ನೂ ಅವರ ಅಗಲಿಕೆಯ ದಿನಗಳನ್ನು ಲೆಕ್ಕಹಾಕುತ್ತ ಪ್ರತಿದೀನವೂ ಪೂಜಿಸುತ್ತಾ ಅಂಬಿ ಅಣ್ಣ ಮತ್ತೆ ಹುಟ್ಟಿ ಬಾ ಎಂದು ಹಾರೈಸುತ್ತಿದ್ದಾರೆ.

Also read: ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಲಿರುವ ಚಿತ್ರ ‘ನಟ ಸಾರ್ವಭೌಮ’; ಕೆಲವೇ ಕ್ಷಣಗಳಲ್ಲಿ ಟಿಕೆಟ್ ಸೋಲ್ಡ್ ಔಟ್..