ಪ್ರೀತಿ ಎಂದರೆ ಇದೆ ಅನಿಸುತ್ತೆ; ಹುತಾತ್ಮ ಮೇಜರ್​​ ಮಡದಿ ಗಂಡನ ಕನಸ್ಸನ್ನು ನನಸಾಗಿಸಲು ಪತಿ ಧರಿಸುತ್ತಿದ್ದ ಯೂನಿಫಾರಂನ್ನೇ ಧರಿಸುವ ಮೂಲಕ ಸೇನೆಗೆ ಸೇರಿದರು..

0
692

ಈ ಕಥೆಯನ್ನು ಅಮರ ಪ್ರೇಮ ಎಂದು ಕರೆಯಬೇಕೋ ಇಲ್ಲ ದೇಶ ಪ್ರೇಮವೆಂದು ಕರೆಯಬೇಕೋ ಯಾರಿಗೂ ತಿಳಿಯದಾಗಿದೆ. ಪ್ರೀತಿ ಹೇಗೆ ಹುಟ್ಟುತೆ ಅಂತ ತಿಳಿದರು ಹೇಗೆ ಸಾಯುತ್ತೆ ಅಂತ ಅಷ್ಟು ಸರಳವಾಗಿ ಲೆಕ್ಕಕ್ಕೆ ಸಿಗದು, ಇಂತಹದೊಂದು ಬೆಲೆ ಕಟ್ಟಲಾಗದ ಪ್ರೇಮಕತೆ ಕೇಳಿದರೆ ಎಲ್ಲರ ಕಂಬನಿ ಮಿಡಿಯುತ್ತೆ. ದೇಶ ಸೇವೆಯಲ್ಲಿರುವ ಗಂಡ ಮದುವೆಯಾಗಿ ಎರಡೇ ವರ್ಷದಲ್ಲಿ ಕಳೆದುಕೊಂಡರೆ ಮಡದಿಯ ಯಾತನೆ ಹೇಗೆ ಇರುತ್ತೆ ಅಂತ ವಿವರಿಸಲು ಸಾಧ್ಯವಾಗದು, ಕೆಲವರು ಜೀವನ ಪೂರ್ತಿ ನೆನಪಲ್ಯ ಕೊರಗಿ ಸತ್ತರೆ ಇನ್ನೂ ಕೆಲವರು ದೇಶಕ್ಕಾಗಿ ಪ್ರಾಣ ಬಿಟ್ಟ ಗಂಡ ಆತ್ಮಕ್ಕೆ ಶಾಂತಿ ಸಿಗಲೆಂದು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುತ್ತಾರೆ. ಆದರೆ ಇಲ್ಲೊಬ್ಬ ಹೆಮ್ಮೆಯ ಮಹಿಳೆ ಗಂಡನ ಆತ್ಮಕ್ಕೆ ಶಾಂತಿ ಸಿಗಲೆದ್ದು ಸೇನೆ ಸೇರಿದ ಕತೆ ಹೇಗಿದೆ ನೋಡಿ.

2017ರ ಡಿಸೆಂಬರ್​ನಲ್ಲಿ ಇಂಡೋ- ಚೀನಾ ಗಡಿಯಲ್ಲಿ ಕ್ಯಾಂಪ್​ನಲ್ಲಿ ಘಟಿಸಿದ ಅಗ್ನಿ ಅವಘಡದಲ್ಲಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್​ ಗಣೇಶ್​ ಮಹಾದಿಕ್ ಹುತಾತ್ಮರಾಗಿದ್ದರು ಈ ವಿಷಯ ದೇಶದ ತುಬೆಲ್ಲ ಬಾರಿ ಚರ್ಚೆಗೆ ಒಳಗಾಗಿತ್ತು. ಆಗ ಗಣೇಶ್ ಅವರಿಗೆ ಗೌರಿ ಎನ್ನುವರ ಜೊತೆ ಮದುವೆಯಾಗಿ ಬರಿ ಎರಡು ವರ್ಷ ಅಷ್ಟೇ. ಸೇನೆಯಲ್ಲಿರುವ ಕಾರಣ ವರ್ಷದಲ್ಲಿ ಎರಡು ಬಾರಿ ಮನೆಗೆ ಬರುತ್ತಿದ್ದ ಗಣೇಶ್ ಮಡಿ ಗೌರಿಯ ಜೊತೆ ಜೀವನ ಸಾಗಿಸಿದ ದಿನಗಳು, ಕಳೆದ ಕ್ಷಣಗಳು ಬೆರಳೆಣಿಕೆಯಷ್ಟು ಮಾತ್ರ. ಆದರೆ, ಆ ಎಲ್ಲ ನೆನಪುಗಳನ್ನೂ ಎದೆಯಲ್ಲಿ ಬೆಚ್ಚಗೆ ಬಚ್ಚಿಟ್ಟುಕೊಂಡು ಗಂಡನ ಕನಸನ್ನು ಮುನ್ನಡೆಸಿಕೊಂಡು ಹೋಗಲು ಹಠ ತೊಟ್ಟ ಗೌರಿಯ ಮನೋಸ್ಥೈರ್ಯ ಎಂಥವರ ಮನಸನ್ನೂ ಕರಗಿಸುತ್ತದೆ.

ಏಕೆಂದರೆ ಗಂಡನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮತ್ತು ತನ್ನ ಗಂಡನಿಗೆ ಸೇನೆಯಲ್ಲಿ ಹೆಚ್ಚು ದಿನ ಸೇವೆ ಸಲ್ಲಿಸಲು ಅವಕಾಶ ಸಿಗಲೇ ಇಲ್ಲ. ಎಂದು ಸ್ವತಹ ಗೌರಿ ನಾನೂ ಸೇನೆಗೆ ಸೇರಿ ಅವರ ಉದ್ದೇಶವನ್ನು ಪೂರ್ಣಗೊಳಿಸಬೇಕೆಂದು ನಿರ್ಧರಿಸಿದೆ. ಹಾಗಾಗಿಯೇ 2 ವರ್ಷಗಳ ಹಿಂದೆ ಎಸ್​ಎಸ್​ಬಿ ಪರೀಕ್ಷೆ ತೆಗೆದುಕೊಂಡೆ. ಮೊದಲ ಪ್ರಯತ್ನದಲ್ಲಿ ಫೇಲಾದೆ. ಈಗ ನಾನು ತೇರ್ಗಡೆಯಾಗಿದ್ದೇನೆ. ಇನ್ನೂ 49 ವಾರಗಳ ಕಾಲ ಚೆನ್ನೈನಲ್ಲಿ ನನಗೆ ತರಬೇತಿ ನೀಡಲಾಗುತ್ತದೆ. ಮುಂದಿನ ವರ್ಷ ನಾನು ಸೇನೆಗೆ ಸೇರಿಕೊಳ್ಳಲಿದ್ದೇನೆ. ಅವರ ಯೂನಿಫಾರಂ ಧರಿಸಿ, ಅವರ ಸ್ಟಾರ್​ಗಳನ್ನು ಧರಿಸಿ ನಾನೇ ಅವರಾಗಿ ಬಾಳಲಿದ್ದೇನೆ. ಅದಕ್ಕಿಂತಲೂ ಖುಷಿಯ ವಿಷಯ ಬೇರೇನಿದೆ? ನನ್ನ ಈ ನಿರ್ಧಾರವನ್ನು ನೋಡಿ ಗಣೇಶ್​ ಕೂಡ ಹೆಮ್ಮೆ ಪಡುತ್ತಿರುತ್ತಾರೆ’ ಎಂದು ಭಾವುಕರಾಗುತ್ತಾರೆ ಗೌರಿ ಮಹಾದಿಕ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

Also read: ಪ್ರೇಮಿಗಳು ಓದಲೇ ಬೇಕಾದ ಸ್ಟೋರಿ; ಲವ್ ಮಾಡಿ ಮದುವೆಯಾದ ಒಂದೇ ವರ್ಷದಲ್ಲಿ ಹೆಂಡತಿಗೆ ಕ್ಯಾನ್ಸರ್ ಆದರೆ ಈ ವೇಳೆ ಪ್ರಿಯತಮ ತೋರಿಸುವ ಪ್ರೀತಿ ಹೇಗಿದೆ ನೋಡಿ..

ಅಮರ ಪ್ರೀತಿ ಹುಟ್ಟಿದ ಗೌರಿಯ ನೆನಪು;

ಗಣೇಶ್ ಅವರಿಗೆ ಮದುವೆ ಮಾಡಲು ಹುಡುಗಿ ನೋಡುತ್ತಿದರು ಆಗ ಮ್ಯಾಟ್ರಿಮೊನಿಯಲ್ಲಿ ಭೇಟಿಯಾಗಿ ನಮ್ಮ ಪ್ರೀತಿಯಾಯಿತು. ನಾವು ಬೇಟಿಯಾಗಬೇಕು ಅಂತ ನಿರ್ಧಾರ ಮಾಡಿ 2014ರ ಫೆಬ್ರವರಿ 22 ರಂದು ಮೊದಲ ಬಾರಿ ಬೇಟಿಯಾದವಿ. ನಾನು ಹಲವು ಹುಡುಗರನ್ನು ನೋಡಿದ್ದೇ ಆದರೆ, ಈ ಹುಡುಗ ಯಾಕೋ ತುಂಬಾ ಇಷ್ಟವಾಗಿದ್ದ. ಆದರೆ, ಅಲ್ಲಿಗೆ ಹೋದಮೇಲೇ ಗೊತ್ತಾಗಿದ್ದು ಆತ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್​ ಆಗಿದ್ದಾನೆ ಅಂತ. ಆ ಕ್ಷಣ ನನಗೆ ದೊಡ್ಡ ಶಾಕ್​ ಆಯಿತು! ಏಕೆಂದರೆ ನಮ್ಮ ಮನೆಯವರ ಕಲ್ಪನೆಯ ಹುಡುಗ ಬೇರೆಯೇ ಆಗಿದ್ದ. ಗಣೇಶ್ ತನ್ನ ಕೆಲಸದ ಬೆಗ್ಗೆ ಮತ್ತು ಕಮಿಟ್​ಮೆಂಟ್​ಗಳೆಲ್ಲವನ್ನೂ ಹೇಳಿಕೊಂಡು ಹಿಂಜರಿಕೆಯಿಂದಲೇ ಪ್ರಪೋಸ್​ ಮಾಡಿದ ನಾನು ಒಂದು ಕ್ಷಣ ಯೋಚಿಸಿದ ಖಂಡಿತವಾಗಿ ನಿಮ್ಮನ್ನು ಮದುವೆಯಾಗ್ತೀನಿ ಕ್ಯಾಪ್ಟನ್​! ಎಂದೇ.

Also read: ಚಲಿಸುವ ರೈಲಿನಲ್ಲಿ ತುಂಬು ಗರ್ಭಿಣಿಯ ಹೆರಿಗೆ ಮಾಡಿಸಿದ ಈ ಇಬ್ಬರು ನರ್ಸ್-ಗಳನ್ನು ಎಷ್ಟು ಹೋಗಳಿದರೂ ಸಾಲದು!!

ನಂತರ ಮನೆಯಲ್ಲಿ ಮಾತುಕತೆ ನಡೆಯಿತು ಅಲ್ಲಿ ನಮ್ಮ ಮನೆಯರು ವಿರೋಧ ವ್ಯಕ್ತಪಡಿಸಿದರು. ಅವರಿಗೆ ಸಮಾಧಾನ ಹೇಳಿ ‘ಬೇರೆ ಯಾರೋ ಸಾಮಾನ್ಯನನ್ನು ಮದುವೆಯಾದರೆ ಆತ ಕೊನೆಯವರೆಗೂ ನನ್ನ ಜೊತೆಯಲ್ಲೇ ಇರುತ್ತಾನೆ ಎಂದು ಯಾವ ಗ್ಯಾರಂಟಿಯಿದೆ? ಅದೇ ಕೋಟ್ಯಂತರ ಜನರ ಸುರಕ್ಷತೆಗಾಗಿ ದೇಶದ ಗಡಿ ಕಾಯುವ ಸೈನಿಕನನ್ನು ಮದುವೆಯಾದರೆ ಆತ್ಮತೃಪ್ತಿಯಾದರೂ ಇರುತ್ತದೆ’ ಎಂದು ಹೇಳಿದೆ. ಗಣೇಶ್​ ಅವರ ತಂದೆ ಕೂಡ ‘ನನ್ನ ಮಗನಿಗೆ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಯೋಚಿಸಿ ನಿರ್ಧಾರ ತೆಗೆದುಕೋ’ ಎಂದು ಹೇಳಿದ್ದರು. ಆದರೆ, ನನ್ನ ನಿರ್ಧಾರ ಮಾತ್ರ ಗಟ್ಟಿಯಾಗಿತ್ತು.

ನೆನಪುಗಳ ಜೊತೆ ನನ್ನ ಜೀವನ;

Also read: ಹುತಾತ್ಮ ಯೋಧ ಗುರು ಅವರ ಗರ್ಭಿಣಿ ಪತ್ನಿ ಕಲಾವತಿಯ ಹೊಟ್ಟೆಯಲ್ಲಿ ಗಂಡು ಮಗು ಹುಟ್ಟಿದರೆ ಸೈನ್ಯೆಕ್ಕೆ ಕಳುಹಿಸುತ್ತಾರೆ ಅಂತೆ ಈ ಮಾಹಾತಾಯಿ..

ಕ್ಯಾಪ್ಟನ್​ ಗಣೇಶ್​ ಸಾಯುವ ಹಿಂದಿನ ದಿನ ಸಂಜೆ ಗೌರಿಗೆ ಕರೆ ಮಾಡಿದ್ದರು. ಆಗ ಯಾವುದೋ ಕಾರಣಕ್ಕೆ ಅವರಿಬ್ಬರ ನಡುವೆ ವಾಗ್ವಾದವೂ ನಡೆದಿತ್ತು ಎಂದು ನೆನಪಿಸಿಕೊಳ್ಳುವ ಗೌರಿ, ‘ಅವರೊಂದಿಗೆ ಕಳೆದ ಪ್ರತಿಕ್ಷಣವನ್ನೂ ನಾನು ದಾಖಲು ಮಾಡಿಟ್ಟುಕೊಂಡಿದ್ದೇನೆ. ನಾನು ಅವರೊಂದಿಗೆ ಕಳೆದ ದಿನಗಳು ಬಹಳ ಕಡಿಮೆಯೇ ಆಗಿರಬಹುದು. ಆದರೆ, ಅವರು ಮನೆಯಲ್ಲಿದ್ದಾಗ ನಾನು ಕ್ಲಿಕ್ಕಿಸಿಕೊಂಡ 36 ಸಾವಿರಕ್ಕೂ ಹೆಚ್ಚು ಫೋಟೋಗಳು ನನ್ನ ಬಳಿ ಭದ್ರವಾಗಿವೆ. ನಮ್ಮಿಬ್ಬರ ಮಾತುಗಳನ್ನು ನಾನು ರೆಕಾರ್ಡ್​ ಮಾಡಿಟ್ಟಕೊಳ್ಳುತ್ತಿದ್ದೆ. ಹಾಗಾಗಿ, ಅವರ ನೆನಪು ಬಂದಾಗಲೆಲ್ಲ ಆ ರೆಕಾರ್ಡಿಂಗ್​ ಕೇಳುತ್ತೇನೆ. ಆಗೆಲ್ಲ ಅವರು ಈಗಲೂ ಜೀವಂತವಾಗಿದ್ದಾರೆ, ಐ ಲವ್​ ಯೂ ಎನ್ನುತ್ತ ನನ್ನನ್ನು ಸಂತೈಸುತ್ತಿದ್ದಾರೆ ಎಂದು ಸಮಾಧಾನವಾಗುತ್ತದೆ. ಕೊನೆಯವರೆಗೂ ಅವರೊಂದಿಗೆ ಕಳೆದ ನೆನಪುಗಳ ಜೊತೆಗೆ ಜೀವನ ಕಳೆಯುತ್ತೇನೆ’ ಈಗ ಅವರಂತೆ ಕೆಲಸ ಮಾಡಿತ್ತೇನೆ ಇದು ನನಗೆ ಹೆಮ್ಮೆಯಾಗುತ್ತೆ ಎನ್ನುತ್ತಾರೆ ಗೌರಿ.