ಏನು ಅನ್ಯಾಯ ಮಾಡಿದ್ದವು ಈ ಪುಟ್ಟ ಕಂದಮ್ಮಗಳು.. ಈ ಪೈಶಾಚಿಕ ಕೃತ್ಯವನ್ನು ನೋಡಿದರೆ ನಿಮ್ಮ ರಕ್ತ ಕುದಿಯುತ್ತದೆ

0
645

Kannada News | Karnataka News

ದೇವರಂತಿರುವ ಕಂದಮ್ಮಗಳು ಸತ್ತಿರಬಹುದು.. ಆದರೆ ನಿಜ ದೇವರು ಬಿಡುವನೇ ನಿಮ್ಮನು???

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ.. ಉಗ್ರ ಸಂಘಟನೆಯ ಪೂರ್ವ ಸಿರಿಯಾದಲ್ಲಿ ಕೊನೆಯ ಕೇಂದ್ರದ ಮೇಲೆ ನಡೆಸಲಾಗಿರುವ ವೈಮಾನಿಕ ಬಾಂಬ್ ದಾಳಿಯಲ್ಲಿ 7 ಮಕ್ಕಳು ಸೇರಿದಂತೆ 25 ಸಾರ್ವಜನಿಕರು ಮೃತ ಪಟ್ಟಿರುವುದಾಗಿ ಸಿರಿಯಾದ ಮಾನವ ಹಕ್ಕುಗಳ ವಿಚಕ್ಷಣ ಸಂಸ್ಥೆ ತಿಳಿಸಿದೆ..

ಇರಾಕ್ ಗಡಿ ಸಮೀಪದಲ್ಲಿ ಇಸಿಸ್ ಉಗ್ರ ಅಲ್ಬುಕಮಲ್ ನ ಹಿಂದಿನ ಭದ್ರಕೋಟೆಯ ಉತ್ತರಕ್ಕಿರುವ ಅಲ್ ಶ ಫಾ ಗ್ರಾಮದ ಮೇಲೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬಾನುವಾರ ಅಮೇರಿಕಾ ನೇತೃತ್ವ ಒಕ್ಕೂಟಗಳು ವೈಮಾನಿಕ ಬಾಂಬ್ ದಾಳಿ ನಡೆಸಲಾಗಿದೆ ಎಂದು ವಿಚಕ್ಷಣಕಾರರು ತಿಳಿಸಿದ್ದಾರೆ..

ವೈಮಾನಿಕ ಬಾಂಬ್ ದಾಳಿಯಲ್ಲಿ 7 ಮಕ್ಕಳು ಸೇರಿದಂತೆ 25 ಮಂದಿ ಸಾವನಪ್ಪಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ..

ಏನೇ ಆಗಲಿ ಸತ್ತ ಪುಟ್ಟ ಮಕ್ಕಳು ಮತ್ತೆ ಹುಟ್ಟಿ ಬರುವರೆ?? ಉಗ್ರರು ಸೈನಿಕರ ನಡುವಿನ ಹೋರಾಟದಲ್ಲಿ ಮಡಿದ ಮಕ್ಕಳ ಸಾವಿಗೆ ಕಾರಣರಾದ ಪಾಪಿ ಸಂಘಟನೆಗೆ ನಮ್ಮದೊಂದು ಶಾಪವಿರಲಿ..

Also read: ಈ ಯುವತಿಗೆ ಪಾತ್ರೆ ತೊಳೆಯುವ ಸ್ಪಾಂಜ್ ತಿನ್ನುವ ಅಭ್ಯಾಸವಿದೆಯಂತೆ