ನೀವು ತುಂಬ ನಗುವಾಗ ಎಚ್ಚರ..! ಯಾಕೆ ಅಂದ್ರೆ ಬಾಯಿ ತುಂಬ ನಗುವಾಗ ಈ ಮಹಿಳೆಗೆ ಆಗಿದ್ದೇನು ಗೊತ್ತಾ..!

0
914

ಒಂದು ನಗು ನಮ್ಮ ಎಲ್ಲ ನೋವುಗಳನ್ನು ಮರೆಸುತ್ತೆ ಅನ್ನೋದು ಎಲ್ಲರಿಗು ಗೊತ್ತಿರುವ ವಿಚಾರ ಆದ್ರೆ ಅದೇ ನಗು ನಮ್ಮ ಜೀವನಕ್ಕೆ ಮುಳುವಾಗುತ್ತೆ ಅಂದ್ರೆ ನೀವು ನಂಬುತ್ತಿರಾ ಇಲ್ಲ ಅಡುಕೆ ಈ ಸ್ಟೋರಿ ನಿಮಗೆ ಗೊತಾಗುತ್ತೆ. ಜಾಸ್ತಿ ನಕ್ಕರೆ ಆರೋಗ್ಯಕ್ಕೆ ಒಳ್ಳೆಯದು, ಆಯಸ್ಸು ಹೆಚ್ಚುತ್ತೆ ಅಂತ ಎಲ್ಲರೂ ಹೇಳುತ್ತಾರೆ. ಆದರೆ ಆ ನಗುವೇ ನಿಮ್ಮನ್ನು ಮೃತ್ಯು ಕೂಪಕ್ಕೆ ತಳ್ಳಬಹುದು.

ಹೌದು ಒಂದು ನಗು ಒಬ್ಬ ಶಿಕ್ಷಕಿಯ ಪ್ರಾಣವನ್ನು ಕಿತ್ತುಕೊಂಡಿದೆ.ಅಮೆರಿಕಾದ ಮೆಕ್ಸಿಕೋ ನಗರದಲ್ಲಿ ಶಿಕ್ಷಕಿಯೊಬ್ಬರು ಜೋರಾಗಿ ನಗುತ್ತಾ ಆಯತಪ್ಪಿ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಚಾರ್ಲ್ಸ್ ಎ ಹುಸ್ಟನ್ ಮಿಡ್ಲೆ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿರುವ ಶಾರೋನ್ ರೆಗೋಲಿ ಸಿಫೆರ್ನೋ(50) ಸಾವನ್ನಪ್ಪಿದ ಶಿಕ್ಷಕಿ.

ಶಾರೋನ್ ಮೆಕ್ಸಿಕೋ ನಗರದ ಸ್ನೇಹಿತರ ಮನೆಗೆ ತನ್ನ ಮಗಳೊಂದಿಗೆ ಹೋಗಿದ್ದರು. ಈ ವೇಳೆ ಕಟ್ಟಡದ ಮೇಲೆ ನಿಂತು ಜೋರಾಗಿ ನಗುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ದೇಹ ಮತ್ತು ಮೆದುಳಿಗೆ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಶರೋನ್ ಕೊನೆಯುಸಿರೆಳೆದರು.

ಈ ಮದ್ಯೆ ತಮ್ಮ ಸ್ನೇಹಿತರ ಮನೆಗೆ ಹೋಗಿದ್ದ ಈ ಶಿಕ್ಷಕಿ ಮದ್ಯ ಸೇವನೆ ಮಾಡಿದ್ರು ಆದ್ರೆ ವೈದ್ಯರ ಪ್ರಕಾರ ಸಾವಿಗೆ ಬರೀ ಮದ್ಯಪಾನ ಮಾಡಿರುವುದು ಕಾರಣವಲ್ಲ. ಬಿಲ್ಡಿಂಗ್‍ನ ಅಂಚಿಗೆ ಹೋದಾಗ ಆಯತಪ್ಪಿ ಬಿದ್ದಳು. ಶಾರೋನಳನ್ನು ಕಳೆದುಕೊಂಡಿರುವುದರಿಂದ ನಮ್ಮ ಕುಟುಂಬದಲ್ಲಿ ದುಃಖ ಆವರಿಸಿದೆ ಎಂದು ಆಕೆಯ ಸಹೋದರ ಡೇವಿಡ್ ರೆಗೋಲಿ ದುಃಖ ಹಂಚಿಕೊಂಡಿದ್ದಾರೆ.