ಒಂದು ಚಿಕ್ಕ ಲವಂಗದಿಂದ ಹಲವು ರೋಗ ಮತ್ತು ಕೆಲ ಸಮಸ್ಯೆಗಳಿಗೆ ಈ ಲವಂಗ ರಾಮಬಾಣ..!

0
1760

ಹೌದು ಒಂದು ಚಿಕ್ಕ ಲವಂಗದಲ್ಲಿ ಹಲವು ರೀತಿಯ ಲಾಭಗಳಿವೆ ನಿಮ್ಮ ಮನೆಯಲ್ಲಿ ಉಪಯೋಗಿಸುವ ಲವಂಗ ನಿಮ್ಮ ಆರೋಗ್ಯದ ಜೊತೆ ನಿಮ್ಮ ಮನೆಯಲ್ಲಿ ಹಲವು ಸಮಸ್ಯೆಗಳನ್ನು ಈ ಲವಂಗ ಹೋಗಲಾಡಿಸುತ್ತೆ. ನೋಡಿ ಈ ಒಂದು ಚಿಕ್ಕ ಲವಂಗ ಏನೆಲ್ಲಾ ಕೆಲಸ ಮಾಡುತ್ತೆ ಅನ್ನೋದು ಇಲ್ಲಿದೆ ನೋಡಿ.

ಕೆಲವೊಮ್ಮೆ ಅತಿಯಾದ ಆಯಾಸದಿಂದ ಆಲಸ್ಯ ಬಂದುಬಿಡುತ್ತದೆ. ಅತಿಯಾದ ಸೋಮಾರಿತನ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ. ಆ ಸಮಯದಲ್ಲಿ ಲವಂಗದೆಣ್ಣೆಯನ್ನು ನೀವು ಸೇವಿಸುವ ಆರೋಗ್ಯಕರ ಪಾನೀಯದೊಂದಿಗೆ ಒಂದು ಹನಿ ಸೇರಿಸಿ ಸೇವಿಸಿ. ಇದರಿಂದ ಆಲಸ್ಯ ದೂರವಾಗಿ ಚೈತನ್ಯ ಮೂಡುತ್ತದೆ.

ರಕ್ತದೊತ್ತಡವನ್ನು ನಿವಾರಿಸಬಹುದು.
ಒಂದು ಹನಿ ಲವಂಗದೆಣ್ಣೆಯನ್ನು ದಾಲ್ಚಿನ್ನಿ ತೈಲ ಮತ್ತು ನೀರಿನೊಂದಿಗೆ ಮಿಶ್ರ ಮಾಡಿ ಮನೆಯಲ್ಲಿ ಇರುವೆಗಳು ಬಂದಾಗ ಸಿಂಪಡಿಸಿ. ಇದರಿಂದ ಇರುವೆಗಳ ಕಾಟದಿಂದ ಮುಕ್ತಿ ಪಡೆಯಬಹುದು.

ವಾಕರಿಕೆ:
ಕೆಲವರಿಗೆ ಪ್ರಯಾಣ ಮಾಡುವಾಗ ವಾಂತಿ ಮಾಡುವ ಸಮಸ್ಯೆ. ಇಲ್ಲದಿದ್ದರೆ ತಿಂದ ಆಹಾರ ಜೀರ್ಣವಾಗದೇ ಪಿತ್ತದಿಂದಾಗಿ ವಾಂತಿ ಬರುವಂತಾಗುತ್ತದೆ. ಇದಕ್ಕೆ ಲವಂಗವನ್ನು ಸೇವಿಸುವುದು ಉತ್ತಮ ಪರಿಹಾರ.

ಶೀತ:
ಸಾಮಾನ್ಯ ಶೀತಕ್ಕೆ ವೈದ್ಯರ ಬಳಿ ಹೋಗಬೇಕಾಗಿಲ್ಲ. ಹದ ಬಿಸಿ ನೀರಿಗೆ ಲವಂಗದ ಎಣ್ಣೆ ಹಾಕಿಕೊಂಡು ಕುಡಿದರೆ ಸಾಕು.

ಒತ್ತಡ:
ಲವಂಗ ಒತ್ತಡವನ್ನು ದೂರಮಾಡಿ ದೇಹವನ್ನು ಸಮಸ್ಥಿತಿಗೆ ತರುವ ಗುಣ ಹೊಂದಿದೆ. ಲವಂಗ, ಶುಂಠಿ, ಏಲಕ್ಕಿ ಮತ್ತು ಪುದಿನಾ ಬಳಸಿ ಚಹಾ ಮಾಡಿ ಸೇವಿಸಿ.

ಕೆಮ್ಮು:
ಕೆಲವು ಲವಂಗದ ತುಂಡನ್ನು ಬಾಯಿಗೆ ಹಾಕಿ ಜಗಿಯುವುದರಿಂದ ಗಂಟಲು ಬಿಟ್ಟುಕೊಂಡು ಬಿಡದೇ ಕಾಡುವ ಕೆಮ್ಮು ಕಡಿಮೆಯಾಗುವುದು.

ಲವಂಗದೆಣ್ಣೆಯನ್ನು ನೀರಿನೊಂದಿಗೆ ಮಿಶ್ರ ಮಾಡಿ ಅದನ್ನು ಮನೆಯಲ್ಲಿ ಸ್ಪ್ರೇ ಮಾಡುವುದರಿಂದ ಮನೆ ಸುಗಂಧಭರಿತವಾಗುತ್ತದೆ. ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗದೆಇರುವುದರಿಂದ ಬರುವ ದುರ್ಗಂಧ ದೂರವಾಗುತ್ತದೆ.

ಅಡುಗೆ ಮನೆಯಲ್ಲಿ ಯಾವುದಾದರೂ ಕೆಟ್ಟ ವಾಸನೆಗಳು ತುಂಬಿದ್ದರೆ ನೀರಿನಲ್ಲಿ ಲವಂಗ ಹಾಕಿ ಕುಡಿಸಿ ನೀರು ಆವಿಯಾದಂತೆಲ್ಲ ಲವಂಗದ ವಾಸನೆ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ.

ಕಾಫಿ, ಚಹಾ ಹಾಲು ಇಂತವುಗಳನ್ನು ಪ್ಲಾಸ್ಕಿನಲ್ಲಿ ತೆಗೆದುಕೊಂಡು ಹೋಗಿರುತ್ತೇವೆ. ಎಷ್ಟೇ ತೊಳೆದರೂ ಅದರೊಳಗಿನ ಕೆಟ್ಟ ವಾಸನೆ ಹೋಗುವುದು ಕಷ್ಟ ಆ ಸಮಯದಲ್ಲಿ ಅದರ ಒಳಗೆ ಕೆಲವು ಲವಂಗವನ್ನು ಹಾಕಿ ಮುಚ್ಚಿಡಿ. ಬೇಕಾದಾಗ ಲವಂಗ ತೆಗೆದು ಬಳಸ ಬಹುದು ಇದರಿಂದ ಪ್ಲಾಸ್ಕಿನ ಒಳಗಿನ ದುರ್ಗಂಧ ದೂರವಾಗುತ್ತದೆ.