ನಿಮ್ಮ ಮಕ್ಕಳು ಸರಿಯಾಗಿ ಊಟ ಮಾಡುತ್ತಿಲ್ಲ ಎಂಬ ಚಿಂತೆ ಬಿಟ್ಟು.. ರಾಗಿ-ಅಕ್ಕಿ ದೋಸೆ ಮಾಡಿ ಕೊಡಿ..!!

0
1498

ಮಕ್ಕಳಿಗೆ ಊಟ ಮಾಡಿಸೋದೆ ಒಂದು ದೊಡ್ಡ ತಲೆನೋವು ಯಾವುದೇ ತರಹದ ಊಟ ತಂದರು ಒಂದು ತುತ್ತು ತಿನ್ನುವ ಹಾಗೆ ಮಾಡಿ ಓಡಿ ಹೋಗುತ್ತಾರೆ, ಅಮ್ಮದಿರು ಮಗುವಿಗೆ ಊಟ ಮಾಡಿಸಲು ಏನೆಲ್ಲಾ ಉಪಾಯಮಾಡಿದರು ಸರಿಯಾಗಿ ತಿನ್ನೋದೇ ಇಲ್ಲ. ಮಗು ಚೆನ್ನಾಗಿ ಆಟ ಆಡತ್ತೆ ಆರೋಗ್ಯವಾಗಿದೆ ಆದ್ರೆ ಊಟ ಮಾತ್ರ ಮಾಡುವದಿಲ್ಲ ಯಾಕೆ ಎಂಬ ಯೋಚನೆ ಮೂಡಿ ಏನಾದ್ರೂ ಸಮಸ್ಯೆ ಇರಬಹುದಾ ಅಂತ ಆಸ್ಪತ್ರೆಗೆ ಹೋಗಿ ಸಾವಿರಾರು ರುಪಾಯಿ ಕರ್ಚು ಮಾಡಿದರು ಪ್ರಯೋಜನವಿಲ್ಲ, ಇದಕ್ಕೆ ಕಾರಣ ನಿಮ್ಮ ಅಡುಗೆ ಕ್ರಮ. ಈ ಚಿಂತೆ ಹೋಗಲಾಡಿಸಲು ಸರಳ ಉಪಾಯವೆಂದರೆ ಅಧಿಕ ಪೋಷಕಾಂಶವಿರುವ ಆಹಾರ ಅಂದ್ರೆ ರಾಗಿ-ಅಕ್ಕಿ ದೋಸೆ ಇದನ್ನು ಮಕ್ಕಳು ತುಂಬಾ ಇಷ್ಟ ಪಡುತ್ತಾರೆ, ಸ್ವಲ್ಪವೇ ತಿಂದರೂ ಅಧಿಕ ಪೋಷಕಾಂಶ ಸಿಗುತ್ತದೆ. ಮಕ್ಕಳ ಪ್ರಿಯವಾದ ರಾಗಿ-ಅಕ್ಕಿ ದೋಸೆ. ತಯಾರಿಸುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಾಗ್ರಿಗಳು:
* ರಾಗಿ ಹಿಟ್ಟು ಒಂದು ಕಪ್
* ಅಕ್ಕಿ ಹಿಟ್ಟು ಒಂದು ಕಪ್
* ಉದ್ದಿನ ಬೆಳೆ ಒಂದು ಕಪ್
* 20 ನಿಮಿಷ ನೀರಿನಲ್ಲಿ ನೆನೆ ಹಾಕಿದ ಒಂದು ಕಪ್ ಅವಲಕ್ಕಿ
* ಅಡುಗೆ ಎಣ್ಣೆ
* ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ :

1. ಉದ್ದಿನ ಬೇಳೆ ಮತ್ತು ಅವಲಕ್ಕಿ ಅರೆಯಬೇಕು.
2. ಒಂದು ಪಾತ್ರೆಯಲ್ಲಿ ಅಕ್ಕಿ ಮತ್ತು ರಾಗಿ ಹಿಟ್ಟು ಹಾಕಿ ನುಣ್ಣಗೆ ಅರೆದ ಉದ್ದಿನ ಬೇಳೆ, ಅಲವಕ್ಕಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ , ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಈ ಮಿಶ್ರಣ ಅತಿಯಾದ ಗಟ್ಟಿ ಅಥವಾ ಅತಿಯಾದ ತೆಳುವಾಗಿ ಇರಬಾರದು.
3.ದೋಸೆ ಹಿಟ್ಟು ತಯಾರಾದ ನಂತರ ಪಾತ್ರೆಯ ಬಾಯಿ ಮುಚ್ಚಿ ಬೇಸಿಗೆಯಲ್ಲಿಯಾದರೆ 6-7 ಗಂಟೆ, ಚಳಿಗಾಲದಲ್ಲಿಯಾದರೆ 24 ಗಂಟೆ ಕಾಲ ಇಡಬೇಕು.
4. ಕಲೆಸಿಡುವ ಪಾತ್ರೆ ಸ್ವಲ್ಪ ದೊಡ್ಡದಿರಲಿ, ಇಲ್ಲದಿದ್ದರೆ ಹಿಟ್ಟು ಉಬ್ಬಿ ಚೆಲ್ಲಿ ಹೋಗುವುದು.
5. ನಂತರ ದೋಸೆ ಮಾಡುವ ಕಾವಲಿಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ದೋಸೆ ಹುಯ್ಯಬೇಕು. ದೋಸೆ ಬೆಂದ ನಂತರ ಒಮ್ಮೆ ಮಗುಚಿ ಹಾಕಿ 20 ಸೆಕಂಡ್ ಬಿಸಿ ಮಾಡಿ ನಂತರ ತೆಗೆದರೆ ರುಚಿಕರವಾದ ರಾಗಿ, ಅಕ್ಕಿ ಹಿಟ್ಟಿನ ದೋಸೆ ತಯಾರಾಗುತ್ತೆ.
6. ಇದನ್ನು ಸಬ್ಜಿ ಜೊತೆ ತಿನ್ನಲು ಕೊಟ್ಟರೆ ಮಕ್ಕಳು ತುಂಬಾ ಇಷ್ಟಪಡುತ್ತಾರೆ, ಇದನ್ನು ಚಟ್ನಿ ಜೊತೆ ಕೂಡ ತಿನ್ನಬಹುದು.
7. ಈ ದೋಸೆಯನ್ನು ಮಗು ಇಷ್ಟಪಟ್ಟು ಒಂದು ತಿನ್ನದೇ ಸಾಕು ಎಷ್ಟೋ ಪೋಷಕಾಂಶ ಸಿಕ್ಕು ಆರೋಗ್ಯವಾಗಿ ಇರುತ್ತೆ.