ನಿಮ್ಮ ವಾಹನಗಳನ್ನು ಕಳವು ಮಾಡ್ತಾರೆ ಎಂಬ ಚಿಂತೆ ಬಿಟ್ಟು ಬಿಡಿ; ಕಳ್ಳರಿಗೆ ಚೆಳ್ಳೆಹಣ್ಣು ತಿನಿಸಲು ಬಂದಿದೆ ಮೊಬೈಲ್ ಸಿಮ್ ತಂತ್ರಜ್ಞಾನ..

0
1286

ಜನರು ವಾಹನಗಳಿಗೆ ತುಂಬಾನೇ ಅವಲಂಭಿತರಾಗಿದ್ದು ದಿನನಿತ್ಯದ ಕೆಲಸದಲ್ಲಿ ಬೈಕ್ ಕಾರ್ ಬೇಕೇಬೇಕು ಆದಕಾರಣಕ್ಕೆ ಪ್ರತಿಯೊಬ್ಬರ ಮನೆಯಲ್ಲಿ ವಾಹನಗಳನ್ನು ಖರೀದಿಸುತ್ತಾರೆ ಹಣ ವಿಲ್ಲದಿದ್ದರೂ ಹೇಗೋ ಸಾಲ, ಲೋನ್ ಮಾಡಿ ವಾಹನ ತೆಗೆದುಕೊಳ್ಳುವ ಜನರಿಗೆ ವಾಹನ ಕಳ್ಳರ ಭಯವು ಹೆಚ್ಚಾಗುತ್ತಿದೆ, ಆದರಿಂದ ಜನರಿಗೆ ತಮ್ಮ ಕೆಲಸಕ್ಕಿಂತ ವಾಹನ ಕಾಯಿವುದೇ ದೊಡ್ಡ ತಲೆ ನೋವು ಅದಕ್ಕೆ ಅಂತಾನೆ ಎಷ್ಟೊಂದು ತರಹದ ಲಾಕರ್ ಬಳಸಿ ವಾಹನ ಬದ್ರ ಗೊಳಿಸಿದರು ಚಾಲಾಕಿ ಕಳ್ಳರು ಜಾಣ್ಮೆಯಿಂದ ವಾಹನವನ್ನು ಎಗರಿಸುತ್ತಾರೆ. ಒಂದು ವೇಳೆ ವಾಹನ ಮಿಸ್ ಆದರೆ ಪೊಲೀಸ್ ಕೇಸ್ ಇನ್ಸುರೆನ್ಸ್ ಕಂಪನಿ ಅಂತ ತಿಂಗಳು ಇಲ್ಲ ವರ್ಷದ ವರೆಗೆ ಅಲೆಯಿವ ಪರದಾಟ ವಿರುತ್ತೆ ಇದೆ ಕಾರಣಕ್ಕೆ ವಾಹನ ಮಾಲೀಕರು ಲಕ್ಷ ಲಕ್ಷ ಹಣ ಕೊಟ್ಟು ವಾಹನ ಖರೀದಿಸಿ ಭಯದಲ್ಲಿ ಇರುತ್ತಾರೆ. ಇನ್ನುಮುಂದೆ ಇಂತಹ ಭಯ ಯಾರಿಗೂ ಇರೋದಿಲ್ಲ ಬಿಡಿ ಯಾಕೆಂದರೆ ಇಲ್ಲಿದೆ ನೋಡಿ ಹೊಸ ತಂತ್ರಜ್ಞಾನ.

iMars ಎಂಬ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿ micro gps ಟ್ರ್ಯಾಕರ್​ನ್ನು ಕಂಡು ಹಿಡಿದಿದೆ. ಇದರ ಬಳಕೆ ಹೇಗಿದೆ ಅಂದರೆ ಈ ಎಲೆಕ್ಟ್ರಿಕ್ ಸಾಧನದಲ್ಲಿ ಸಿಮ್​ನ್ನು ಅಳವಡಿಸಲಾಗುತ್ತದೆ. ನಂತರ ಈ ಉಪಕರಣವನ್ನು ವಾಹನದ ಬ್ಯಾಟರಿಗೆ ಕನೆಕ್ಟ್ ಮಾಡಲಾಗುತ್ತೆ. ಇದಕ್ಕೆ ಸಂಬಂಧಿಸಿದ ಆ್ಯಪ್ ಕೂಡ ಇದೆ. ಇದನ್ನು ನೀವು ಸ್ಮಾರ್ಟ್​ಫೋನಿನಲ್ಲಿ ಡೌನ್​ಲೋಡ್ ಮಾಡಬೇಕಾಗಿದೆ. ಒಂದು ವೇಳೆ ನಿಮ್ಮ ಕಾರನ್ನು ಬೇರೆಯವರು ಚಲಾಯಿಸುತ್ತಿದ್ದರೆ ಅಥವಾ ಕಾರು ಸ್ಟ್ರಾಟ್ ಆಗುತ್ತಿದ್ದಂತೆ ನಿಮ್ಮ ಮೊಬೈಲ್​ ಆ್ಯಪ್​ಗೆ ಎಚ್ಚರಿಕೆಯ ಸಂದೇಶ ಬರುತ್ತದೆ.

ನಿಮ್ಮ ವಾಹನದಲ್ಲಿ ಅಳವಡಿಸಿದ ಟ್ರಾಕಿಂಗ್ ಡಿವೈಸ್​ನಲ್ಲಿ ಮೈಕ್ರೋ ಸಿಮ್​ಗಳನ್ನು ಅಳವಡಿಸಲಾಗುತ್ತೆ. ಇದರಲ್ಲಿ ಮೂರು ವಯರ್​ಗಳಿರಲಿದ್ದು, ಅದರಲ್ಲಿ ಎರಡನ್ನು ಬ್ಯಾಟರಿಗೆ ಮತ್ತೊಂದನ್ನು ಇಗ್ನಿಷಿಯನ್​ಗೆ ಅಳವಡಿಸಬೇಕು. ಇಲ್ಲಿ ನೀಡಲಾಗಿರುವ ಕಪ್ಪು ವಯರ್​ನ್ನು ಬ್ಯಾಟರಿಯ ನೆಗೆಟಿವ್ ಭಾಗಕ್ಕೆ ಮತ್ತು ಕೆಂಪು ವಯರ್​ನ್ನು ಪಾಸಿಟಿವ್ ಭಾಗಕ್ಕೆ ಕನೆಕ್ಟ್ ಮಾಡಬೇಕು. ಕಿತ್ತಲೆ ಬಣ್ಣದ ವಯರ್​ನ್ನು ಇಗ್ನಿಷಿಯನ್​ನ ನೆಗೆಟಿವ್​ ಬಿಂದುವಿಗೆ ಸಂಪರ್ಕಿಸಬೇಕು. ಇದರಿಂದ micro jps ಈ ಸಾಧನ ಸರಿಯಾಗಿ ಕೆಲಸ ಮಾಡುತ್ತೆ.

ಹೇಗೆ ಸಂದೇಶ ಕಲಿಸುತ್ತೆ?

ವಾಹನದಲ್ಲಿ ಈ ಡಿವೈಸ್​ನ್ನು ಅಳವಡಿಸಿದ ಬಳಿಕ ಸಿಮ್ ಕಾರ್ಡ್​ನ್ನು ಇರಿಸಿ. ಇದರ ನಂತರ ಡಿವೈಸ್ ಲೈಟ್​ ಆನ್ ಆಗುತ್ತದೆ. ಆನ್ ಆದರೆ ಮಾತ್ರ ಡಿವೈಸ್ ಕಾರ್ಯ ನಿರ್ವಹಿಸುತ್ತಿದೆ ಎಂದರ್ಥ. ಇದರಜತೆಗೆ QR ಕೋಡ್​ನ್ನು ನೀಡಲಾಗಿರುತ್ತದೆ. ಇದನ್ನು LKGPS ಆ್ಯಪ್​ನಲ್ಲಿ ಸ್ಕ್ಯಾನ್ ಮಾಡಿದರೆ ಲಿಂಕ್ ಒಪನ್ ಆಗುತ್ತದೆ. ಬಳಿಕ ನಿಮ್ಮ ಮಾಹಿತಿಯನ್ನು ನೀಡಿ ಲಾಗಿನ್ ಆಗಬೇಕು. ನಂತರ ನಿಮ್ಮ ವಾಹನವು ಎಲ್ಲೆಲ್ಲಿ ಓಡುತ್ತದೆ ಎಂಬುದರ ಮಾಹಿತಿಯನ್ನು ನಿಮ್ಮ ಮೊಬೈಲ್ -ನಲ್ಲಿ ತೋರಿಸುತ್ತೆ.

ಇದರ ಸುರಕ್ಷೆತೆ ಹೇಗೆ?

ಇದೊಂದು ವಾಟರ್ ಪ್ರೂಫ್ ಡಿವೈಸ್ ಆಗಿದ್ದು, ವಾಹನಗಳು ಅಪಘಾತವಾದರೂ ಶೀಘ್ರವೇ ನಿಮಗೆ ಮಾಹಿತಿ ಬರುತ್ತದೆ. ಅಲ್ಲದೆ ನಿಮ್ಮ ಕಾರು ಅಥವಾ ಬೈಕ್​ನಲ್ಲಿ ಸಣ್ಣ ಪುಟ್ಟ ಬದಲಾವಣೆ ಆಗುತ್ತಿದ್ದರೂ ಎಚ್ಚರಿಕೆಯ ಸಂದೇಶಗಳು ಕಳುಹಿಸುತ್ತೇ. ಇದರಿಂದ ನೀವು ಯಾವುದೇ ಭಯವಿಲ್ಲದೆ ವಾಹನವನ್ನು ಸುರಕ್ಷಿತವಾಗಿಡಬಹುದು.

Also read: ಪತ್ನಿಗೆ ಜೀವನಾಂಶ ನೀಡುವಾಗ ಮದುವೆ ಆಗಿದೆ ಎಂಬುದಕ್ಕೆ ಪಕ್ಕಾ ಸಾಕ್ಷ್ಯ ನೀಡುವ ಅಗತ್ಯವಿಲ್ಲ; ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು..