ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವಂತೆ ಎಡಭಾಗಕ್ಕೆ ಮಲಗುವುದು ತುಂಬಾ ಒಳ್ಳೆಯದಂತೆ..!

0
1277

ನಿದ್ರೆ ಮನುಷ್ಯನ ಅವಶ್ಯಕತೆಗಳಲ್ಲಿ ಒಂದು. ಸಾಮಾನ್ಯವಾಗಿ ಕಿರಿಯರು ಏನಾದರೂ ಉತ್ತರಕ್ಕೆ ತಲೆ ಇಟ್ಟು ಮಲಗಿದರೆಂದರೆ ಮುಗಿಯಿತು. ಮನೆಯಲ್ಲಿನ ಹಿರಿಯರು ಹಿಗ್ಗಾಮುಗ್ಗಾ ಬೈಯ್ದು ಬಿಡುತ್ತಾರೆ. ಅವರ ಪ್ರಕಾರ ಎಡಮಗ್ಗುಲಾಗಿ ಮಲಗಿ ಮತ್ತು ಬಲಮಗ್ಗದಲ್ಲಿ ಎದ್ದೇಳು ಎನ್ನುವುದು ಹಿಂದಿನ ಕಾಲದಿಂದಲೂ ಹಿರಿಯರು ಹೇಳುತ್ತಾ ಬಂದಿದ್ದಾರೆ. ಆದರೆ ಇದಕ್ಕೆ ಹೆಚ್ಚಿನ ಗಮನ ಸಾಮಾನ್ಯವಾಗಿ ಯಾರು ನೀಡುವುದಿಲ್ಲ. ಅದರಲ್ಲಿ ಎಡಮಗ್ಗುಲಾಗಿ ಮಲಗುವುದು ನಿಜಕ್ಕೂ ಒಳ್ಳೆಯದು. ಕೆಲವು ಆರೋಗ್ಯ ತಜ್ಞರು ಎಡಮಗ್ಗುಲಾಗಿ ಮಲಗುವುದು ಶರೀರದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಿರುತ್ತಾರೆ. ಇದಕ್ಕೆ ಪೂರಕವಾಗಿ ಪ್ರಾಚೀನ ಕಾಲದ ಆಯುರ್ವೇದ ಶಾಸ್ತ್ರದಲ್ಲಿ ಕೂಡ ಹೇಳಲಾಗಿದೆ.

ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವಂತೆ ನಮ್ಮ ಶರೀರದ ಎಡ ಮತ್ತು ಬಲ ಭಾಗಗಳು ವಿಭಿನ್ನವಾಗಿ ವರ್ತಿಸುತ್ತವೆ. ವಾಸ್ತವವಾಗಿ ಎಡಮಗ್ಗುಲಾಗಿ ಮಲಗುವುದು ಒಳ್ಳೆಯದು ಎನ್ನುವ ಸಿದ್ಧಾಂತ ಹುಟ್ಟಿಕೊಂಡಿದ್ದೇ ಪ್ರಾಚೀನ ಕಾಲದ ಆಯುರ್ವೇದ ಶಾಸ್ತ್ರದಿಂದ. ಪ್ರತಿದಿನ ನಾವು ನಿದ್ರಿಸುವ ಅವಧಿ ಮತ್ತು ಒಳ್ಳೆಯ ನಿದ್ರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ನಾವು ಯಾವ ಭಂಗಿಯಲ್ಲಿ ನಿದ್ರಿಸುತ್ತೇವೆ ಎನ್ನುವುದೂ ಇಲ್ಲಿ ಮುಖ್ಯವಾಗಿದೆ.

ಎಡಮಗ್ಗುಲಾಗಿ ಮಲಗುವುದರಿಂದ ಆಗುವ ಲಾಭಗಳು.

ಗೊರಕೆ ಹೊಡೆಯುವುದನ್ನು ನಿಲ್ಲಿಸಬಹುದು:
ಎಡಮಗ್ಗುಲಾಗಿ ನಿದ್ರಿಸುವುದರಿಂದ ನಾಲಿಗೆ ಮತ್ತು ಗಂಟಲು ತಟಸ್ಥ ಸ್ಥಿತಿಯಲ್ಲಿರುತ್ತವೆ, ತನ್ಮೂಲಕ ಮೂಗಿನ ಮೂಲಕ ಉಸಿರಾಟಕ್ಕೆ ಯಾವುದೇ ಅಡಚಣೆಯಾಗುವುದಿಲ್ಲ. ಇದರಿಂದ ಗೊರಕೆ ಹೊಡೆಯುವುದನ್ನು ನಿಲ್ಲಿಸಬಹುದು.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ:
ನಮ್ಮ ದೇಹದ ಜಠರ ಮತ್ತು ಮೇದೋಜ್ಜೀರಕ ಗ್ರಂಥಿ ಎಡಭಾಗದಲ್ಲಿವೆ. ಹಾಗಾಗಿ ಎಡಮಗ್ಗುಲಾಗಿ ನಿದ್ರಿಸುವುದರಿಂದ ಅವು ಸಹಜ ಭಂಗಿಯಲ್ಲಿರುತ್ತವೆ ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗಿ ನಡೆಯುತ್ತದೆ ಮತ್ತು ಇದರಿಂದ ಮಲಬದ್ಧತೆಯ ಸಮಸ್ಯೆ ಕಾಡುವುದಿಲ್ಲ.

Stomach ache

ಹೃದಯದ ಆರೋಗ್ಯ:
ಹೃದಯವು ನಮ್ಮ ಶರೀರದಲ್ಲಿ ಎಡಭಾಗದಲ್ಲಿರುತ್ತದೆ. ಹೀಗಾಗಿ ಎಡಮಗ್ಗುಲಾಗಿ ಮಲಗುವುದರಿಂದ ಗುರುತ್ವಾಕರ್ಷಣೆ ಬಲದಿಂದ ಹೃದಯಕ್ಕೆ ರಕ್ತ ಸಂಚಾರ ಸುಲಭವಾಗುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದು:
ಗರ್ಭಿಣಿಯರು ಎಡಮಗ್ಗುಲಾಗಿ ಮಲಗುವುದರಿಂದ ಬೆನ್ನಿನ ಮೇಲಿನ ಒತ್ತಡವನ್ನು ನಿವಾರಿಸುವಲ್ಲಿ ನೆರವಾಗುತ್ತದೆ ಮತ್ತು ಗರ್ಭಕೋಶ ಹಾಗೂ ಭ್ರೂಣಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಗರ್ಭದಲ್ಲಿಯ ಶಿಶು ಆರೋಗ್ಯಪೂರ್ಣವಾಗಿರಲು ಹೊಕ್ಕಳ ಬಳ್ಳಿಗೆ ಪೋಷಕಾಂಷಗಳ ಸುಗಮ ಹರಿವಿಗೂ ನೆರವಾಗುತ್ತದೆ. ಇದೆ ಕಾರಕ್ಕೆ ವೈದ್ಯರು ಸಾಧ್ಯವಾದಷ್ಟು ಹೆಚ್ಚು ಸಮಯ ಎಡಮಗ್ಗುಲಾಗಿ ನಿದ್ರಿಸುವಂತೆ ಗರ್ಭಿಣಿ ಯರಿಗೆ ಸಲಹೆ ನೀಡುತ್ತಾರೆ.

ಸಾಮಾನ್ಯವಾಗಿ ಹಲವರಿಗೆ ತಾವು ರೂಢಿಸಿಕೊಂಡಿರುವ ನಿದ್ರೆಯ ಭಂಗಿಯನ್ನು ಒಂದೇಸಲ ಬದಲಿಸಲು ಸಾಧ್ಯವಾಗುವುದಿಲ್ಲ. ಎಡಮಗ್ಗುಲಾಗಿ ಮಲಗುವುದು ಒಳ್ಳೆಯದು ಎಂಬುವುದು ಗೊತ್ತಿದ್ದರೂ ಬೇರೆ ಭಂಗಿಯಲ್ಲಿ ಮಲಗುವುದು ತಪ್ಪು. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಆದರೆ ಪ್ರಯತ್ನಿಸಿ ನೋಡುವಲ್ಲಿ ನಷ್ಟವೇನು ಇಲ್ಲವಲ್ಲ.