ನಿಂಬೆಯಿಂದ ಬಹಳಷ್ಟು ಲಾಭಗಳು

0
815

*ಹೊಟ್ಟೆಯಲ್ಲಿನ ಕ್ರಿಮಿಗಳು : 10 ಗ್ರಾಂನಷ್ಟು ನಿಂಬೆ ಎಲೆಗಳ ರಸಕ್ಕೆ 10 ಗ್ರಾಂ ಜೇಜುತುಪ್ಪ ಬೆರೆಸಿ ಕುಡಿಯುವುದರಿಂದ 10-15 ದಿನಗಳಲ್ಲಿ ಹೊಟ್ಟೆಯಲ್ಇನ ಕ್ರಿಮಿಗಳು ಸಾಯುತ್ತವೆ. ನಿಂಬೆ ಬೀಜಗಳ ಚೂರ್ಣವನ್ನು ಕೊಂಚ ತೆಗೆದುಕೊಳ್ಳುವುದರಿಂದಲೂ ಕ್ರಿಮಿಗಳು ಸಾಯುತ್ತವೆ.

*ತಲೆನೋವು: ನಿಂಬೆ ಎಲೆಗಳನ್ನು ಜಜ್ಜಿ ರಸ ತೆಗೆದು ಚೆನ್ನಾಗಿ ವಾಸನೆ ಹೀರಿ. ಸದಾ ತಲೆನೋವಿನಿಂದ ನರಳುವ ವ್ಯಕ್ತಿಗೆ ಇದರಿಂದ ಶೀಘ್ರದ ಉಪಶಮನವಾಗುವುದು.

* ಮುಖದ ಸೌಂದರ್ಯಕ್ಕಾಗಿ: 10 ಗ್ರಾಂ ನಿಂಬೆರಸ, 10 ಹನಿ ಗ್ಲಿಸರಿನ್ ಮತ್ತು10 ಗ್ರಾಂ ಗುಲಾಬಿ ಜಲ ಸೇರಿಸಿ. ದಿನವೂ ಬೆಲಿಗ್ಗೆ ಸ್ನಾನದ ನಂತರ ಮತ್ತು ರಾತ್ರಿ ಮಲಗುವ ಮುನ್ನ ಈ ಮಿಶ್ರಣವನ್ನು ಮುಖದ ಮೇಲೆ ಲೆಳುವಾಗಿ ಹಚ್ಚಿದರೆ ಮುಖ ಕೋಮಲವಾಗುತ್ತದೆ.

ನಿಂಬೆ ರಸ ಮತ್ತು ಗುಲಾಬಿಜಲವನ್ನು ಸಮಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಶುದ್ಧ ನೀರಿನಿಂದ ತೊಳೆಯಿರಿ. ಮುಖದ ಮೇಲಿನ ಮೊಡವೆಗಳು ಕೆಲದಿನಗಳಲ್ಲಿ ಮಾಯಾವಾಗುವುದು.

*ನಾಲಿಗೆ ದೋಷಗಳು: ನಿಂಬೆರಸ ಮತ್ತು ಉಪ್ಪು ಸೆರಿಸಿ ನಾಲಗೆಗೆ ಉಜ್ಜಿದರೆ ನಾಲಗೆಯ ಎಲ್ಲ ದೋಷಗಳು ದೂರವಾಗುತ್ತವೆ.

*ಮೂಗಲ್ಲಿ ರಕ್ತ: ತಾಜಾ ನಿಂಬೆರಸವನ್ನು ಮೂಗಿನಲ್ಲಿ ರಕ್ತ ಬರುತ್ತಿದ್ದರೆ ನಿಂತುಹೋಗುವುದು.

*ಬಾಯಾರಿಕೆ: ಯಾವುದಾದರೂ ಕಾರಣದಿಂದ ಪದೇ ಪದೇ ಬಾಯಾರಿಕೆಯಾಗುತ್ತಿದ್ದರೆ ನಿಂಬೆ ಶರಬತ್ ಸೇವಿಸಿದರೆ ಕೂಡಲೇ ಬಾಯಾರಿಕೆ ನಿಲ್ಲುತ್ತದೆ. ಹೆಚ್ಚು ಜ್ವರವಿದ್ದಾಗಲೂ ಇದನ್ನು ಕೊಡಬಹುದು.

*ಕೂದಲುದುರುವಿಕೆ ಮತ್ತು ಹೊಟ್ಟು: ನಿಂಬೆರಸಕ್ಕೆ ಎರಡರಷ್ಟು ಕೊಬ್ಬರಿ ಎಣ್ಣೆ ಸೇರಿಸಿ ಕೈಗಳಿಂದ ಹಗುರವಾಗಿ ಮಸಾಜ್ ಮಾಡುವುದರಿಂಧ ಕೂದಲು ಉದುರುವುದು ನಿಲ್ಲುತ್ತದೆ, ಅವು ಮೃದುವೂ ಆಗುತ್ತದೆ ಮತ್ತು ಹೊಟ್ಟು ದುರವಾಗುತ್ತದೆ, ತಲೆಹೊಟ್ಟಿಗೆ ನಿಂಬೆರಸಕ್ಕೆ ಕೊಬ್ಬರಿ ಎಣ್ಣೆ ಸೇರಿಸಿ ರಾತ್ರಿ ಮಲಗುವಾಗ ತಲೆಗೆ ತಿಕ್ಕಿಕೊಳ್ಳಿ, ಬೆಳ್ಳಿಗೆ ಉಗುರು ಬಿಚ್ಚಗಿನ ನೀರಿನಲ್ಲಿ ಸೀಗೆಕಾಯಿ ಹಾಕಿ ತೊಳೆಯಿರಿ. 3-4 ಬಾರಿ ಹೀಗೆ ಮಾಡಿದರೆ ಶುಷ್ಕತನ ದೂರವಾಗುತ್ತದೆ.

*ಅಪಸ್ಮಾರ: ಚಿಟಕಿಯಷ್ಟು ಇಂಗನ್ನು ನಿಂಬೆರಸಕ್ಕೆ ಬೆರೆಸಿ ಕುಡಿದರೆ ಅಪಸ್ಮಾರ ಗುಣವಾಗುತ್ತದೆ.

*ಪಯೋರಿಯಾ: ನಿಂಬೆರಸಕ್ಕೆ ಜೇನುತುಪ್ಪ ಬೆರೆಸಿ ವಸಡುಗಳಿಗೆ ತಿಕ್ಕುವುದರಿಂದ ರಕ್ತ ಮತ್ತು ಕೀವು ಬರುವುದು ನಿಲ್ಲುತ್ತದೆ.

*ಹಲ್ಲು ಮತ್ತು ವಸಡುಗಳಲ್ಲಿ ನೋವು: ನಿಂಬೆಹಣ್ಣನ್ನು 4 ತುಂಡು ಮಾಡಿ ಅವಕ್ಕೆ ಉಪ್ಪು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ 1-1 ತುಂಡನ್ನು ದವಡೆಯಲ್ಲಿ ಇಟ್ಟುಕೊಂಡು ಒತ್ತಿಕೊಳ್ಳಿ ಮತ್ತು ರಸ ಹೀರುತ್ತಾ ಹೋಗಿ. ನೋವಿಗೆ ಉಪಶಮನ ಸಿಗುತ್ತದೆ. ವಸಡು ಊದಿಕೊಂಡಿದ್ದರೆ ನೀರಿಗೆ ನಿಂಬೆರಸ ಹಾಕಿಕೊಂಡು ಬಾಯಿ ಮುಕ್ಕಳಿಸಿದರೆ ಹೆಚ್ಚು ಲಾಭ.

*ಹಲ್ಲುಗಳಲ್ಲಿ ಹೊಳಪು: ನಿಂಬೆರಸಕ್ಕೆ ಸಾಸುವೆ ಎಣ್ಣೆ ಬೆರೆಸಿ ಚೆನ್ನಾಗಿ ಉಜ್ಜುವುದರಿಂದ ಹಲ್ಲುಗಳಿಗೆ ಹೊಳಪು ಬರುತ್ತದೆ.

*ಬಿಕ್ಕಳಿಕೆ: 1 ಚಮಚ ನಿಂಬೆರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ. ರುಚಿಗೆ ತಕ್ಕಷ್ಟು ಬ್ಲ್ಯಾಕ್ ಸಾಲ್ಟ್ ಬೆರೆಸಬಹುದು.

*ನವೆ: ನಿಂಬೆರಸಕ್ಕೆ ಸ್ಫಟಿಕದ ಪುಡಿ ಸೇರಿಸಿ ನವೆಯಾಗುವ ಜಾಗದಲ್ಲಿ ಉಜ್ಜಿ ನವೆ ನಿಲ್ಲುತ್ತದೆ.

*ಸಂಧುಗಳಲ್ಲಿ ನೋವು: ನಿಂಬೆರಸಕ್ಕೆ ನೋವಿರುವ ಜಾಗದಲ್ಲಿ ಉಜ್ಜಿದರೆ ನೋವು ಮತ್ತು ಊತ ಕಡಿಮೆಯಾಗುತ್ತದೆ,

*ನೋವುರಹಿತ ಪ್ರಸವ: ಗರ್ಭಧಾರಣೆಯ 4ನೇ ತಿಂಗಳಲ್ಲಿ ಪ್ರಸವಕಾಲದವರೆಗೆ 1 ನಿಂಬೆ ಹಣ್ಣಿನ ರಸವನ್ನು ಶಿಕಂಜಿಯನ್ನು ದಿನವೂ ಕುಡಿದರೆ ಸುಖ ಪ್ರಸವುಂಟಾಗುತ್ತದೆ.

*ತಡೆಮೂತ್ರ: ನಿಂಬೆಯ ಬೀಜಗಳನ್ನು ನುಣ್ಣಗೆ ಪುಡಿ ಮಾಡಿ ಹೊಕ್ಕಳಿನ ಮೇಲಿಟ್ಟು ತಣ್ಣೀರು ಹಾಕಿದರೆ ತಡೆದ ಮೂತ್ರ ಸರಾಗವಾಗಿ ವಿಸರ್ಜನೆಯಾಗುತ್ತದೆ.

*ಕ್ಷಯರೋಗ: 25 ಗ್ರಾಂ ನಿಂಬೆರಸಕ್ಕೆ 11 ತುಳಸಿ ಎಲೆ, ಜೀರಿಗೆ, ಇಂಗು ಮತ್ತು ಉಪ್ಪು ಇವೆಲ್ಲವನ್ನು ಬಿಸಿ ನೀರಿಗೆ ಸೇರಿಸಿ ಕುಡಿಯುವುದರಿಂದ ಕ್ಷಯರೋಗ ವಾಸಿಯಾಗುವುದು.

*ಉಸಿರಾಟದ ತೊಂದರೆ: ನಿಂಬೆರಸಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ಉಸಿರಾಟ ಸರಾಗವಾಗುವುದು.