ಮೈತ್ರಿ ಶಾಸಕರ ರಾಜೀನಾಮೆಗೆ ಮೋದಿ, ಅಮಿತ್ ಶಾ ಕೈವಾಡವಿಲ್ಲ; ಬಿಜೆಪಿ ಪರ ಜೆಡಿಎಸ್ ಸಚಿವ ಜಿಟಿಡಿ ಬ್ಯಾಟಿಂಗ್, ಬಿಜೆಪಿಪರ ಹೇಳಿಕೆ ನೀಡಲು ಕಾರಣವೇನು??

0
225

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಬಿಸಿದ್ದು, ಬಿಜೆಪಿಯವರ ಗಾಳಕ್ಕೆ ಮೈತ್ರಿಯ ಮೀನುಗಳು ಒಂದೊಂದೇ ಹತ್ತುತ್ತಿವೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಆದರೆ ಜೆಡಿಎಸ್ ಸಚಿವ ಸಚಿವ ಜಿಟಿ ದೇವೇಗೌಡ ಬಿಜೆಪಿ ಪರ ಬ್ಯಾಟ್ ಬಿಸಿದ್ದು, ಮೈತ್ರಿ ಸರ್ಕಾರ ಬಿಳಿಸುವಲ್ಲಿ ಮೋದಿ ಅಮಿತ್ ಶಾ, ಅವರ ಕೈವಾಡವಿಲ್ಲ ಎನ್ನುವ ಹೇಳಿಕೆ ಕಾಂಗ್ರೆಸ್- ಜೆಡಿಎಸ್ ನಾಯಕರಲ್ಲಿ ಬಾರಿ ಅನುಮಾನಕ್ಕೆ ಎಡೆಮಾಡಿದೆ. ಏಕೆಂದರೆ ರಾಜ್ಯ ಸಮ್ಮಿಶ್ರ ಸರ್ಕಾರದ ಇಬ್ಬರು ಶಾಸಕರು ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪರ ಭರ್ಜರಿ ಬ್ಯಾಟಿಂಗ್ ಮಾಡಿರುವುದು ಯಾಕೆ ಎನ್ನುವುದು ಮೈತ್ರಿ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದ ನಡೆಯಾಗಿದೆ.

Also read: ದೇಶಾದ್ಯಂತ ಒಂದೇ ಮಾದರಿಯ ಡ್ರೈವಿಂಗ್ ಲೈಸೆನ್ಸ್‌ ಜಾರಿ; ಒನ್ ಎಲೆಕ್ಷನ್, ಒನ್ ರೇಷನ್, ಒನ್ ಡ್ರೈವಿಂಗ್ ಲೈಸೆನ್ಸ್‌, ಕೇಂದ್ರ ಸರ್ಕಾರದ ಚಿಂತನೆ!!

ಹೌದು ಒಂದೇ ದಿನದಲ್ಲಿ ಮೈತ್ರಿಯ ಇಬ್ಬರು ನಾಯಕರು ರಾಜೀನಾಮೆ ನೀಡಿದ್ದಾರೆ. ಸರ್ಕಾರದಲ್ಲಿ ಕೆಲವು ವಿಷಯಕ್ಕೆ ಸಂಬಂಧಪಟ್ಟಂತೆ ಅಸಮಾದಾನ ಗೊಂಡ ನಾಯಕರಲ್ಲಿ ಇಬ್ಬರು ಔಟ್ ಆಗಿದ್ದು ಇನ್ನೂ ಹಲವರು ಜಾರುತ್ತಿದ್ದಾರೆ. ಈ ಸಂಬಂಧ ಅಮೇರಿಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಬಿಜೆಪಿಯ ಕುತಂತ್ರ ನಾನು ಇಲ್ಲದ ಸಮಯ ನೋಡಿಕೊಂಡು ನಮ್ಮ ನಾಯಕರಿಗೆ ಬಲೆ ಬಿಸಿದ್ದಾರೆ ಎಂದು ಹೇಳಿದರೆ. ಅದೇ ಪಕ್ಷದ ಉನ್ನತ ಶಿಕ್ಷಣ ಸಚಿವರಾದ ಜಟಿ ದೇವೇಗೌಡರು ಮಾತನಾಡಿ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಯಾರ ರಾಜೀನಾಮೆಯನ್ನು ಕೊಡಿಸೋಕೆ ಹೋಗಿಲ್ಲ. ಅವರು ಎದುರಾಳಿ ಸರ್ಕಾರಕ್ಕೆ ಅಭದ್ರತೆ ಸೃಷ್ಟಿಸೋ ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದು.

Also read: ಬೆಂಗಳೂರಿನಲ್ಲಿ ತಮಿಳುಗರ ದರ್ಬಾರ್; ತಮಿಳು ನಟ ವಿಜಯ್ ಬರ್ತ್ ಡೇ ಆಚರಣೆಗೆ ತಮಿಳುಮಯವಾದ ಶ್ರೀರಾಂಪುರ, ಕನ್ನಡಿಗರ ವಿರೋಧ..

ನರೇಂದ್ರ ಮೋದಿ ಆಗಲಿ, ಅಮಿತ್ ಶಾ ಅವರಾಗಲಿ ಯಾವುದೇ ರಾಜೀನಾಮೆ ಕೊಡಿಸಲ್ಲ. ವಿರೋಧ ಪಕ್ಷ ಸರ್ಕಾರವನ್ನು ಅಭದ್ರತೆ ಸೃಷ್ಟಿಸುವ ದಿಕ್ಕಲ್ಲಿ ಮೋದಿ ಹಾಗೂ ಅಮಿತ್ ಶಾ ಅವರು ಹೋಗಿಲ್ಲ. ಪ್ರಧಾನಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಕೇಂದ್ರದಲ್ಲಿ ದೇಶಗೋಸ್ಕರ ಏನು ಮಾಡಬೇಕು? ಕಾಶ್ಮೀರ, ಚೀನಾ, ಅಮೆರಿಕ ಜೊತೆ ಏನೂ ಮಾಡಬೇಕು ಎಂದು ಮೋದಿ ಯೋಚನೆ ಮಾಡುತ್ತಿದ್ದಾರೆ. ಜು. 5ರಂದು ಮೋದಿ ರೈತರ ಪರವಾಗಿ ಬಜೆಟ್ ಕೊಡುವುದಾಗಿ ಹೇಳಿದ್ದಾರೆ. ಅವರು ಅಧಿವೇಶನ ಹಾಗೂ ಬಜೆಟ್ ಕಡೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ಅವರ ಮೇಲೆ ಯಾರು ಕೇಸರು ಎರಚುವ ಹಾಗಿಲ್ಲ. ಜೆಡಿಎಸ್ ಪಕ್ಷದಲ್ಲೂ ಯಾರು ಕೂಡ ರಾಜೀನಾಮೆ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ರಮೇಶ್ ಜಾರಕಿಹೊಳಿ ಅವರು ಯಾವಾಗ ಸ್ಪೀಕರ್ ಮುಂದೆ ಹೋಗಿ ರಾಜೀನಾಮೆ ಕೊಟ್ಟಿದ್ದಾರೋ ಗೊತ್ತಿಲ್ಲ.

Also read: ಬಿಗ್ ಬ್ರೇಕಿಂಗ್; ಮೈತ್ರಿ ಸರ್ಕಾರದ ಶಾಸಕ ಆನಂದ್ ಸಿಂಗ್ ರಾಜಿನಾಮೆ, ಇನ್ನೂ ಹಲವು ಶಾಸಕರು ಕಾಂಗ್ರೆಸ್ ತೊರೆಯುವ ಸುಳಿವು..

ಅದರಂತೆ ಜೆಡಿಎಸ್‌ನಲ್ಲಿ ಯಾರು ರಾಜೀನಾಮೆ ಕೊಟ್ಟಿಲ್ಲ. ಕಾಂಗ್ರೆಸ್‌ನಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ಹೊಸದಲ್ಲ. ಆನಂದ್‌ಸಿಂಗ್ ರಾಜೀನಾಮೆ ಪಾಪ ಅವರಿಗೇನು ಕಷ್ಟ ಇತ್ತೋ ಗೊತ್ತಿಲ್ಲ ಅದನ್ನು ಕಾಂಗ್ರೆಸ್ ನಾಯಕರು ಸರಿಪಡಿಸಿಕೊಳ್ಳುತ್ತಾರೆ. ಸರ್ಕಾರ ಬೀಳಿಸೋದು ಬಿಜೆಪಿ ರಾಜ್ಯ ನಾಯಕರ ಕೈಯಲ್ಲಿ ಇಲ್ಲ. ಅದೇನಿದ್ದರೂ ಅಮಿತ್ ಶಾ ಹಾಗೂ ಮೋದಿಯವರ ಕೈಯಲ್ಲಿ ಇದೆ. ಬಿಜೆಪಿ ಸರ್ಕಾರ ರಚನೆ ಮಾಡುವ ನಿರ್ಧಾರ ನರೇಂದ್ರ ಮೋದಿ ನಿರ್ದೇಶನ ಇದ್ದರೆ ಮಾತ್ರ ಆಗಲು ಸಾಧ್ಯ. ಬೇರೆ ಯಾರ ನಿರ್ದೇಶನ ಇದ್ದರೂ ಅಧಿಕೃತ ಅಲ್ಲ ಎಂದು ಜಿಟಿ ದೇವೇಗೌಡರು ತಿಳಿಸಿದ್ದಾರೆ. ಈ ಎಲ್ಲ ರಾಜಕೀಯ ಬೆಳವಣಿಗೆಗಳನ್ನು ಇಲ್ಲಿಂದಲೇ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಯ ಪ್ರಯತ್ನ ‘ನಿರಂತರ ಹಗಲುಗನಸು’ ಎಂದು ಟ್ವೀಟ್ ಮಾಡಿದ್ದಾರೆ.