ಕ್ಯಾನ್ಸರ್ ಖಾಯಿಲೆಯ ಚಿಕಿತ್ಸೆಗೆ ಲಕ್ಷಾಂತರ ಹಣ ಬೇಕಾಗಿರುವುದರಿಂದ ಅನೇಕ ಕುಟುಂಬಗಳು ಸಾಲಬಾಧೆಗೆ ಒಳಗಾಗುತ್ತಿದ್ದಾರೆ ಇದನ್ನು ತಪ್ಪಿಸಲು ಈ ಕೂಡಲೇ LICಯ ಈ ವಿಮೆಯನ್ನು ಮಾಡಿಸಿ!!

0
128

ಭಾರತೀಯ ಜೀವ ವಿಮಾ ನಿಗಮ (LIC) ಜನರಿಗೆ ಭರವಸೆಯ ಜೀವನವನ್ನು ನಡೆಸಲು ಹೊಸ ಹೊಸ ಯೋಜನೆಗಳನ್ನು ತರುತ್ತಿದ್ದು, ಅದರಲ್ಲಿ ದೊಡ್ಡ ಕಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್ ಬಗ್ಗೆ ಹಲವು ಉಪಯುಕ್ತ ವಿಮೆ ತಂದಿದ್ದು, ಕ್ಯಾನ್ಸರ್ ಕಾಯಿಲೆಗೆ ಬೇಕಾದ ಹಣದ ಚಿಂತೆಯಿಂದ ಜನರನ್ನು ದೂರ ಮಾಡಿದೆ. ಅದರಂತೆ ಪ್ರತಿದಿನ ಕೇವಲ 7 ರೂ. ಅಂತೆ ಪಾವತಿ ಮಾಡಿದರೆ. 50 ಲಕ್ಷ ವಿಮಾ ಮೊತ್ತವನ್ನು ಪಡೆಯಬಹುದು. ಅಂದರೆ ಕ್ಯಾನ್ಸರ್‌ನ ಆರಂಭಿಕ ಹಂತ ಮತ್ತು ನಂತರದ ಹಂತಗಳಿಗೆ ವಿಮಾ ಮೊತ್ತ ದೊರೆಯಲಿದೆ.

ಏನಿದು ಎಲ್ಐಸಿಯ ಹೊಸ ವಿಮೆ?

Also read: LIC ತಂದ ಹೊಸ ಪಾಲಿಸಿ’ ತಿಂಗಳಿಗೆ 420 ರೂ ಕಟ್ಟಿ 15 ಲಕ್ಷದವರೆಗೆ ವಿಮೆ ಪಡೆಯರಿ..

ಹೌದು ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಭಾರತೀಯ ಜೀವ ವಿಮಾ ನಿಗಮವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಹೊಸ ಯೋಜನೆಯಲ್ಲಿ ಪಾಲಿಸಿದಾರರಿಗೆ ಕ್ಯಾನ್ಸರ್‌ ರೋಗ ಉಂಟಾದರೆ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುವಂತೆ ವಿಮೆಯನ್ನು ಸಿದ್ಧಪಡಿಸಿದೆ. ಕಡಿಮೆ ಮೊತ್ತದ ಹೆಚ್ಚು ಲಾಭದಾಯಕವಾಗಿರುವ ಈ ಪಾಲಿಸಿಗೆ ವರ್ಷಕ್ಕೆ 2400 ರೂ.ಗಳನ್ನು ಪಾವತಿಸಬೇಕು. ಅಂದರೆ ಪ್ರತಿದಿನ ಕೇವಲ 7 ರೂ. ಅಷ್ಟೇ. ಕ್ಯಾನ್ಸರ್‌ನ ಆರಂಭಿಕ ಹಂತ ಮತ್ತು ನಂತರದ ಹಂತಗಳಿಗೆ ವಿಮಾ ಮೊತ್ತ ಸಿಗಲಿದ್ದು, ಈ ಯೋಜನೆಯಲ್ಲಿ ಮೆಚ್ಯೂರಿಟಿ ಲಾಭಗಳು ಸಿಗುವುದಿಲ್ಲ. ಹಾಗೆಯೇ ಸಾಲವನ್ನು ತೆಗೆದುಕೊಳ್ಳಲಾಗುವುದಿಲ್ಲ. ಈ ಯೋಜನೆಯಲ್ಲಿ ಪಾಲಿಸಿಯನ್ನು ಆನ್​ಲೈನ್​ ಮೂಲಕ ಖರೀದಿಸಿದರೆ ಶೇ.7ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

ಕ್ಯಾನ್ಸರ್ ಕವರ್ ಯೋಜನೆ?

Also read: ನೀವು LIC ಯಲ್ಲಿ ಜೀವ ವಿಮಾ ಮಾಡಿಸಿದ್ದೀರಾ, ಹಾಗಾದರೆ ನಿಮ್ಮ ವಿಮಾ ಹಣ ನಷ್ಟವಾಗಬಾರದು ಎಂದರೆ ಇದನ್ನು ಖಂಡಿತ ಓದಬೇಕು…!

ಈ ಪಾಲಿಸಿಯನ್ನು ಖರೀದಿಸಲು ಕನಿಷ್ಠ ವಯಸ್ಸು 20 ವರ್ಷ ಆಗಿರಬೇಕು, ಗರಿಷ್ಠ ವಯಸ್ಸು 65 ವರ್ಷ. ಅದರಂತೆ ಮೆಚ್ಯೂರಿಟಿಯ ಕನಿಷ್ಠ ವಯಸ್ಸು 50 ವರ್ಷ ಇರುತ್ತದೆ. ಮೆಚ್ಯೂರಿಟಿಯ ಗರಿಷ್ಠ ವಯಸ್ಸು 75 ವರ್ಷ. ಅದರಂತೆ ಕನಿಷ್ಠ ವಿಮಾ ಮೊತ್ತ 10 ಲಕ್ಷ ಆದರೆ ಗರಿಷ್ಠ ವಿಮಾ ಮೊತ್ತ 50 ಲಕ್ಷ ಆಗಿದೆ. ಪಾಲಿಸಿಯ ಕನಿಷ್ಠ ಅವಧಿ 10 ವರ್ಷ ಗರಿಷ್ಠ ಅವಧಿ 30 ವರ್ಷ ನಿಯಮದಂತೆ ಇರುತ್ತದೆ.

ಕ್ಯಾನ್ಸರ್ ಯೋಜನೆ ಲಾಭಗಳು ಏನು?

ಆರಂಭಿಕ ಹಂತ (Early Stage Cancer) ಇಲ್ಲಿ ಪಾಲಿಸಿದಾರರಿಗೆ ಆರಂಭಿಕ ಘಟ್ಟದ ಕ್ಯಾನ್ಸರ್‌ ಪತ್ತೆಯಾದರೆ ಶೇ.25ರಷ್ಟು ಖಾತರಿಯ ವಿಮೆ ಪರಿಹಾರ ಮೊತ್ತ ಸಿಗಲಿದೆ. ಅಲ್ಲದೆ ಮುಂದಿನ ಮೂರು ವರ್ಷಗಳ ತನಕ ಪ್ರಿಮಿಯಂ ನೀಡಬೇಕಾಗಿಲ್ಲ. ಆದರೆ ಈ ಪ್ರಯೋಜನಗಳನ್ನು ಕೇವಲ ಆರಂಭಿಕ ಹಂತದಲ್ಲಿ ಮಾತ್ರ ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ನಿಮ್ಮ ರೋಗವು ಆರಂಭಿಕ ಹಂತದಲ್ಲೇ ಗುರುತಿಸಲ್ಪಟ್ಟರೆ ಯಾವುದೇ ವಿಮೆಯನ್ನು ನೀಡಲಾಗುವುದಿಲ್ಲ. ಅಲ್ಲದೆ ನೀವು ಈಗಾಗಲೇ ಪ್ರಯೋಜನವನ್ನು ಪಡೆದುಕೊಂಡಿರುವುದರಿಂದ ನಿಮ್ಮ ವಿಮಾ ಮೊತ್ತವು ಪಾವತಿಸಿದ ವಿಮಾ ಮೊತ್ತಕ್ಕಿಂತ ಕಡಿಮೆ ಇರಲಿದೆ. ಕ್ಯಾನ್ಸರ್‌ ರೋಗ ಮಹತ್ವದ ಘಟ್ಟದಲ್ಲಿದ್ದರೆ, ಶೇ.100ರಷ್ಟು ಖಾತರಿಯ ಮೊತ್ತ ಪರಿಹಾರ ಸಿಗಲಿದೆ. ನೀವು ಆರಂಭಿಕ ಹಂತದಲ್ಲಿ ವಿಮೆಯನ್ನು ಪಡೆದುಕೊಂಡಿದ್ದರೆ ಈ ಮೊತ್ತವು ಕಡಿಮೆಯಾಗುತ್ತದೆ.

Also read: LIC ಪಾಲಸಿದಾರರ ಗಮನಕ್ಕೆ ಇನ್ನುಮುಂದೆ ಈ 111 ಪಾಲಸಿಗಳು ಇಲ್ಲ..

ವರಮಾನ ಲಾಭಗಳೇನು?

10 ವರ್ಷಗಳವರಗೆ ವಿಮೆ ಮೊತ್ತದ ಶೇ.1ರಷ್ಟು ನಿಮಗೆ ನೀಡಲಾಗುತ್ತದೆ. ಈ ವೇಳೆ ನೀವೇನಾದರೂ ಮೃತಪಟ್ಟರೆ, ಈ ಮೊತ್ತವು ನಾಮಿನಿಗೆ ಪಾವತಿಸಲಾಗುತ್ತದೆ. ಒಂದು ವೇಳೆ ಕ್ಯಾನ್ಸರ್​ನ ಮಹತ್ವದ ಘಟ್ಟದಲ್ಲಿದ್ದರೆ ನೀವು ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಅದೇ ರೀತಿಯ ನೀವು ನೇರವಾಗಿ ರೋಗದ ಎರಡನೇ ಹಂತದ ಪ್ರಯೋಜನಗಳನ್ನು ಪಡೆದುಕೊಂಡರೆ, ಆರಂಭಿಕ ಹಂತದ ಕ್ಯಾನ್ಸರ್ ಲಾಭಗಳನ್ನು ಪಡೆಯಲು ಸಾಧ್ಯವಿಲ್ಲ. ಪ್ರಮುಖ ಹಂತದ ಕ್ಯಾನ್ಸರ್ ವಿಮೆಯನ್ನು ಪಡೆದುಕೊಂಡ ಬಳಿಕ ನಿಮ್ಮ ಪಾಲಿಸಿಯು ಅಂತ್ಯಗೊಳುತ್ತದೆ. ಅದಕ್ಕಾಗಿ ಈ ಯೋಜನೆಯನ್ನು ಮುಂದೆ ಬರುವ ಕಾಯಿಲೆಗೆ ಬಗ್ಗೆ ಎಚ್ಚರವಹಿಸಿ ಮಾಡಿಕೊಳ್ಳುವುದು ಉತ್ತಮವಾಗಿದೆ.