ನಿಮಗೆ ಯಾರು ಸುಳ್ಳು ಹೇಳ್ತಿದಾರೆ ಅಂತ ತಿಳ್ಕೊಬೇಕಾ ಹೀಗೆ ಮಾಡಿ !!

1
4106

ಯಾರು ಸುಳ್ಳು ಹೇಳ್ತಿದಾರೆ ಅಂತ ತಿಳ್ಕೊಬೇಕಾ ಈ ಕೆಳಗಿನ ಅಂಶಗಳನ್ನು ಗಮನಿಸಿ

ಅವರು ಬೇಗನೆ ತಮ್ಮ ತಲೆ ಸ್ಥಾನವನ್ನು ಬದಲಾಯಿಸುತ್ತಾರೆ:

ನೀವು ಅವರಿಗೆ ಒಂದು ನೇರ ಪ್ರಶ್ನೆ ಕೇಳಿದರೆ ಇದ್ದಕ್ಕಿದ್ದಂತೆ ತಲೆಯ ಚಲನೆ ಹಿಂದಕ್ಕೂ ಮುಂದಕ್ಕೂ ,ಮೇಲಕ್ಕೂ ಕೆಳಕ್ಕು ಮಾಡಲು ನೋಡಿದರೆ ಅವರು ನಿಮಗೆ ಏನೋ ಸುಳ್ಳು ಹೇಳುತ್ತಿರಬಹುದು.

ಉಸಿರಾಟದ ಬದಲಾವಣೆಗಳನ್ನು ಗಮನಿಸಿ:

ಹೆಚ್ಚು ಉಸಿರಾಡುತ್ತಿರುತ್ತಾರೆ ,ಹೃದಯದ ಬಡಿತದಲ್ಲಿ ವ್ಯತ್ಯಾಸ ಉಂಟಾಗುತ್ತಿರುತ್ತದೆ, ದೇಹದ ಬದಲಾವಣೆಗಳನ್ನು ಗಮನಿಸಬಹುದು.

 

ಅಲುಗಾಡದೆ ಹಾಗೆ ನಿಂತಿರುತ್ತಾರೆ :

ನಾವು ಅಷ್ಟೊಂದು ಜ್ಞಾನ ನೀಡದೆ ದೇಹವನ್ನು ಅಲುಗಾಡಿಸುತ್ತ, ಸುತ್ತ ಮುತ್ತಲಿನ ವಸ್ತುಗಳನ್ನು ನೋಡುತ್ತಾ ಇರುತ್ತಾರೆ ಹಾಗೂ ಇದು ಸಹಜ ಕೂಡ ಆದರೆ ಕೆಲವು ವ್ಯಕ್ತಿಗಳು ತಮ್ಮ ದೇಹವನ್ನು ಅಲುಗಾಡಿಸದೆ , ಸಂಶಯಾಸ್ಪದವಾಗಿ ಇರುತ್ತಾರೆ .

ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರುತ್ತಾರೆ :

ಅವರು ಪದಗಳು ಮತ್ತು ನುಡಿಗಟ್ಟುಗಳನ್ನು ಪುನರಾವರ್ತಿಸಲು ಪ್ರಯತ್ನ ಪಡುತ್ತಿರುತ್ತಾರೆ ಅಂದರೆ ಅವರು ತಮ್ಮ ಮನಸಿನಲ್ಲಿ ಏನೋ ಅವಣಿಸಲು ಶುರು ಮಾಡಿರುತ್ತಾರೆ.

ತುಂಬಾ ಮಾಹಿತಿ ಒದಗಿಸಲು ಪ್ರಯತ್ನ ಮಾಡುತ್ತಾರೆ :

ತಾವು ಸತ್ಯವಂತರು ಎಂದು ಸಾಬೀತು ಪಡಿಸುವ ಸಲುವಾಗಿ ಬೇಡದ ಮಾಹಿತಿಯನ್ನು ಹಾಗೂ ತಾವು ಮುಚ್ಚು ಮರೆ ಇಲ್ಲದವರೆಂದು ಮಾಡುವ ಪ್ರಯತ್ನ ಇದಾಗಿದೆ .

ತಮ್ಮ ಬಾಯಿಯನ್ನು ಮುಚ್ಚಿ ಕೊಂಡು ಇರುವುದು :

ಅವರು ಸಮಸ್ಯೆಯನ್ನು ನಿಭಾಯಿಸಲು ಅಥವಾ ಪ್ರಶ್ನೆಯನ್ನು ಬಯಸುವುದಿಲ್ಲ ಹಾಗೂ ಸತ್ಯವನ್ನು ಹೇಳಲು ಬಯಸುವುದಿಲ್ಲ.

ಕಾಲನ್ನು ಹಿಂದೆ ಮುಂದೆ ಅಲುಗಾಡಿಸುತ್ತ ಇರುತ್ತಾರೆ :

ತಮ್ಮ ಕಾಲನ್ನು ಹಿಂದು ಮುಂದು ಅಲುಗಾಡಿಸುತ್ತ ಪರಿಸ್ಥಿತಿಯನ್ನು ಬಿಟ್ಟು ಸಂಧರ್ಭದಿಂದ ದೂರ ನಡೆಯಲು ಬಯಸುತ್ತಾರೆ.
ಮಾತನಾಡಲು ಕಷ್ಟ ಪಡುತ್ತಿರುತ್ತಾರೆ.

ಸುಳ್ಳು ಹೇಳುವವರ ನೋಟ ಸ್ಥಿರವಾಗಿರುತ್ತದೆ :

ಹೆಚ್ಚಿನ ಜನರು ಸತ್ಯ ಹೇಳುವಾಗ ಕೆಲವೊಮ್ಮೆ ಸುತ್ತ ತಮ್ಮ ಕಣ್ಣುಗಳನ್ನು ಬದಲಾಯಿಸುತ್ತ ಇರುತ್ತಾರೆ ಮತ್ತೊಂದೆಡೆ ಸುಳ್ಳು ಹೇಳುವವರ ನೋಟ ಸ್ಥಿರವಾಗಿರುತ್ತದೆ.