ಒಂದೇ ಒಂದು ಫೋಟೋ ಆತನ ಜೀವನವನ್ನು ಬದಲಾಯಿಸಿತು… ಟೀ ಮಾರುತ್ತಿದ್ದವನು 1000 ಕೋಟಿ ರೇಂಜ್’ಗೆ ಬೆಳೆದ…!

1
3671

ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರ ಜೀವನ ಬೇರೆ ಬೇರೆಯಾಗಿರುತ್ತದೆ. ಎಲ್ಲರ ಜೀವನ ಒಂದೇ ರೀತಿಯಲ್ಲಿ ಸಾಗುವುದಿಲ್ಲ. ಕೆಲವರು ತಾತ, ಅಪ್ಪನ ಆಸ್ತಿಯನ್ನು ಅಭಿವೃದ್ಧಿ ಮಾಡಿ ಆ ಆಸ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳತ್ತಾರೆ. ಇನ್ನೂ ಕೆಲವರು ತಮಗೆ ಇರುವ ಬುದ್ಧಿವಂತಿಕೆಯಿಂದ ಬೆಳೆಯುತ್ತಾರೆ. ಆದರೆ ಇವರಲ್ಲದೇ ಇನ್ನೂ ಕೆಲವರಿದ್ದಾರೆ. ಅವರು ಅಲ್ಲಿಯವರೆಗೆ ಸಾಧಾರಣ ಜೀವನ ಮಾಡುತ್ತಿರುತ್ತಾರೆ. ಆದರೆ ಯಾವುದೋ ಮಾರ್ಗದಿಂದ ಅದೃಷ್ಟ ಒಲಿದು ಬರುತ್ತದೆ. ಒಂದೇ ದಿನದಲಯ ಪಾಪ್ಯುಲರ್ ಆಗಿ ಸ್ಟಾರ್’ಗಳಾಗಿ ಬದಲಾಗುತ್ತಾರೆ. ಅಂತವರಲ್ಲಿ ಹರ್ಷದ್ ಖಾನ್ ಒಬ್ಬರು.

ಹರ್ಷದ್ ಖಾನ್’ದು ಪಾಕಿಸ್ತಾನ. ನಿತ್ಯ ಟೀ ಮಾರಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದ. ಆದರೆ ಸೋಷಿಯಲ್ ಮೀಡಿಯಾ ಆತನ ಪಾಲಿಗೆ ಆದೃಷ್ಟ ದೇವತೆ ಆಗಿ ಸಹಾಯ ಮಾಡಿತು. ಹೇಗೆಂತಿರಾ… ಹರ್ಷದ್ ಖಾನ್ ವೃತ್ತಿಯಲ್ಲಿ ಟೀ ಮಾರುವವನು ಆದರೆ ನೋಡುವುದಕ್ಕೆ ನೀಲಿ ಕಣ್ಣು, ದಷ್ಟಪುಷ್ಟಾದ ದೇಹ, ಎಲ್ಲರನ್ನು ಆಕರ್ಷಕ ನೋಟ ಇತ್ತು. ಹೀಗೆ ಒಂದು ದಿನ ಅಲ್ಲಿಗೆ ಬಂದ ಜಿಯಾ ಅಲಿ ಎಂಬ ಫೋಟೋಗ್ರಾಫರ್ ಮಹಿಳೆ ಟೀ ಮಾರುತ್ತಿದ್ದ ಹರ್ಷದ್ ಖಾನ್ ರವರ ಫೋಟೋವನ್ನು ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾಳೆ. ಇದರಿಂದ ಹರ್ಷದ್ ಖಾನ್ ರವರ ಜೀವನ ಆಶ್ಚರ್ಯಕರವಾಗಿ ಬದಲಾಗುತ್ತದೆ….

ಸೋಷಿಯಲ್ ಮೀಡಿಯಾದಲ್ಲಿ ಹರ್ಷದ್ ಖಾನ್’ನ ಫೋಟೋವನ್ನು ನೋಡಿದ ಒಂದು ಮಾಡಲ್ ಕಂಪನಿ ಅವರ ಕಂಪನಿಯಲ್ಲಿ ಮೇಲ್ ಮಾಡಲ್ ಆಗಿ ಹರ್ಷದ್ ಖಾನ್’ಗೆ ಆಪರ್ ನೀಡಿತು. ಅದಕ್ಕಾಗಿ ಕಂಪನಿ 1000 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಆತನ ಜೀವನ ತುಂಬಾ ಬದಲಾಯಿತು. ಬಹಳಷ್ಟು ಜನರು ಇವರ ಜೊತೆ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಕಾಯುತ್ತಿದ್ದಾರೆ. ಅದೃಷ್ಟ ಎಂದರೆ ಇದೇ ಅಲ್ವಾ…? ಚಾನ್ಸ್ ಸಿಕ್ಕಿದರೆ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ ಹರ್ಷದ್.