ವಯಸ್ಸಾದವರನ್ನು ವೃದ್ದಾಶ್ರಮಕ್ಕೆ ದೂಡುವ ಕಟುಕರಿಗೆ, ಈ ಕಥೆ ತೋರಿಸಿ; ಅವರ ಮನಸ್ಸೂ ಕರಗಬಹುದು!!

0
3607

ವಯಸ್ಸಾದವರನ್ನು ವೃದ್ದಾಶ್ರಮಕ್ಕೆ ದೂಡುವ ಕಟುಕರಿಗೆ, ಈ ಕಥೆ ತೋರಿಸಿ; ಅವರ ಮನಸ್ಸೂ ಕರಗಬಹುದು!!

ನೀವೆಲ್ಲರೂ ವಯಸ್ಸಾದ ಅಜ್ಜಿ-ಅಜ್ಜದಿರನ್ನು ಎಷ್ಟೊಂದು ಇಷ್ಟ ಪಡ್ತೀರ..? ಸೋಸೆಯಂದಿರು ಅತ್ತೆಯನ್ನು ಎಷ್ಟೊಂದು ಸರಿಯಾಗಿ ನೋಡಿಕೊಳ್ತಿರ..? ಮಕ್ಕಳು ವಯಸ್ಸಾದ ಅಪ್ಪ ಅಮ್ಮನನ್ನು ಎಷ್ಟೊಂದು ಪ್ರೀತಿಸುತ್ತಿರಾ? ಈ ಬ್ಯುಸಿ ಜೀವನದಲ್ಲಿ ಅದನ್ನೆಲ್ಲಾ ವಿಚಾರ ಮಾಡೋಕೆ ಟೈಮ್ ಇರೋದೇ ಇಲ್ಲ!! ಈ ವಿಚಾರವನ್ನು ಪ್ರತಿಯೊಬ್ಬರೂ ಒಂದೇ ನಿಮಿಷ ಬಿಡುವು ಮಾಡಿಕೊಂಡು ಥಿಂಕ್ ಮಾಡಿನೋಡಿ. ಹೇ ಇಲ್ಲ ಇಲ್ಲ ನಂಗೆ ಅವ್ರು ಯಾರು ಇಲ್ಲ ಮೊದಲೇ ಸತ್ತು ಹೋಗಿದ್ದಾರೆ ನನ್ನಗೆ ಯಾಕೆ? ಅಂತ ಪ್ರಶ್ನೆ ಮಾಡೋದು ಬೇಡ ಹುಟ್ಟಿದ ಮನುಷ್ಯ ಮುಗುವಾಗಿ ಅಪ್ಪ-ಅಮ್ಮ ಆಗಿ ಕೊನೆಗೆ ಅಜ್ಜಿ-ಅಜ್ಜ ಆಗಲೇಬೇಕು ಸೊ ಸ್ವಲ್ಪ ಪ್ರಾಮಾಣಿಕವಾಗಿ ಯೋಚನೆ ಮಾಡಿ ಇದನ್ನು ನೋಡಿ.

ನಿವೃತ್ತಿಯಾದ ಮೊದಲ ದಿನ ಮೊದಲು ಮಾಡುವ ಕೆಲಸವೆಂದರೆ ನನ್ನ ಅಮ್ಮನನ್ನು ವೃಧ್ಧಾಶ್ರಮಕ್ಕೆ ಸೇರಿಸುವುದು ನನ್ನ ಮನೆಯಲ್ಲಿ ನಾನು ಈ ಮಾತುಗಳನ್ನು ಹೇಳುತ್ತ ಹೇಳುತ್ತ ಸುಮಾರು ವರುಷವಾಯಿತು ಇನ್ನು ಈ ಕೆಲಸವನ್ನು ಮುಂದು ಹಾಕುವಂತಿಲ್ಲ ಯಾಕೆಂದರೆ ನಿನ್ನೆ ನನಗೆ ನಿವೃತ್ತಿ ಯಾಯಿತು ನನ್ನ ಹೆಂಡತಿ ಮಕ್ಕಳೆಲ್ಲ ಈ ದಿನಕ್ಕಾಗಿಯೇ ಕಾದು ಕುಳಿತವರಂತೆ ಇದ್ದಾರೆ ನನ್ನ ಅಮ್ಮ ಆರೊಗ್ಯವಾಗಿಯೇ ಇದ್ದವಳು ಸುಮಾರು ಎರಡೂವರೆ ವರುಷಗಳಿಂದ ಅನಾರೋಗ್ಯಕ್ಕೆ ಬಿದ್ದಳು ಇತ್ತೀಚೆಗೆ ಒಂದು ವರುಷದಿಂದ ಮಲ ಮೂತ್ರ ವಿಸರ್ಜನೆಯ ಮೇಲೆ ಕೂಡಾ ಅವಳಿಗೆ ನಿಯಂತ್ರಣವಿಲ್ಲ ಬೆಳಗ್ಗೆ ರಾತ್ರಿ ಅವಳನ್ನು ನಾನು ನೋಡಿ ಕೊಳ್ಳಬಲ್ಲೆ ಆದರೆ ನಾನು ಕೆಲಸಕ್ಕೆ ಹೋದಾಗ ಅವಳನ್ನು ನೋಡಿ ಕೊಳ್ಳಬೇಕಾದವಳು ಹೆಂಡತಿ, ವಯಸ್ಸಾದ ಮುದುಕಿ ನನಗೆ ತಾಯಿ, ನನ್ನವಳಿಗೆ ಅವಳು ತಾಯಿಯಾ..? ನನ್ನ ಸಿಡುಕಿನ ನೋಟಕ್ಕೆ ಬೆದರಿ ಇವಳು ಅತ್ತೆಯ ಚಾಕರಿ ಮಾಡುತ್ತಿದ್ದಾಳೆ ಆದರೆ ಇವಳ ಮುಖದಲ್ಲೊಂದು ತಿರಸ್ಕಾರದ ನೋಟ ಚಿರ ಸ್ಥಾಯಿಯಾಗಿ ನಿಂತ ಹಾಗೆ ನನಗೆ ಕಾಣಿಸುತ್ತಿದೆ ಇವಳಿಗಾದರೂ ಈ ಭಾವ ಸಹಜವೇ ಏಕೆಂದರೆ ಹೊರಗಿನಿಂದ ಬಂದವಳು ಅಲ್ವ? ಇವಳನ್ನು ಬಿಡಿ. ನನ್ನ ಮಕ್ಕಳಿಗೂ ಅನಾರೋಗ್ಯದ ಅಜ್ಜಿ ಬೇಡವೆನ್ನಿಸುವುದು ನನಗೆ ದಿಗಿಲು ಹುಟ್ಟಿಸಿದೆ, “ನನ್ನ ಮಗ ಮುಲಾಜಿಲ್ಲದೆ ಹೇಳಿದ್ದ ಅಮ್ಮಾ ನನ್ನ ಫ್ರೆಂಡ್ಸ್ ಇರುವಾಗ ಅಜ್ಜಿಯನ್ನು ಹೊರಗೆ ಬಿಡಬೇಡ” ನನ್ನ ಮಗಳು “ಅಬ್ಬಾ ಅಜ್ಜಿ ಗಬ್ಬು ನಾತ…ವ್ಯಾಕ್” ಅಂದಾಗ ಸಿಟ್ಟು ನೆತ್ತಿಗೇರಿತ್ತು. ಈ ಮಾತು ಆಡಿದು ನನ್ನ ಮಗಳು ಅಂದು ಸಹಿಸಿಕೊಂಡು ಮಕ್ಕಳೇ..ಸ್ವಲ್ಪ ಕಾಲ ಸುಮ್ಮನೆ ಇರಿ ಈ ನನ್ನ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ ಅಂದಿದ್ದೆ ಅದಕ್ಕೆ ಹೆಂಡತಿ ಮಕ್ಕಳೇನೋ ಸುಮ್ಮನಾದರು ಆದರೆ ಅಮ್ಮ ಅಂದಿನಿಂದ ಮತ್ತಷ್ಟು ಮೌನಿಯಾದಳು. ಅಂತು ಇಂದು ನಂಗೆ ನಿವೃತ್ತಿಯಾದ ಮೊದಲ ದಿನ ಅಮ್ಮನ ಪ್ರಾತಃ ವಿಧಿಗಳನೆಲ್ಲ ಮುಗಿಸಿ ನಾವು ಹೊರಟು ನಿಂತೆವು ಯಾಕೋ ಹೆಂಡತಿ ಮಕ್ಕಳೂ ಹೊರಟು ನಿಂತರು ಅಮ್ಮನ ಮುಖದಲ್ಲಿ ಕಳೆ ಇಲ್ಲ “ವೃಧ್ಧಾಶ್ರಮಕ್ಕೆ ಸೇರಿಸುತ್ತೇನೆ” ಎಂದ ಮಗನ ಮಾತು ಇವಳ ಕಿವಿಗೂ ಬಿದ್ದಿರಬೇಕು.

ಮಗ ಎಲ್ಲಿ ಕರೆದರೂ ಬರುವ ಅಮ್ಮ. ನಾವೆಲ್ಲರೂ ಕಾರಿನಲ್ಲಿ ಕುಳಿತೆವು ಮಗರಾಯ ಕಾರನ್ನು ಚಲಾಯಿಸುತ್ತೇನೆ ಅಂದ ಅವನಿಗೆ ಕೊಡದೆ ನಾನೇ ಕಾರನ್ನು ಚಲಾಯಿಸಿಕೊಂಡು ಬಂದೆ, ಒಂದು ಹಂಚಿನ ಮನೆಯ ಬಳಿ ಕಾರು ನಿಲ್ಲಿಸಿ ಹಾರನ್ ಮಾಡಿದೆ ಮನೆಯೊಳಗಿನಿಂದ ನನ್ನ ಗೆಳೆಯ ಓಡೋಡಿ ಬಂದ ನಾನು ಕಾರಿನ ಬಾಗಿಲು ತೆಗೆದು ಅಮ್ಮನನ್ನು ಕೆಳಗಿಳಿಸಿದೆ “ವೃದ್ಧಾಶ್ರಮ ಅಲ್ವಾ..?” ಹೆಂಡತಿ ಬಾಯಿ ತೆಗೆದಳು ನಾನು ಮಾತನಾಡದೆ ಅಮ್ಮನನ್ನು ಕರೆದು ಕೊಂಡು ಮನೆಯ ಒಳಗೆ ಬಂದೆ ಒಂದು ಬೆಡ್ ರೂಮ್ ಒಂದು ಹಾಲ್ ಒಂದು ಕಿಚನ್ ನನ್ನ ಗೆಳೆಯ ಸರಿಯಾದ ಚಿಕ್ಕ ಮನೆಯನ್ನೇ ಆಯ್ದು ಕೊಂಡಿದ್ದ ಬಾಡಿಗೆಯ ಮನೆ ಗೆಳೆಯ ಮನೆಯ ಕೀಲಿ ಕೈ ಕೊಟ್ಟು ಹೊರಟ. ಹೆಂಡತಿಯ ಪ್ರಶ್ನೆ ಏನಿದು ಆವಾಂತರ ಅತ್ತೆಯನ್ನು ಇಲ್ಲಿ ನೋಡಿ ಕೊಳ್ಳುವವರು ಯಾರು? ಅದಕ್ಕೆ ನನ್ನ ಉತ್ತರ “ಅವಳ ಮಗ ನಾನು ಜೀವಂತ ಇದ್ದೇನೆ”. ಅಂದರೆ ನೀವು ಇಲ್ಲಿ ನಿಂತು ಅಮ್ಮನನ್ನು ನೋಡಿ ಕೊಳ್ಳುತ್ತೀರಾ “ನಮ್ಮ ಗತಿ..? ನಾನು “ಮನೆಯ ಖರ್ಚು ನನ್ನದೇ” ಹೆಂಡತಿ ಮನೆಯಲ್ಲಿ ನೀವಿಲ್ಲದೆ ಇದ್ದರೆ ಭಯ ಅಗುತ್ತೆ, ಮಗ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ. ಏನು ಭಯವೇ ಅಂದೆ ಅವಳು “ಅಯ್ಯೋ ನೀವಿಲ್ಲದ ಮನೆಯೆ” ಕಣ್ಣಲ್ಲಿ ಗಂಗಾ ಪ್ರವಾಹ, ಅಮ್ಮನ ಕಣ್ಣಲ್ಲಿ ಅಶ್ರುಧಾರೆ ಅವಳನ್ನು ವೃದ್ದಾಶ್ರಮಕ್ಕೆ ಸೇರಿಸುತ್ತೇನೆ ಅಂದು ಕೊಂಡಿರಬೇಕು ಈಗ ಅವಳ ಕಣ್ಣಲ್ಲಿ ಸಂತೋಷ ಎಲ್ಲರು ಸ್ಥಭ್ದ ಚಿತ್ರದ ಹಾಗೆ ಮೂಗರಾಗಿದ್ದಾರೆ ಮಗ ಬಾಯಿ ತೆಗೆದ “ಅಪ್ಪಾ ಇದೆಲ್ಲ ಏನು Nonsense…? ನಾನೆಂದೆ “ಮಗಾ ನಿನಗೆ ನಿನ್ನ ಫ್ರೆಂಡ್ಸ್ ಮನೆಗೆ ಬರುವಾಗ ನನ್ನ ಅಮ್ಮ ಮನೆಯಲ್ಲಿದ್ದರೆ..ಅದು shame….ಅನ್ನಿಸುತ್ತಿತ್ತಲ್ಲ…ಅದು nonsense… ನಾನೂ ಅಮ್ಮ ಇಲ್ಲಿರುತ್ತೇವೆ..ನೀವು ಮನೆಗೆ ಹೋಗಿ ಮಗೂ..ಚೆನ್ನಾಗಿರಿ ಇದಕ್ಕೆ ಮಗಳು “ಅಜ್ಜಿಗೆ ನೀನೊಬ್ಬನೇ ಮಗನಾ” ಮೂರು ಮಂದಿ ಮಕ್ಕಳಲ್ವಾ…ನೀನೆ ಯಾಕೆ ಅಜ್ಜಿಯನ್ನು ನೋಡಿಕೊಳ್ಳ ಬೇಕು? ಇದು ಇವಳ ಮಾತಲ್ಲ ಅವಳ ಅಮ್ಮನಾಡಿದ ಮಾತು..ಅದನ್ನೇ ಹೇಳಿದಳು ಹೆಂಡತಿ ಏನೂ ತಿಳಿಯದ ಹಾಗೆ ಕುಳಿತಿದ್ದಾಳೆ. ಆಗ ನಾನು ಮಗಳೇ ನನಗಾಗ ಆರೇಳು ವರ್ಷ ಇರಬಹುದು ಅಪ್ಪ ತೀರಿ ಹೋಗಿ ಎರಡೋ ಮೂರೋ ವರ್ಷಗಳಾಗಿತ್ತು. ನನಗೆ ವಾಂತಿ ಬೇಧಿ ಆರಂಭವಾಯಿತು. ನಮ್ಮದು ಹಳ್ಳಿ… ವಾಹನದ ಸೌಕರ್ಯ ಇರಲಿಲ್ಲ ಹಳ್ಳಿಯ ನಾಟಿ ಮದ್ದು ನಾಟಲಿಲ್ಲ ಮಗೂ ನಾನು ಬದುಕುವ ಆಸೆ ಯಾರಿಗೂ ಇರಲಿಲ್ಲವಂತೆ. ಅರೆ ನಿರ್ಜೀವ ಸ್ಥಿತಿಯಲ್ಲಿದ್ದ ನನ್ನನ್ನು ಇದೇ ನನ್ನ ಅಮ್ಮ ಹೆಗಲ ಮೇಲೆ ಹಾಕಿ ಆರು ಮೈಲು ನಡೆದು ವೈದ್ಯರ ಹತ್ತಿರ ಇಂಜೆಕ್ಷನ್ ಚುಚ್ಚಿಸಿ ಮತ್ತೆ ಆರು ಮೈಲು ಹೊತ್ತು ನಡೆದು ಬದುಕಿಸಿದಳು ಇಂತಹ ಅಮ್ಮನಿಗೆ ಈಗ ಮಲ-ಮೂತ್ರದ ಮೇಲೆ ನಿಯಂತ್ರಣ ಇಲ್ಲ. ಮಗೂ, ಹೆಣ್ಣಾದ ನಿನಗೂ ನಿನ್ನಮ್ಮನಿಗೂ ಇದು ಅಸಹ್ಯ ಅಂತ ಆದರೆ ನನ್ನ ಅಣ್ಣಂದಿರ ಹೆಂಡಂದಿರಿಗೂ ನನ್ನ ಅಮ್ಮ ಈ ವೃದ್ದಾಪ್ಯದಲ್ಲಿ ಅಸಹ್ಯವೇ ಆಗುವಳು ಮಗೂ ಈ ಪ್ರಾಯದಲ್ಲಿ ಅವಳು ಯಾರಿಗಾದರೂ ಅಸಹ್ಯ ಅನ್ನಿಸಿದರೆ ಅವಳ ಮಗನಾದ ನನಗೆ ಹೇಗಾಗಬೇಡ…? ಬೇಡ ಮಗೂ ,ನನ್ನ ಅಮ್ಮ ನನಗೆ ಅಸಹ್ಯವಲ್ಲ ಸಾಯುವವರೆಗೆ ಸೇವೆ ಮಾಡುತ್ತೇನೆ ನೀವು ಹೋಗಿ ನಾನು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತೇನೆ ಅಮ್ಮಇರುವರಿಗೆ ಮಾತ್ರ.

ಹೆಂಡತಿ ಕೈಮುಗಿದು “ಬನ್ನಿ ನಮ್ಮದು ತಪ್ಪಾಯ್ತು ಅತ್ತೆಯನ್ನು ಅಮ್ಮ ಅಂತ ತಿಳಿದು ಕೊಳ್ಳುತ್ತೇನೆ ಮನೆಗೆ ಹೋಗುವ ಬನ್ನಿ ಅವಳಿಗೆ ಗಾಬರಿಯಾಗಿದೆ. ಮಕ್ಕಳೇ ನಾನು ಹೇಳುತ್ತೇನೆ ಈ ಮಲ ಮೂತ್ರಗಳೆಲ್ಲ ಮಾನವನ ಜೀವನದ ಅನಿವಾರ್ಯ ಸಂಗತಿಗಳು ಅದು ಬೇಡ ಅನ್ನಿಸಿದರೆ ಯಾವ ಹೆಣ್ಣೂ ಹೆರಲಾರಳು ಯಾವ ದಾದಿಯೂ ಕೂಡಾ ಸೇವೆ ಸಲ್ಲಿಸಲಾರಳು ಯಾವ ಡಾಕ್ಟರ್ ಕೂಡಾ ಡಾಕ್ಟರ್ ಅಗಲಾರ ಇನ್ನು ಬದುಕಿ ಉಳಿದರೆ ನಾನೂ ಮುದುಕನಾಗುತ್ತೇನೆ ಆರೋಗ್ಯದ ವಿಷಯ ನನ್ನ ಕೈಯಲ್ಲಿ ಇಲ್ಲ ನನ್ನಮ್ಮನಿಗಾದರೂ ನಾನಿದ್ದೆ ಈಗಿನ ಮಕ್ಕಳು ನಮ್ಮ ಕೊನೆಗಾಲದಲ್ಲಿ ಆಗುತ್ತಾರೆ ಎಂಬ ನಿರೀಕ್ಷೆಯೂ ತಪ್ಪೆ ನೀವು ಮನೆಗೆ ಹೋಗಿ ವೃದ್ಧರಿಲ್ಲದ ಮನೆ ಸ್ವಚ್ಛ ಸುಂದರ ಮತ್ತು ಹೋಗಿ ಬನ್ನಿ. ಮಗ ಕದಲಿ ಹೋದ ಅಪ್ಪಾ ಮಕ್ಕಳು ತಪ್ಪು ಮಾಡಿದರೆ, ತಪ್ಪಿದ್ದರೆ ಸರಿ ದಾರಿ ಹೇಳುವರು ಹಿರಿಯರು ನೀವು ನಮ್ಮ ಕಣ್ಣ ತೆರೆಸಿದಿರಿ ನಿಮ್ಮ ಅಮ್ಮನನ್ನು ನೀವು ನೋಡಿಕೊಂಡಂತೆ ನಾವು ಕೂಡ ಅಜ್ಜಿಯನ್ನೂ, ನಿಮ್ಮಿಬ್ಬರನ್ನೂ ಕೊನೆ ಕಾಲದವರೆಗೆ ಪ್ರೀತಿ ಗೌರವದಿಂದ ನೋಡಿ ಕೊಳ್ಳುತ್ತೇವೆ ಎಂದು ಮೂವರೂ ಅಳುತ್ತಾ ನನ್ನ ಕಾಲಿಗೆ ಬಿದ್ದರು ನಾನೆಂದೆ ನೀವು ಬೀಳಬೇಕಾದುದು ಅಮ್ಮನ ಕಾಲಿಗೆ ಎಂದೇ, ಸೊಸೆ ಮೊಮ್ಮಕ್ಕಳೂ ಅವಳ ಕಡ್ಡಿಯಂತಿರುವ ಕಾಲಿಗೆ ಬೀಳುವಾಗ ಅವಳ ಒಣ ಕಣ್ಣುಗಳು ಒದ್ದೆಯಾಗಿದ್ದವು.