ಒಂದು scene ಗೆ 1.2 ಕೋಟಿ ಖರ್ಚು ಮಾಡಿ , ಜೀವ ಉಳಿಸಲು 1000 ರೂಪಾಯಿ ಖರ್ಚು ಮಾಡಲಿಲ್ಲ ಯಾಕೆ??

0
1011

ಈ ಒಂದು climax 1.2 ಕೋಟಿ ಖರ್ಚು ಮಾಡಿದ ನಿರ್ಮಾಪಕ , 1000 ರೂಪಾಯಿಗೆ ಸಿಗೋ ಲೈಫ್ ಜಾಕೆಟ್ ಯಾಕೆ ತರಿಸಲಿಲ್ಲ ಎಂಬ ಪ್ರಶ್ನೆ ಕಾಡುತ್ತೆ .ರವಿವರ್ಮ ಸೇಫ್ಟಿ ಗೆ ಮೋಟಾರ್ ಬೋಟ್ ಗೆ ಅಂತ ಮೂರೂ ಲಕ್ಷ ರೂಪಾಯಿ ಇಸ್ಕೊಂಡು ಒಂದನ್ನೂ ತರಿಸಿರಲಿಲ್ಲವಂತೆ. ಅವತ್ತು ಅರ್ಧಕ್ಕೆ ಬಂದ ಕೆಟ್ಟುಹೋದ ಡೀಸೆಲ್ ಬೋಟ್ ತಿಪ್ಪಗೊಂಡನಹಳ್ಳಿಯ ಸರ್ಕಾರಿ ಬೋಟು.

duniya_vijay-pti

ಮಾಸ್ತಿಗುಡಿ ಹೀರೋ ದುನಿಯಾ ವಿಜಿ ಗೆ ಮಾತ್ರ ಸ್ಫಟಿ ಜಾಕೆಟ್ ಇತ್ತು, ಆದರೆ ಉದಯನ್ಮುಖ ಖಳನಟರಾದ ಅನಿಲ್ ಮತ್ತು ಉದಯ್ ಅವರಿಗೆ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ನೀರಲ್ಲಿ ನೀರಲ್ಲಿ ಧುಮುಕಲು ಸ್ಟಂಟ್ ಮಾಸ್ಟರ್ ರವಿ ಹೇಳಿದ್ದಾರೆ.

ಸತತ ಮೂರು ದಿನಗಳ ಶೋಧ ಕಾರ್ಯಚರಣೆ ಬಳಿಕ ನಟ ಅನಿಲ್ ರವರ ಮೃತದೇಹ ಇಂದು ಬೆಳಗ್ಗೆ ಪತ್ತೆ ಆಯ್ತು. ‘ಮಾಸ್ತಿ ಗುಡಿ’ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆದ ಸ್ಪಾಟ್ ನಿಂದ 50 ಮೀಟರ್ ದೂರದಲ್ಲಿ ಅನಿಲ್ ಶವ ತೇಲಿ ಬಂದ ಪರಿಣಾಮ, ಎನ್.ಡಿ.ಆರ್.ಎಫ್ ಸಿಬ್ಬಂದಿಗೆ ಅನಿಲ್ ಮೃತದೇಹ ಸಿಕ್ಕಿದೆ.

1478582640_two-male-actors-were-drowned-lake-near-bengaluru-monday-during-shooting-kannada-movie-while

ಕಲುಷಿತ ನೀರು; ಪಾಚಿ; ಜಲ-ಸಸ್ಯದಿಂದ ಕಾರ್ಯಚನರೆಗೆ ಅಡ್ಡಿ; ಅಗ್ನಿಶಾಮಕ ದಳದ ಮುಖ್ಯಸ್ಥರಾದ ಎಂ.ಏನ್.ರೆಡ್ಡಿಯವರಿಂದ ‘ಕಾರ್ವಾರ್ ಸೀಬಿರ್ಡ್’ ಅನಿಲ್ ಮತ್ತೆ ಉದಯ್ ಮೃತದೇಹ ಪತ್ತೆ ಮಾಡಿದರೆ

ಕೆರೆಯ ನೀರು ವಿಷಕಾರಿಯಾಗಿರುವುದಲ್ಲದೆ, ಪಾಚಿ, ಇತರೆ ಸಸ್ಯಗಳು ಮತ್ತು ಕೆಸರು ಇರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಬೆಂಗಳೂರಿನ ಕೊಳಚೆ ನೀರೇ ತುಂಬಿರುವ ಈ ಕೆರೆಯಲ್ಲಿ ಮೃತ ದೇಹ ಹುಡುಕುವುದು ದೊಡ್ಡ ಸವಾಲಾಗಿತ್ತು .

ವಿಷಕಾರಕ ಕೊಳಚೆ ನೀರು; 10-15 ಅಡಿ ಹೂಳು ತುಂಬಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಲು ಕಷ್ಟ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಶಿವರಾಜ್ಕುಮಾರ್, ಸಾಧು ಕೋಕಿಲ, ಪ್ರೇಮ್, ಬುಲೆಟ್ ಪ್ರಕಾಶ್, ನಿಖಿಲ್ ಕುಮಾರಸ್ವಾಮಿ ಮತ್ತು ಅನೇಕ ನಟರು ಸ್ಥಳಕ್ಕೆ ಭೇಟಿನೀಡಿದ್ದ್ರು.