ಶ್ರೀ ಧರ್ಮಸ್ಥಳ ಮಂಜುನಾಥ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ನ.24 ರಂದು ಆರಂಭ.

0
1183

ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಇಲ್ಲಿ ನೋಡಿದರಲೂ ವಿದ್ಯುತ್ ದೀಪಗಳಿಂದ  ಕಂಗೊಳಿಸುತ್ತಿತ್ತು. ಕ್ಷೇತ್ರ ಸೇರಿದಂತೆ ಪರಿಸರವೆಲ್ಲ ಬಣ್ಣ ಬಣ್ಣದಿಂದ ಪ್ರಕಾಶಮಾನವಾಗಿತ್ತು. ಮಂಜುನಾಥನಿಗೆ ಅತಿ ಪ್ರೀಯವಾದ ಲಕ್ಷದೀಪೋತ್ಸವವಕ್ಕೆ ಚಾಲನೆ ದೊರೆತಿದ್ದು 24-11-2016  to  29-11-2016. ಐದು  ದಿನಗಳ ಕಾಲ ಅದ್ದೂರಿ ದೀಪೋತ್ಸವ . ಬನ್ನಿ ಸಂಭ್ರಮದಲ್ಲಿ ಪಾಲ್ಗೊಳ್ಳೋಣ

ನವಂಬರ್ ತಿಂಗಳು ಕಾರ್ತಿಕ ಮಾಸದಲ್ಲಿ 5 ದಿನಗಳ ಕಾಲ  ದೀಪಾವಳಿ ಬೆಳಕಿನ ಹಬ್ಬ  ನಮ್ಮ ದೇಶದಲ್ಲಿ ತುಂಬ ಮಹತ್ವದ ಆಚರಣೆ. ದಕ್ಷಿಣ ಭಾಗದಲ್ಲಿ ಈ ಹಬ್ಬವನ್ನು ಇನ್ನು ವಿಶೇಷವಾಗಿ ಆಚರಿಸುತ್ತೇವೆ. ಕರ್ನಾಟಕದ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ಪ್ರತಿವರ್ಷ ನಡೆಯುವ ಲಕ್ಷದೀಪೋತ್ಸವವಂತೂ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವರ್ಷಂಪ್ರತಿ ನಡೆಯುವ ಲಕ್ಷದೀಪೋತ್ಸವ ಈ ಬಾರಿಯೂ ಅದ್ದೂರಿಯಾಗಿ ನಡೆಯಲಿದೆ. ಮಂಜುನಾಥನಿಗೆ ಅತಿ ಪ್ರಿಯವಾದ ಈ ದೀಪೋತ್ಸವಕ್ಕೆ ಹಿಂದಿನ ಕಾಲದಲ್ಲಿ ಮಂಜುನಾಥನ ಸನ್ನಿಧಿಯ ಸುತ್ತಲೂ ಒಂದು ಲಕ್ಷದೀಪಗಳನ್ನು (ಮಣ್ಣಿನ ಹಣತೆಗಳನ್ನು) ಉರಿಸಿತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ದೀಪಗಳಿಂದಲೇ ದೇವಾಲಯವನ್ನು ಶೃಂಗರಿಸಲಾಗುತ್ತದೆ. ಹೀಗಾಗಿ ಧರ್ಮಸ್ಥಳ ಮಂಜುನಾಥನ ಸನ್ನಿಧಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ.

ಕಾರ್ತಿಕ ಮಾಸದಂದು ಈ ಲಕ್ಷ ದೀಪೋತ್ಸವ ನಡೆಯುತ್ತಿದ್ದು ಕ್ಷೇತ್ರದ ದೇವರಾದ ಮಂಜುನಾಥ ಈ ಸಂದರ್ಭದಲ್ಲಿ ಕ್ಷೇತ್ರದಿಂದ ಹೊರಗೆ ಸಂಚರಿಸುತ್ತಾರೆ. ವಿವಿಧ ಪ್ರದೇಶಗಳಿಂದ ಮಂಜುನಾಥನ ಮೂರ್ತಿಯೊಂದಿಗೆ ಮೆರವಣಿಗೆ ಸಾಗಿ ಪ್ರಮುಖ ಐದು ಕಟ್ಟೆಗಳ್ಳಿ ವಿಶೇಷ ಪೂಜೆ ಪಡೆಯುತ್ತಾರೆ. ದೀಪೋತ್ಸವದ ಪ್ರಯುಕ್ತ ಬೆಳ್ಳಿಯ ರಥೋತ್ಸವವೂ ಈ ಸಂಧರ್ಭ ಅದ್ದೂರಿಯಾಗಿ ನಡೆಯಿಲಿದೆ. ದೇಶ ವಿದೇಶಗಳಿಂದ ಆಗಮಿಸಲಿರುವ ಲಕ್ಷಾಂತರ ಮಂದಿ ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥತಿಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲಿವೆ. ಎಲ್ಲಾದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ವರ್ಷದ ದೀಪೋತ್ಸವವು ನ.24 ರಿಂದ ನ. 29ರವರೆಗೆ  ನಡೆಯಲಿದೆ. ಬನ್ನಿ ಸಂಭ್ರಮದಲ್ಲಿ ಪಾಲ್ಗೊಳ್ಳೋಣ.