ಶಿವಲಿಂಗದ ನಾನಾ ರೂಪಗಳ ಬಗ್ಗೆ ತಿಳಿಸಿಕೊಡ್ತೀವಿ ಬನ್ನಿ!!

0
944

ಬಹುರೂಪಿ ಶಿವಲಿಂಗ

ಶಿವನನ್ನು ಮೂರ್ತಿರೂಪದಲ್ಲಿ ಚಿತ್ರಗಳಲ್ಲಿ ನೋಡಿದರೂ ಎಲ್ಲ ದೇವಾಲಯಗಳಲ್ಲೂ ಶಿವನಿಗೆ ಲಿಂಗರೂಪದಲ್ಲೇ ಪೂಜೆ ನಡೆಯುತ್ತದೆ. ಎಲ್ಲ ಲಿಂಗಗಳೂ ಒಂದೇ ರೀತಿಯಲ್ಲಿದ್ದರೂ ಆಕಾರ, ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ. ಶಿವನ ವಿಗ್ರಹದ ದೇವಾಲಯವಿದ್ದರೂ ಶಿವಲಿಂಗದ್ದೇ ವಿಶೇಷತೆ. ಭಾರತದ ಅಮರನಾಥ ಗುಹಾ ದೇವಾಲಯದಲ್ಲಿ ವರ್ಷದ ನಿರ್ಧಿಷ್ಟ ಅವಧಿಯಲ್ಲಿ ಮಂಜುಗಡ್ಡೆಯಿಂದ ರೂಪುಗೊಂಡ ಶಿ ಲಿಂಗ ಗೋಚರಿಸುತ್ತದೆ. ಹಲವಾರು ವೈಶಿಷ್ಟ್ಯತೆಗಳನ್ನೊಳಗೊಂಡ ಶಿವಲಿಂಗಗಳು ಕೌತುಕ ಹುಟ್ಟಿಸುವ ಪರಿ ಇಲ್ಲಿದೆ.

ಹಂಪಿಯ ಶಿವಲಿಂಗ

ಕರ್ನಾಟಕದ ಹಂಪಿಯ ತುಂಗಭದ್ರಾ ದಡದಲ್ಲಿರುವ ಕಲ್ಲು ಬಂಡೆಗಳ ಮೇಲಿನ ಕಲ್ಲು ಹಾಸಿನ ಮೇಲಿರುವ ವಿಶಿಷ್ಟ ಶಿವಲಿಂಗಗಳಿವೆಉ. ಇಲ್ಲಿ 1008 ಶಿವಲಿಂಗಗಳಿದ್ದು, ಪ್ರವಾಸಿಗರ ಗಮನ ಸೆಳೆಯುತ್ತವೆ. ಒಂದೇ ಸ್ಥಳದಲ್ಲಿ ಇಷ್ಟೂ ಲಿಂಗಗಳನ್ನು ಕೆತ್ತಿರುವುದು ವಿಶೇಷ.

ಹೊಯ್ಸಳೇಶ್ವರ ಸನ್ನಿಧಿ

ದೈವಸನ್ನಿಧಿ ಮನದಲ್ಲಿ ಭಕ್ತಿಭಾವ ಉಂಟುಮಾಡುತ್ತದೆ. ಗರ್ಭಗುಡಿಯ ಬಾಗಿಲು ತೆರೆದೊಡನೆ ಕಣ್ಣಿಗೆ ಹಬ್ಬವುಂಟುಮಾಡುವ ಈ ಈಶ್ವರ ಹಾಸನ ಜಿಲ್ಲೆಯ ಹೊಯ್ಸಳೇಶ್ವರ ದೇಗುಲದ ಹೊಯ್ಸಳೇಶ್ವರ.

ಕೋಟಿ ಲಿಂಗೇಶ್ವರ
ಕರ್ನಾಟಕದ ಕೋಲಾರದಲ್ಲಿರುವ ಕೋಟಿ ಲಿಂಗೇಶ್ವರ ಸನ್ನಿಧಿ. ಬೃಹತ್ ಶಿವಲಿಂಗದ ಜೊತೆಗೆ ಈ ದೇವಾಲಯ ಸಂಕೀರ್ಣ ಹಾಗೂ ಸುತ್ತಮುತ್ತಲಿನ ಲಕ್ಷ ಲಕ್ಷ ಸಂಖ್ಯೆಯಲ್ಲಿ ಶಿವಲಿಂಗಗಳನ್ನು ಸ್ಥಾಪಿಸಲಾಗಿದೆ. ದಾರಿಯೆಲ್ಲೆಡೆ ಕಾಣಸಿಗುವ ಶಿವಲಿಂಗಗಳು ಮನಕ್ಕೆ ಮುದ ನೀಡುತ್ತವೆ.

ಪ್ರಕೃತಿ-ಪುರುಷ ಸಮಾಗಮ

ಮಧ್ಯಪ್ರದೇಶದ ಮಹೇಶ್ವರದಲ್ಲಿ ಹರಿಯುವ ನರ್ಮದಾ ನದಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಶಿವಲಿಂಗ ಹಾಗೂ ನಂದಿ. ಇದು ಪ್ರಕೃತಿ-ಪುರುಷ ಸಮಾಗಮ ಸೂಚಕವಾಗಿದ್ದು, ಪವಿತ್ರ ತಾಣವೆನಿಸಿದೆ. ಇಲ್ಲಿನ ಸ್ನಾನ ಪಾಪಗಳನ್ನು ನಿವಾರಿಸುತ್ತದೆಂಬ ನಂಬಿಕೆ ಇದೆ.

ಮುಖಲಿಂಗ
ಮಧ್ಯಪ್ರದೇಶದ ವಿದಿಶಾದಲ್ಲಿ ಈ ಶಿವಲಿಂಗವಿದೆ. ಉದಯಗಿರಿ ಗುಹೆಗಳಲ್ಲಿ ಕಂಡುಬರುವ ಮುಖಲಿಂಗವಿದು. ಈ ಬಗೆಯ ಶಿವಲಿಂಗ ತೀರ ಅಪರೂಪವಗಿದ್ದು, ಸಾಕಷ್ಟು ವಿಶೇಷವಾದ ವಿನ್ಯಾಸ ಹೊಂದಿರುವ ಶಿವಲಿಂಗವೆನಿಸಿದೆ.

ಕೇದಾರೇಶ್ವರ

ನೀರಿನಿಂದ ಆವೃತವಾಗಿರುವ ಈ ಶಿವಲಿಂಗಕ್ಕೆ ನಾಲ್ಕು ಕಂಬಗಳ ಚಾವಣಿಯಿದ್ದು, ಈ ಕಂಬಗಳು ಯುಗಗಳ ಸೂಚಕವಾಗಿದೆ. ಅದರಲ್ಲೀಗಾಗಲೇ ಮೂರು ಕಂಬಗಳು ಹಾಳಾಗಿದ್ದು, ಮೂರು ಯುಗಗಳು ಮುಗಿದಿರುವುದರ ಸೂಚಕವಾಗಿದೆ. ಮಹಾರಾಷ್ಟ್ರದ ಹರಿಶ್ವಂದ್ರಗಡ್‍ನ ಕೇದಾರೇಶ್ವರ ದೇವಾಲಯದಲ್ಲಿ ಈ ಲಿಂಗವಿದೆ.

ಜಂಬುಕೇಶ್ವರರ್ ದೇವಾಲಯ

ಭಕ್ತಿಯಿಂದ ಪೂಜಿಸುವವರಿಗೆ ಸಕಲ ಸಂಪತ್ತು, ಯಶಸ್ಸು ದೊರೆಯುವುದೆಂಬ ನಂಬಿಕೆ ಇದೆ. ತಮಿಳುನಾಡಿನ ಶ್ರೀರಂಗಂನ ತಿರುವನೈಕೋಯಿಲ್ ನಲ್ಲಿ  ಜಂಜುಕೇಶ್ವರ ದೇಗುಲದ ಈ ಶಿವಲಿಂಗ ಸಂಪತ್ತು ನೀಡುವ ಸೂಚಕವಾಗಿರುವುದರಿಂದ ಇದ್ನು ಕುಬೇರಲಿಂಗ ಎನ್ನುತ್ತಾರೆ.

Also read: ಶಿವಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಬಿಲ್ವಪತ್ರೆಯೊಂದಿದ್ದರೆ ಸಾಕು, ವಾಸ್ತು ದೋಷ ನಿವಾರಣೆಯಾಗಿ ನಾವು ಮಾಡಿದ ಪಾಪಗಳೂ ನಿವಾರಣೆ ಆಗುತ್ತದೆ ಅಂತೇ..!!