ಲಿಂಗ ದೀಕ್ಷೆ ಪಡೆದ ಆಸ್ಟ್ರೇಲಿಯಾದ ಮಹಿಳೆ

0
943

ವಿದೇಶಿ ಮಹಿಳೆಯೊಬ್ಬರು ಲಿಂಗ ದೀಕ್ಷೆ ಪಡೆಯುವ ಮೂಲಕ ಹಿಂದೂ ಧರ್ಮವನ್ನು ರಾಧಾಕೃಷ್ಣ ನಗರದ ಬಸವರಾಜ್ ಹಡಗಲಿ ಎಂಬುವವರ ಮನೆಯಲ್ಲಿ ಸ್ವೀಕರಿಸಿದರು. ಹಿಂದೂ ಪದ್ದತಿಯನ್ನು ಮೆಚ್ಚಿಕೊಂಡಿರುವುದರಿಂದ ಲಿಂಗ ದೀಕ್ಷೆ ಯನ್ನು ಪಡೆದುಕೊಂಡಿದ್ದರೆಂದು ತಿಳಿಸಿದ್ದಾರೆ.

image source: PublicTV

ಕರಿಯಾನ್ ಲಿಂಗ ದೀಕ್ಷೆ ಪಡೆಯುವದರ ಮೂಲಕ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಇವರು ಮೂಲತಃ ಆಸ್ಟ್ರೇಲಿಯಾದ ಪ್ರಜೆ. ಪತಿಯಿಂದ ದೂರವಾಗಿರುವ ಕರಿಯಾನ್ ಸದ್ಯ ಹಾಲೆಂಡ್‍ನಲ್ಲಿ ಒಂದು ಗಂಡು ಮಗು ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದಾರೆ.

ಕಾಶಿ ಜಗದ್ಗುರುಗಳು ಧಾರವಾಡ ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿದು ಅವರ ನೇತೃತ್ವದಲ್ಲಿ ಕ್ರಿಶ್ಚಿಯನ್ ಧರ್ಮ ತ್ಯಜಿಸಿ ಹಿಂದು ಧರ್ಮಕ್ಕೆ ಮತಾಂತರಗೊಂಡರು. ಕಾಶಿ ಜಗದ್ಗುರಗಳು ಕರಿಯಾನ್ ಅವರಿಗೆ ಗಂಗಾ ಎಂದು ಮರುನಾಮಕರಣ ಮಾಡಿದರು.

ಹಿಂದೂ ಪದ್ದತಿಯನ್ನು ಮೆಚ್ಚಿಕೊಂಡಿರುವ ಕರಿಯಾನ್, ದೀಕ್ಷೆ ಪಡೆಯುವಾಗ ಹಸಿರು ಬಣ್ಣದ ರೇಷ್ಮೆ ಸೀರೆ ತೊಟ್ಟಿದ್ದರು. ಇಷ್ಟಲಿಂಗವನ್ನು ಅಂಗೈಯಲ್ಲಿ ಇಟ್ಟುಕೊಂಡು ‘ಓಂ ನಮಃ ಶಿವಾಯ’ ಎಂಬ ಪಂಚಾಕ್ಷರಿ ಮಂತ್ರ ಪಠಿಸಿದರು. ಕರಿಯಾನ್ ರವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು. ಹಿಂದು ಧರ್ಮಕ್ಕೆ ಮತಾಂತರ ಬದಲಿಸುವುದಕ್ಕೋಸ್ಕರ ಮಾಂಸಹಾರವನ್ನು ಬದಲಾಯಿಸಿ ಸಂಪೂರ್ಣ ಸಸ್ಯಾಹಾರಿಯಾಗಿದ್ದೇನೆ ಎಂದು ಕರಿಯಾನ್ ಪಬ್ಲಿಕ್ ಟಿವಿ ಗೆ ಹೇಳಿದರು.