ಕೆಲವೊಮ್ಮೆ ಪ್ರಾಣಿಗಳಿಗೆ ಇರುವ ಮಾನವೀಯತೆ ಮನುಷ್ಯನಿಗಿರುವುದಿಲ್ಲ.. ಈ ಕಥೆ ಓದಿ ನೀವೆ ನಿಜ ಎನ್ನುವಿರಿ..

0
636

ಹೌದು ಒಮ್ಮೊಮ್ಮೆ ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಹೇಳಲಾಗದು.. ಅದರಲ್ಲೂ ಮನುಷ್ಯನ ಕಷ್ಟದ ಸಮಯದಲ್ಲಿ ಮಾನವೀಯತೆ ಇಲ್ಲದೇ ನಡೆದುಕೊಳ್ಳುವವರೇ ಹೆಚ್ಚು.. ಇಲ್ಲೊಂದು ಕಥೆ ಇದೆ ಓದಿ ನೋಡಿ ಇದು ಬೇರೆ ತರಹದ ಪುಣ್ಯಕೋಟಿಯ ಕಥೆ.. ಆದರೇ ಇಲ್ಲಿ ಪುಣ್ಯಕೋಟಿ ಒಂದು ಸಿಂಹ ಎಂದರೇ ನೀವು ನಂಬಲೇಬೇಕು..  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಓಡಾಡುತ್ತಿದ್ದ ವೀಡಿಯೋ ಒಂದನ್ನು ಅಕ್ಷರ ರೂಪಕ್ಕೆ ತಂದಿರುವೆನು.. ಇಷ್ಟವಾದರೇ ಶೇರ್ ಮಾಡಿ..

ಕಾಡಿನಲ್ಲಿ ಸಿಂಹವೊಂದು ಜಿಂಕೆಯ ಮರಿಯನ್ನು ಪೋಷಣೆ ಮಾಡುತ್ತಿದ್ದ ವೀಡಿಯೋ ನೋಡಿ ನನಗೆ ಆಶ್ಚರ್ಯವೇ ಆಯಿತು.. ಹೌದು ಒಂದು ಹೊತ್ತಿನ ಊಟಕ್ಕಾಗಿ ಬೇಟೆಯಾಡುವ ಸಿಂಹವೊಂದು ಜಿಂಕೆಯ ಮರಿಯೊಂದಿಗೆ ಆಡುತ್ತಾ ಅದರ ಮುಖವನ್ನು ತಾಯಿಯಂತೆ ಸವರುತ್ತಾ ನಲಿದಾಡಿಕೊಂಡಿತ್ತು.. ಜಿಂಕೆಯ ಮರಿಯು ಕೂಡ  ಆ ಸಿಂಹವನ್ನು ತನ್ನ ಹೆತ್ತತಾಯಿಯೇ ಎಂದು ಭಾವಿಸಿತ್ತು… ಸ್ವಲ್ಪವೂ ಭಯವಿಲ್ಲದೇ ಆ ಸಿಂಹದೊಂದಿಗೆ ಸಲುಗೆಯಿಂದ ಆಡುತಿತ್ತು.. ಹೀಗಿರುವಾಗ,  ಬೇಟೆಗಾಗಿ ಕಾಯುತ್ತಿದ್ದ ಬೇರೊಂದು ಸಿಂಹ, ಜಿಂಕೆಯ ಮರಿಯನ್ನು ನೋಡಿ ಹೊಂಚು ಹಾಕಿ ತನ್ನ ಹಸಿವನ್ನು ನೀಗಿಸಿಕೊಳ್ಳಲು ಆಕ್ರಮಣ ಮಾಡಿತು.. ಓ ಇನ್ನೇನು ಈ ಜಿಂಕೆ ಮರಿಯ ಕಥೆ ಮುಗಿಯಿತೆಂದುಕೊಂಡೆ ಆದರೇ ಅದನ್ನು ಸಾಕಿ ಸಲಹುತಿದ್ದ ಇನ್ನೊಂದು ಸಿಂಹಕ್ಕೆ ತನ್ನ ಸ್ವಂತ ಮಗುವಿನ ಮೇಲೆ ಆಕ್ರಮಣವಾಯಿತೇನೋ ಅನ್ನುವ ಹಾಗೆ.. ಆ ಆಕ್ರಮಣ ಮಾಡಿದ ಸಿಂಹದ ಜೊತೆ ಹೋರಾಡಿ ಜಿಂಕೆ ಮರಿಯನ್ನು ಬಿಡಿಸಿಕೊಂಡು ಬಂದು ಅದನ್ನು ತನ್ನ ಕತ್ತಿನ ಕೆಳಗೆ ಇಟ್ಟುಕೊಂಡು ನಾಲಿಗೆ ಇಂದ ನೇವರಿಸುತಿತ್ತು.. ಇದನ್ನು ಕಂಡ ಇನ್ನೊಂದು ಸಿಂಹ ಬೇರೆ ಆಹಾರ ಹುಡುಕಿಕೊಂಡು ತನ್ನ ಪಾಡಿಗೆ ತಾನು ಹೋಯಿತು..  ಅದಕ್ಕೆ ನಾನು ಈ ಮುಂಚೆ ಹೇಳಿದ್ದು ಇಲ್ಲಿ ಸಿಂಹವೇ ಪುಣ್ಯಕೋಟಿಯೆಂದು..

ದುರಾಸೆ ತುಂಬಿದ ಮನುಷ್ಯನೆಲ್ಲಿ.??. ತನ್ನ ಹಸಿವಿಗೆ ಬೇಟೆಯಾಡುವ ಪ್ರಾಣಿಯೊಂದು.. ಆಹಾರವಾಗುವ ಮರಿಯೊಂದು ಎದುರಿಗೆ ಇದ್ದರೂ ಅದಕ್ಕೆ ತಾಯಿ ಪ್ರೀತಿ ಕೊಟ್ಟು ಸಲಹುತ್ತಿರುವ ಪ್ರಾಣಿಯೆಲ್ಲಿ.??.

 

ಎಷ್ಟೋ ಭಾರಿ ಮಾನವೀಯತೆಯ ಪಾಠವನ್ನು ನಾವು ಪ್ರಾಣಿಗಳಿಂದಲೇ ಕಲಿಯಬೇಕು… ಹೌದಾದರೇ ಶೇರ್ ಮಾಡಿ ಇತರರಿಗೂ ಈ ಕಥೆ ತಿಳಿಯಲಿ…