ಅಲರ್ಜಿ ನೆಗಡಿ ಎಂಬ ಕಿರಿಕಿರಿಗೆ ಮನೆ ಮದ್ದು..!!

0
2436

ಅತಿಮಧುರ ಎಂದು ಕನ್ನಡದಲ್ಲಿ ಕರೆಯುಈ ಮೂಲಿಕೆ ರುಚಿಯಲ್ಲಿ ಸಿಹಿ-ಮಧುರ, ಶೀತಲ ನೇತ್ರಹಿತಕಾರಿ, ತಾಯಿಯಂದಿರ ಎಡೆ ಹಾಲನ್ನು ವೃದ್ಧಿಸುವುದು. ದೇಹದ ಹಲವು ದೋಷಗಳನ್ನು ನಿವಾರಣೆ ಮಾಡಿ, ಆರೋಗ್ಯವನ್ನು ವೃದ್ಧಿಸುವುದು. ಜೇಷ್ಠಮಧುರವು ಟಾನಿಕ್ ಇದ್ದ ಹಾಗೆ. ಎಲ್ಲ ಗ್ರಂಧಿಗೆ ಅಂಗಡಿಗಳಲ್ಲಿ ಇದು ದೊರೆಯುತ್ತದೆ.

ಅತಿಮಧುರ ಬಹಳ ಉಪಯುಕ್ತ ವಸ್ತು. ಇದನ್ನು ಮುಖ್ಯವಾಗಿ ಗಂಟಲಿನ ಉರಿ, ಶ್ಲೇಷಪದರದ ಉರಿ, ಮೂತ್ರವಿಸರ್ಜನೆಗೆ ಸಂಬಂಧಪಟ್ಟ ಅಂಗಗಳ ಉರಿ, ಕೆಮ್ಮು ಮುಂತಾದುವುಗಳಿಗೆ ಉಪಯೋಗಿಸುತ್ತಾರೆ. ಕೆಮ್ಮಿನ ಎಲ್ಲ ಕಷಾಯಗಳಲ್ಲೂ ಕೆಮ್ಮಿದಾಗ ಚೀಪಲು ಕೊಡುವ ಎಲ್ಲ ಮಾತ್ರೆಗಳಲ್ಲೂ ಅತಿಮಧುರವಿದ್ದೇ ಇರುತ್ತದೆ. ಕಷಾಯಗಳಿಗೆ ಮತ್ತು ಇನ್ನಿತರ ಔಷಧಿಗಳಿಗೆ ಇದು ಒಳ್ಳೆಯ ವಾಸನೆ ಕೊಡುತ್ತದೆ. ಅತಿಮಧುರ ಲಘುವಿರೇಚಕವೂ ಹೌದು. ಅತಿಮಧುರದ ಸಾರಕ್ಕೆ ಕರುಳಿನ ಹುಣ್ಣನ್ನು ಗುಣಪಡಿಸುವ ಶಕ್ತಿ ಇದೆ. ಈ ರಸ ಕರುಳಿನಲ್ಲಿ ಹೈಡ್ರೊಕ್ಲೋರಿಕ್ ಆಮ್ಲದ ಉತ್ಪತ್ತಿಯನ್ನು ತ್ವರಿತಗೊಳಿಸುತ್ತದೆ. ಅತಿಮಧುರವನ್ನು ವೀಳೆಯದೆಲೆಯೊಂದಿಗೆ ಹಾಕಿಕೊಳ್ಳುವ ಅಭ್ಯಾಸ ಇದೆ. ಇದರ ಪುಡಿಯನ್ನು ತುಪ್ಪ ಮತ್ತು ಜೇನು ತುಪ್ಪದೊಂದಿಗೆ ಬೆರಸಿ ಗುಣಪಡಿಸಲು ಉಪಯೋಗಿಸುತ್ತಾರೆ.

ಗಂಟಲು ಬೇನೆ ಮತ್ತು ಕೆಮ್ಮು ನಿವಾರಣೆಗೆ:
ಜೇಷ್ಠಮಧುವಿನ ತುಂಡನ್ನು ಬಾಯಿಯಲ್ಲಿ ಇಟ್ಟುಕೊಂಡು ರಸವನ್ನು ನುಂಗುತ್ತಿರಬೇಕು. ಇಲ್ಲವೇ ಜೇಷ್ಠಮಧುವಿನ ನಯವಾದ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು.

ಮೂತ್ರ ದೋಷ, ಸ್ತ್ರೀಯ ಅಧಿಕ ಮುಟ್ಟು ಸ್ರಾವ ತಡೆಗಟ್ಟಲು, ಬಿಳೀ ಸೆರಗು ಹಾಗು ಗರ್ಭಾಶಯದ ದೋಷಗಳ ನಿವಾರಣೆಗೆ:
ಕಾಲು ಚಮಚ ಜೇಷ್ಠಮಧುವಿನ ಚೂರ್ಣಕ್ಕೆ ಅರ್ಧ ಚಮಚ ಕಲ್ಲು ಸಕ್ಕರೆ ಬೆರೆಸಿ ಬೆಳೆಗ್ಗೆ ಮತ್ತು ಸಂಜೆ ತಿಂದು ಬಿಸಿ ನೀರನ್ನು ಕುಡಿಯಬೇಕು.

ದೇಹದ ಶಕ್ತಿ ವರ್ಧನೆಗೆ, ಅರೋಗ್ಯ ಸುಧಾರಣೆಗೆ:
ಜೇಷ್ಠಮಧುವಿನ ಚೂರ್ಣ ೨ ರಿಂದ ೪ ಗ್ರಾಂ ಚೂರ್ಣವನ್ನು ಶುದ್ಧ ತುಪ್ಪ ಇಲ್ಲವೇ ಜೇನು ತುಪ್ಪದೊಂದಿಗೆ ಪ್ರತಿದಿನ ಬೆಳೆಗ್ಗೆ (೩-೬ ತಿಂಗಳು) ಸೇವಿಸಬೇಕು. ಇಡೀ ದೇಹ ಉತ್ತೇಜನಗೊಳ್ಳುತ್ತದೆ. ಪಥ್ಯವನ್ನು ಅನುಸರಿಸಿ ಸೇವಿಸಿದರೆ, ಅಧಿಕ ಲಾಭ ತಪ್ಪದೆ ದೊರೆಯುವುದು. ಉಷ್ಣ ಕಾರಕ ಪದಾರ್ಥಗಳನ್ನು ವರ್ಜಿಸಬೇಕು.

ಅಪಸ್ಮಾದಕ್ಕೆ:
ಜೇಷ್ಠಮಧುವಿನ ಚೂರ್ಣ ೫ ಗ್ರಾಂ, ತಗರ (Valerian) ಎಂಬ ಮೂಲಿಕೆ (ಗ್ರಂಧಿಗೆ ಅಂಗಡಿಗಳಲ್ಲಿ ಇದು ದೊರೆಯುತ್ತದೆ) ೫ ಗ್ರಾಂ ಚೂರ್ಣಗಳನ್ನು ಮಿಶ್ರಮಾಡಿ ಜೇನಿನೊಂದಿಗೆ ಬೆಳೆಗ್ಗೆ ಸಂಜೆ ಸೇವಿಸಬೇಕು. ಇದು ಬಹಳ ಸುಲಭ ಹಾಗು ಖರ್ಚಿಲ್ಲದ ಮದ್ದಾಗಿದೆ.

ಜಾಂಡಿಸ್, ಯಕೃತ್ ದೋಷ ನಿವಾರಣೆಗೆ:
ಜೇಷ್ಠಮಧುವಿನ ಚೂರ್ಣವನ್ನು ಜೇನಿನೊಂದಿಗೆ ೩ ತಿಂಗಳ ಕಾಲ ಬೆಳೆಗ್ಗೆ ಮತ್ತು ಸಂಜೆ ಸೇವಿಸಬೇಕು. ಕೆಮ್ಮು ದಮ್ಮು ನೆಗಡಿ ಶೀತ ಉಸಿರಾಟದ ತೊಂದರೆ ಮತ್ತು ಅಸಾಮಾನ್ಯ ಜ್ವರಗಳಲ್ಲಿಯೂ ಮೇಲಿನಂತೆ ಸೇವನೆ ಮಾಡಬೇಕು.

ದೇಹದ ಯಾವುದೇ ಭಾಗಗಳಲ್ಲಿ ರಕ್ತ ಸ್ರಾವವಾಗುತಿದ್ದರೆ:
ಜೇಷ್ಠಮಧುವಿನ ನಯವಾದ ಚೂರ್ಣ ರಕ್ತ ಸ್ರಾವಕ್ಕೆ ಲೇಪನ ಮಾಡುವುದರಿಂದ ರಕ್ತ ಸ್ರಾವ ನಿಲ್ಲುವುದು. ಜೇಷ್ಠಮಧುವಿನ ಚೂರ್ಣವನ್ನು ಸ್ವಲ್ಪ ಬೆಣ್ಣೆಯಲ್ಲಿ ಕಲಸಿ ಗಾಯ, ಹುಣ್ಣುಗಳಿಗೆ ಮುಲಾಮಿನಂತೆ ಲೇಪನ ಮಾಡಬಹುದು.