2018ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ಉತ್ತರ ಕರ್ನಾಟಕ ಕಲೆಗೆ ಹೆಚ್ಚು ಪ್ರಶಸ್ತಿ..!

0
573

ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2018 ರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 63 ಗಣ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಏಕೀಕರಣವಾದ ವರ್ಷದಷ್ಟೇ ಪ್ರಶಸ್ತಿ ನೀಡುವ ನಿಯಮದಂತೆ ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ 63 ಗಣ್ಯರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ. ಇಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಸಾಮಾನ್ಯವಾಗಿ ನ.1 ರಂದು ನಡೆಯುವ ಪ್ರಶಸ್ತಿ ಪ್ರಧಾನ ಉಪ ಚುನಾವಣೆ ಕಾರಣಕ್ಕಾಗಿ ಈ ಬಾರಿ ಕನ್ನಡ ರಾಜ್ಯೋತ್ಸವಕ್ಕೂ ಮೊದಲು ಆಯ್ಕೆ ಪಟ್ಟಿ ಬಿಡುಗಡೆ ಆಗಿರಲಿಲ್ಲ, ಈ ಸಲ ನವೆಂಬರ್ ಅಂತ್ಯದಲ್ಲಿ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ವಿಶೇಷವಾಗಿದೆ. ಮತ್ತು ಈ ಸಲದ ಪ್ರಶಸ್ತಿಯಲ್ಲಿ ಉತ್ತರ ಕರ್ನಾಟಕದ ಕಲೆಗೆ ಹೆಚ್ಚು ಮಹತ್ವ ನಿಡಲಾಗಿದ್ದು ಪ್ರಶಸ್ತಿ ಪಡೆಯುವರ ಪಟ್ಟಿ ಹೀಗಿದೆ.

  • ಸಾಹಿತ್ಯ: ಎಂ.ಎಸ್.ಪ್ರಭಾಕರ (ಕಾಮರೂಪಿ), ಹಸನ್ ನಯೀಂ ಸುರಕೋಡ್, ಚ.ಸರ್ವಮಂಗಳ, ಚಂದ್ರಶೇಖ ತಾಳ್ಯ
  • ರಂಗಭೂಮಿ: ಎಸ್‌.ಎನ್.ರಂಗಸ್ವಾಮಿ, ಪುಟ್ಟಸ್ವಾಮಿ, ಪಂಪಣ್ಣ ಕೋಗಳಿ
  • ಸಂಗೀತ: ಅಣ್ಣು ದೇವಾಡಿಗ
  • ನೃತ್ಯ: ಎಂ.ಆರ್‌.ಕೃಷ್ಣಮೂರ್ತಿ.
  • ಜಾನಪದ: ಗುರುವ ಕೊರಗ, ಗಂಗ ಹುಚ್ಚಮ್ಮ, ಚನ್ನಮಲ್ಲೇಗೌಡ, ಶರಣಪ್ಪ ಬೂತೇರ, ಶಂಕ್ರಮ್ಮ ಮಹಾದೇವಪ್ಪಾ, ಬಸವರಾಜ ಅಲಗೂಡ, ಚೂಡಾಮಣಿ ರಾಮಚಂದ್ರ.

  • ಶಿಲ್ಪಕಲೆ: ಯಮನಪ್ಪ ಚಿತ್ರಗಾರ, ಬಸಣ್ಣ ಕಾಳಪ್ಪ ಕಂಚಗಾರ.
  • ಚಿತ್ರಕಲೆ: ಬಸವರಾಜ ರೇವಣ್ಣಸಿದ್ದಪ್ಪ ಉಪ್ಪಿನ.
  • ಕ್ರೀಡೆ: ಕೆನೆತ್ ಪೊವೆಲ್, ವಿನಯ್ ವಿ.ಎಸ್, ಚೇತನ್ ಆರ್.
  • ಯಕ್ಷಗಾನ: ಹಿರಿಯಡ್ಕ ಗೋಪಾಲ ರಾವ್, ಸೀತಾರಾಮ ಕುಮಾರ ಕಟೀಲು.
  • ಬಯಲಾಟ: ಯಲ್ಲಲ್ವಾ ರೊಡ್ಡಪ್ಪನವರ, ಭೀಮರಾಯ ಬೋರಗಿ
  • ಚಲನಚಿತ್ರ: ಭಾರ್ಗವ, ಜೈ ಜಗದೀಶ್, ರಾಜನ್, ದತ್ತುರಾಜ್.

  • ಶಿಕ್ಷಣ: ಗೀತಾ ರಾಮಾನುಜಂ, ಎ.ವಿ.ಎಸ್.ಮೂರ್ತಿ, ಡಾ.ಕೆ.ಪಿ.ಗೋಪಾಲಕೃಷ್ಣ, ಶಿವಾನಂದ ಕೌಜಲಗಿ
  • ಇಂಜಿನಿಯರಿಂಗ್: ಪ್ರೊ.ಸಿ.ಇ.ಜಿ.ಜಸ್ಟೋ.
  • ಸಂಕೀರ್ಣ: ಆರ್.ಎಸ್.ರಾಜಾರಾಂ, ಮೇಜರ್ ಪ್ರದೀಪ್ ಆರ್ಯ. ಸಿ.ಕೆ.ಜೋರಾಪುರ. ನರಸಿಂಹಯ್ಯ, ಡಿ.ಸುರೇಂದ್ರ ಕುಮಾರ್, ಶಾಂತಪ್ಪನವರ್ ಪಿ.ಬಿ, ನಮಶಿವಾಯಂ ರೇಗುರಾಜ್, ಪಿ.ರಾಮದಾಸ್, ಎಂ.ಜೆ.ಬ್ರಹ್ಮಯ್ಯ.
  • ಪತ್ರಿಕೋದ್ಯಮ: ಜಿ.ಎನ್.ರಂಗನಾಥರಾವ್, ಬಸವರಾಜಸ್ವಾಮಿ, ಅಮ್ಮೆಂಬಳ ಆನಂದ ಸಹಕಾರ, ಸಿ.ರಾಮುಸಮಾಜ ಸೇವೆ, ಆನಂದ್ ಸಿ. ಕುಂದರ್, ರಾಚಪ್ಪ ಹಡಪದ. ಕೃಷ್ಣಕುಮಾರ ಪೂಂಜ ಮಾರ್ಗರೇಟ್ ಆಳ್ವಾ

 • ಕೃಷಿ: ಮಹಾದೇವಿ ಅಣ್ಣಾರಾವ ವಣದೆ, ಮೂಕಪ್ಪ ಪೂಜಾರ್.
 • ಪರಿಸರ: ಕಲ್ಮನೆ ಕಾಮೇಗೌಡ
 • ಸಂಘ-ಸಂಸ್ಥೆ: ರಂಗದೊರೆ ಸ್ಮಾರಕ ಆಸ್ಪತ್ರೆ
 • ವೈದ್ಯಕೀಯ: ಡಾ.ನಾಡಗೌಡ ಜೆ.ವಿ, ಡಾ.ಸೀತಾರಾಮ ಭಟ್, ಪಿ.ಮೋಹನರಾವ್, ಡಾ.ಎಂ.ಜಿ.ಗೋಪಾಲ್
 • ನ್ಯಾಯಾಂಗ: ಎಚ್.ಎಲ್.ದತ್ತು ಹೊರನಾಡು, ಡಾ.ಎ.ಎ.ಶೆಟ್ಟಿ
 • ಸ್ವಾತಂತ್ರ್ಯ ಹೋರಾಟಗಾರರು: ಬಸವರಾಜ ಬಿಸರಳ್ಳಿ.

ಕರ್ನಾಟಕ ಏಕೀಕರಣವಾಗಿರುವಷ್ಟೇ ವರ್ಷದಷ್ಟು ಪ್ರಶಸ್ತಿ ನೀಡುವ ನಿಯಮದಂತೆ ಈ ಬಾರಿ ನೀಡಲಾಗುವ ಪ್ರಶಸ್ತಿಯಲ್ಲಿ 63 ಗಣ್ಯರಿಗೆ ಒಂದು ಲಕ್ಷ ರೂ. ನಗದು, 20 ಗ್ರಾಂ ಚಿನ್ನದ ಪದಕವನ್ನು ಪ್ರಶಸ್ತಿ ಒಳಗೊಂಡಿದೆ