ಮಕ್ಕಳಿಗೆ ಯಾವ ಯಾವ ತಿಂಗಳಲ್ಲಿ ಎಷ್ಟು ವರ್ಷದ ವರೆಗೆ ಯಾವ ಯಾವ ಲಸಿಕೆ ಹಾಕಿಸಬೇಕು.. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..

0
10531

ಮಕ್ಕಳಿಗೆ ಲಸಿಕೆ ಹಾಕಿಸುವುದು ಎಷ್ಟು ಮುಖ್ಯವೆಂದರೇ ಅವರಿಗೆ ನಾವು ಬೇರೆ ಏನನ್ನು ಸರಿಯಾಗಿ ನೀಡದಿದ್ದರೂ.. ತಪ್ಪದೇ ಸರಿಯಾದ ಸಮಯದಲ್ಲಿ ಲಸಿಕೆಗಳನ್ನು ಹಾಕಿಸಬೇಕು.. ಅವರಿಗೆ ಮಾರಕ ರೋಗಗಳು ಬರದಂತೆ ಕಾಪಾಡಲು ಲಸಿಕೆಗಳು ಬಹಳ ಮುಖ್ಯ.. ಯಾವ ಯಾವ ಲಸಿಕೆಗಳನ್ನು ಹಾಕಿಸಬೇಕೆಂಬುದು ಇಲ್ಲಿದೆ ನೋಡಿ..

ಮಗು ಹುಟ್ಟಿದಾಗ
ಮಗು ಹುಟ್ಟಿದ ದಿನದಂದೇ 3 ಲಸಿಕೆಗಳನ್ನು ಹಾಕಿಸಬೇಕು ಅವು

 • ಹೆಪಟೈಟಿಸ್ ಬಿ
 • ಓ ಪಿ ವಿ – 0
 • ಬಿ ಸಿ ಜಿ

ಮಗು 6 ವಾರಗಳಿದ್ದಾಗ
ಮಗುವಿಗೆ 6 ವಾರಗಳಾಗುತ್ತಿದಂತೆ ಒಟ್ಟು ಮೂರು ಲಸಿಕೆಗಳನ್ನು ಹಾಕಿಸಬೇಕು

 • ಓ ಪಿ ವಿ – 1
 • ಐ ಪಿ ವಿ – 1
 • ಪೆಂಟಾವೇಲೆಂಟ್ – 1

ಮಗುವಿಗೆ 10 ವಾರಗಳಾದಾಗ
ಮಗು 10 ವಾರವಿದ್ದಾಗ 2 ಲಸಿಕೆಗಳನ್ನು ಹಾಕಿಸಬೇಕು

 • ಓ ಪಿ ವಿ -2
 • ಪೆಂಟಾವೇಲೆಂಟ್ – 2

ಮಗುವಿಗೆ 14 ವಾರಗಳಾದಾಗ
ಮಗು 14 ನೇ ವಾರಕ್ಕೆ ಕಾಲಿಡುತಿದ್ದಂತೇ 3 ಲಸಿಕೆ ಗಳನ್ನು ಹಾಕಿಸಬೇಕು.

 • ಓ ಪಿ ವಿ – 3
 • ಐ ಪಿ ವಿ – 2
 • ಪೆಂಟಾವೇಲೆಂಟ್ – 3

ಮಗುವಿಗೆ 9 ತಿಂಗಳಾದಾಗ
9 ತಿಂಗಳ ಮಗುವಿಗೆ 2 ಲಸಿಕೆಯನ್ನು ಹಾಕಿಸಬೇಕು ಅವು

 • ದಡಾರ-ರುಬೆಲ್ಲಾ- 1
 • ಜೆಇ-1*

16-24 ತಿಂಗಳ ಮಗುವಿಗೆ
ಮಗು 16-24 ತಿಂಗಳು ಇರುವಾಗ ಒಟ್ಟು 4 ಲಸಿಕೆಯನ್ನು ಹಾಕಿಸಬೇಕು ಅವು
ಓ ಪಿ ವಿ ವರ್ಧಕ – 1
ಡಿ ಪಿ ಟಿ ವರ್ಧಕ -1
ದಡಾರ- ರುಬೆಲ್ಲಾ- 2
ಜೆಇ ವರ್ಧಕ*

5-6 ವರ್ಷದ ಮಗುವಿಗೆ
ಮಗು 5-6 ವರ್ಷವಿದ್ದಾಗ ಮಗುವಿಗೆ ಒಂದು ಲಸಿಕೆಗಯನ್ನು ಹಾಕಿಸಬೇಕು.

 • ಡಿ ಪಿ ಟಿ ವರ್ಧಕ – 2

10 ವರ್ಷದ ಮಗುವಿಗೆ
ಮಗು 10 ವರ್ಷವಿದ್ದಾಗ ಹಾಕಿಸಬೇಕಾದ ಲಸಿಕೆ.

 • ಟಿ ಟಿ

16 ವರ್ಷದ ಮಗುವಿಗೆ
ಮಗು 16 ವರ್ಷವಾಗುತ್ತಿದಂತೆ ಹಾಕಿಸಬೇಕಾದ ಲಸಿಕೆ.

 • ಟಿ ಟಿ

ಒಂದನ್ನು ನೆನಪಿಡಿ ಇವೆಲ್ಲಾ ಲಸಿಕೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗುತ್ತದೆ.. ಯಾವುದೇ ದುಡ್ಡನ್ನು ಕೊಡಬೇಕಿಲ್ಲ.. ಸರಿಯಾದ ಸಮಯದಲ್ಲಿ ಲಸಿಕೆ ಹಾಕಿಸಿ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಿ..

ಶುಭವಾಗಲಿ ಶೇರ್ ಮಾಡಿ ಮಾಹಿತಿ ಹಂಚಿ..

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840