ಹಲ್ಲಿ ನಿಮ್ಮ ಮೇಲೆ ಬಿದ್ದರೆ ಆಗುವ ಶುಭ-ಅಶುಭಗಳ ಬಗ್ಗೆ ತಿಳಿಯಿರಿ!!!

0
5279

ಹಲ್ಲಿ ಬಿದ್ದುದಕ್ಕೆ ಶುಭಾಶುಭ ಫಲಗಳು

 • ತಲೆಯ ಮೇಲೆ ಬಿದ್ದರೆ ಕಲಹ,
 • ಮುಖದ ಮೇಲೆ ಧನಾಗಮವು,
 • ಕಣ್ಣುಗಳು ಮೇಲೆ ತೇಜಸ್ಸು,
 • ಕಣ್ಣುಗಳ ಮಧ್ಯಭಾಗದಲ್ಲಿ ರಾಜಾನುಗ್ರಹವು,
 • ಮೂಗಿನ ಮೇಲೆ ಸುಗಂಧವಸ್ತು ಪ್ರಾಪ್ತಿ,
 • ಮೇಲಿನ ತುಟಿಯ ಮೇಲೆ ಧನವ್ಯಯ,
 • ಕೆಳಗಿನ ತುಟಿಯ ಮೇಲೆ ಧನಲಾಭ,
 • ಮೂಗಿನ  ಕೊನೆಯಲ್ಲಿ ವ್ಯಾಧಿ ಸಂಭವ,
 • ಎಡ ಕಿವಿಯ ಮೇಲೆ ವ್ಯಾಪಾರಲಾಭ,
 • ದವಡೆಯ ಮೇಲೆ ಸ್ತ್ರೀಸೌಖ್ಯ,
 • ಎಡ ಭುಜದ ಮೇಲೆ ವ್ಯಥೆ,
 • ಬಲ ತೋಳಿನ ಮೇಲೆ ಚೋರಭಯ,
 • ಎಡತೋಳಿನ ಮೇಲೆ ಸುಖಪ್ರದ,
 • ಬಲಗೈ ಮೇಲೆ ದ್ರವ್ಯಲಾಭ,
 • ಬೆರಳುಗಳ ಮೇಲೆ ಶುಭ,
 • ಎದೆಯ ಮೇಲೆ ಯಶಸ್ಸು,
 • ಹೊಟ್ಟೆಯ ಮೇಲೆ ಧಾನ್ಯಲಾಭ,
 • ಹೊಕ್ಕಳಿನ ಮೇಲೆ ಸೌಋ್ಯ,
 • ಬಲ ಮೊಳಕಾಲಿನ ಮೇಲೆ ತೀರ್ಥಯಾತ್ರೆ,
 • ಎಡಮೊಳಕಾಲಿನ ಮೇಲೆ ಕೆಲಸ ಸಿದ್ದಿ,
 • ಕಾಲುಗಳ ಮೇಲೆ ಪ್ರಯಾಣವು.

ಹಲ್ಲಿಯ ಶಕುನ ಹಲ್ಲಿ ನುಡಿದ ಫಲವು

ಯಾವ ವಿಷಯವನ್ನಾದರೂ ಆಲೋಚಿಸುತ್ತ ಕುಳಿತ ಸಮಯದಲ್ಲಿ ಹಲ್ಲಿಯ 1 ಸಾರಿ ನುಡಿದರೆ ಮೃತ್ಯುವಾರ್ತೆಯ ಶ್ರವಣವು, 2 ಸಾರಿ ನುಡಿದರೆ ಸುಖವು, 3 ಸಾರಿ ನುಡಿದರೆ ಗಮನವು, 4 ಸಾರಿ ನುಡಿದರೆ ಲಾಭವು, 5 ಸಾರಿ ನುಡಿದರೆ ಒಳ್ಳೆಯದು, 6 ಸಾರಿ ನುಡಿದರೆ ಕಲಹವು,7 ಸಾರಿ ನುಡಿದರೆ ಬಂಧುಗಳು ಬರುವರು, 8 ಸಾರಿ ನುಡಿದರೆ ಮರಣಕ್ಕೆ ಸಮಾನವಾದ ಕಷ್ಟವು, 9 ಸಾರಿ ನುಡಿದರೆ ಫಲವನ್ನು ನೋಡಕೂಡದು.