ಮಹಿಳೆಯರೇ ಗಮನಿಸಿ, ಸ್ವಂತ ಉದ್ದಿಮೆ ಮಾಡಿ ಜೀವನ ರೂಪಿಸಿಕೊಳ್ಳಲು ಸದಾವಕಾಶ, ಸರ್ಕಾರದ ಈ ಯೋಜನೆಗಳು ನಿಮಗೆ ದಾರಿ ತೋರಲಿವೆ..

0
3621

1. ಸೆಂಟ್ ಕಲ್ಯಾಣಿ ಯೋಜನೆ:

ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ, ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವ ಹಿನ್ನಲೆಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿದೆ. ಗ್ರಾಮ ಮತ್ತು ಕಾಟೇಜ್ ಉದ್ಯಮಗಳು, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಸ್ವಯಂ ಉದ್ಯೋಗಿಗಳು, ಕೃಷಿ ಮತ್ತು ಮೈತ್ರಿ ಚಟುವಟಿಕೆಗಳು, ರಿಟೆಲ್ ವ್ಯಾಪಾರ ಮತ್ತು ಸರ್ಕಾರಿ-ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ತೊಡಗಿರುವ ಮಹಿಳೆಯರು ಗರಿಷ್ಠ ರೂ.100 ಲಕ್ಷ ಮೊತ್ತ ಸಾಲವನ್ನು ಪಡೆಯಬಹುದು. ಈ ಯೋಜನೆಯ ಮುಖಂತರ ಸಾಲ ಪಡೆಯಲು ಯಾವುದೇ ಭದ್ರತೆ ಮತ್ತು ಪ್ರಕ್ರಿಯೆ ಶುಲ್ಕದ ಅಗತ್ಯವಿಲ್ಲ.

https://www.centralbankofindia.co.in/English/Cent_Kalyani.aspx

2. ಪ್ರಧಾನಮಂತ್ರಿ ಮುದ್ರಾ ಯೋಜನೆ:

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಪ್ರಾರಂಭಿಸಿದ ಈ ಯೋಜನೆ, ಸಣ್ಣ ಹೊಸ ಉದ್ಯಮಗಳು ಮತ್ತು ಬ್ಯೂಟಿ ಪಾರ್ಲರ್, ಟೈಲರಿಂಗ್ ಘಟಕಗಳು, ಬೋಧನಾ ಕೇಂದ್ರಗಳು ಇತ್ಯಾದಿಗಳನ್ನು ಪ್ರಾರಂಭಿಸಲು ಬಯಸುತ್ತಿರುವ ಪ್ರತ್ಯೇಕ ಮಹಿಳೆಯರಿಗೆ ಮತ್ತು ಒಟ್ಟಿಗೆ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹಿಳೆಯರ ಗುಂಪುಗಳಿಗೆ ಯಾವುದೇ ಭದ್ರತೆ ಇಲ್ಲದೆ ಸಾಲವನ್ನು ನೀಡಲಾಗುತ್ತದೆ.

https://www.mudra.org.in/

ಈ ಯೋಜನೆಯನ್ನು ಮೂರು ರೀತಿಯಲ್ಲಿ ವಿಂಗಡಿಸಲಾಗಿದೆ:

೧. ಶಿಶು ಸಾಲ ಯೋಜನೆ:
ವ್ಯವಹಾರ ಪ್ರಾರಂಭಿಸಿದ ಆರಂಭಿಕ ಹಂತಗಳಲ್ಲಿ ಇರುವವರು ಈ ಸಾಲವನ್ನು ಪಡೆಯಬಹುದು, ಸಾಲದ ಮೊತ್ತವನ್ನು 50,000/- ರೂಪಾಯಿಗಳಿಗೆ ಸೀಮಿತಗೊಳಿಸಲಾಗಿದೆ. .

೨. ಕಿಶೋರ್ ಸಾಲ ಯೋಜನೆ:
ಸುಸ್ಥಾಪಿತ ಉದ್ಯಮ ಹೊಂದಿರುವವರಿಗೆ ಈ ಯೋಜನೆ ಉಪಯೋಗಕ್ಕೆ ಬರಲಿದೆ ಏಕೆಂದರೆ ಈ ಯೋಜನೆಯಲ್ಲಿ 50,000 ರೂಪಾಯಿಗಳಿಂದ 5 ಲಕ್ಷಗಳ ವರೆಗೆ ಸಾಲವನ್ನು ನೀಡಲಾಗುತ್ತದೆ.

೩. ತರುಣ್ ಸಾಲ ಯೋಜನೆ:
ಈ ಯೋಜನೆಯನ್ನು ಸುಸ್ಥಾಪಿತ ಉದ್ಯಮವನ್ನು ಹೊಂದಿ, ಇನ್ನೂ ವಿಸ್ತಾರ ಮಾಡ ಬಯಸುವ ಮಹಿಳಾ ಉದ್ಯಮಿಗಳಿಗೆ 10 ಲಕ್ಷಗಳಷ್ಟು ಸಾಲವನ್ನು ನೀಡಲಾಗುತ್ತದೆ.

3. ಅನ್ನಪೂರ್ಣ ಯೋಜನೆ:
ಈ ಯೋಜನೆಯಡಿಯಲ್ಲಿ ನೀಡಲಾಗುವ ಸಾಲದ ಮೊತ್ತದಲ್ಲಿ ಪಾತ್ರೆಗಳು ಮತ್ತು ಇತರ ಅಡುಗೆ ಸಲಕರಣೆಗಳನ್ನು ಖರೀದಿಸಬಹುದಾಗಿದೆ. ಈ ಸಾಲವನ್ನು ಪಡೆಯಲು, ತಮ್ಮ ವ್ಯವಹಾರದ ಸೊತ್ತುಗಳನ್ನು ಮೇಲಾಧಾರ ಭದ್ರತೆಯ ರೂಪದಲ್ಲಿ ಇಡುವುದಾಗಿ ಗ್ಯಾರಂಟಿ ನೀಡಬೇಕಾಗುತ್ತದೆ. ಇದರಲ್ಲಿ ಗರಿಷ್ಠ ರೂ. 50,000 ಯನ್ನು ನೀಡಲಾಗುತ್ತದೆ, 36 ಮಾಸಿಕ ಕಂತುಗಳಲ್ಲಿ (EMI) ಮರು ಪಾವತಿಸಬೇಕಾಗುತ್ತದೆ.

4. ಓರಿಯಂಟ್ ಮಹಿಳಾ ವಿಕಾಸ್ ಯೋಜನೆ:

ವ್ಯವಹಾರ ನಡೆಸುತ್ತಿರುವ ಸಂಸ್ಥೆಯ ಅಥವಾ ವ್ಯವಹಾರದ ಶೇ. 50 ರಷ್ಟು ಮಾಲೀಕತ್ವವನ್ನು ಹೊಂದಿರುವ ಮಹಿಳಾ ಉದ್ಯಮಿಗಳಿಗೆ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಈ ಯೋಜನೆಯನ್ನು ಹೊರತಂದಿದೆ. ಈ ಯೋಜನೆಯಡಿಯಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಹೊಂದಿರುವ ಸಂದರ್ಭದಲ್ಲಿ 10 ರೂ. ಗಳಿಂದ 25 ಲಕ್ಷ ರೂ. ಗಳವರೆಗೆ ಸಾಲ ನೀಡಲಾಗುತ್ತದೆ.

https://www.obcindia.co.in/obcnew/site/inner.aspx?status=3&menu_id=90

5. ಸ್ತ್ರೀ ಶಕ್ತಿ ಯೋಜನೆ:
ಭಾರತೀಯ ಸ್ಟೇಟ್ ಬ್ಯಾಂಕ್ (SBI), ವ್ಯವಹಾರ ನಡೆಸುತ್ತಿರುವ ಸಂಸ್ಥೆಯ ಅಥವಾ ವ್ಯವಹಾರದ ಶೇ. 50 ರಷ್ಟು ಮಾಲೀಕತ್ವವನ್ನು ಹೊಂದಿರುವ ಮಹಿಳಾ ಉದ್ಯಮಿಗಳಿಗೆ ಮತ್ತು ರಾಜ್ಯದ ಕೆಲವು ಸಂಸ್ಥೆಗಳಿಂದ ನಡೆಸಲಾಗುವ ಉದ್ಯಮಗಳ ಅಭಿವೃದ್ದಿ ಇಡಿಪಿ (Entrepreneurship Development Programmes ) ಕಾರ್ಯಕ್ರಮಗಳನ್ನು ಆಯೋಜಿಸಿದೆ.

6. ಭಾರತೀಯ ಮಹಿಳಾ ಬ್ಯಾಂಕ್:

ಭಾರತೀಯ ಮಹಿಳಾ ಬ್ಯಾಂಕ್ ಉದ್ಯಮಗಳನ್ನು ಪ್ರಾರಂಭಿಸಲು ಇಚ್ಚಿಸುವ ಮಹಿಳಾ ಉದ್ಯಮಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಸ್ವತ್ತಿನ ಮೇಲೆ ಸಾಲ, ಮೈಕ್ರೋ ಸಾಲಗಳು ಮತ್ತು SME ಸಾಲಗಳನ್ನು ನೀಡುತ್ತಿದೆ. ಈ ಯೋಜನೆ ಅಡಿಯಲ್ಲಿ ಗರಿಷ್ಠ ರೂ. 20 ಕೋಟಿ ವರೆಗೆ ಸಾಲ ಪಡೆಯಬಹುದಾಗಿದೆ.

7. ದೇನಾ ಶಕ್ತಿ ಯೋಜನೆ:

ಈ ಯೋಜನೆಯನ್ನು ದೇನಾ ಬ್ಯಾಂಕ್ ಪ್ರಾರಂಭಿಸಿದೆ, ಕೃಷಿ, ಉತ್ಪಾದನೆ, ಮೈಕ್ರೋಕ್ರೆಡಿಟ್, ಚಿಲ್ಲರೆ ಅಂಗಡಿಗಳು ಅಥವಾ ಸಣ್ಣ ಉದ್ಯಮಗಳ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಉದ್ಯಮಿಗಳಿಗೆ ನೆರವಾಗಲು ಅವಶ್ಯಕತೆಯ ಅನುಸಾರ ರೂ. 50000 ಯಿಂದ 20 ಲಕ್ಷದ ವರೆಗೆ ಸಾಲವನ್ನು ನೀಡುತ್ತದೆ.

https://www.denabank.com/viewsection.jsp?lang=0&id=0,135,199

8. ಉದ್ಯೋಗಿನಿ ಯೋಜನೆ:

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಕೃಷಿ, ರಿಟೈಲ್ ಮತ್ತು ಸಣ್ಣ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಉದ್ಯಮಿಗಳಿಗೆ ನೆರವಾಗಲು ಈ ಯೋಜನೆ ಹೊರತಂದಿದೆ. ಈ ಯೋಜನೆಯ ಮೂಲಕ ಗರಿಷ್ಠ ರೂ. 1 ಲಕ್ಷ ಸಾಲವನ್ನು ಪಡೆಯಬಹುದಾಗಿದೆ. ಈ ಯೋಜನೆಯನ್ನು 18 ರಿಂದ 45 ವರ್ಷದೊಳಗಿನ ಮಹಿಳೆಯರಿಗೆ ನೀಡಲಾಗುತ್ತದೆ.

https://www.psbindia.com/content/udyogini