ಕರೋನ ತಡೆಯೋಕೆ ಕೇಂದ್ರ ಸರ್ಕಾರದ ಲಾಕ್ ಡೌನ್ ಸೂತ್ರ ಎಡವಟ್ಟಾಗಿದ್ದು ಎಲ್ಲಿ??

0
276

ಮೊದಲ ಬಾರಿಗೆ ಲಾಕ್ಡೌನ್ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಅಡೆತಡೆ, ಸಂಕಷ್ಟಗಳನ್ನು ದೇಶದ ಜನತೆ ಸಹಿಸಿಕೊಳ್ಳುವಂತೆ ರಾಷ್ಟ್ರವನ್ನು ಕೇಳಿಕೊಂಡಿದ್ದರು. “ಮಹಾಭಾರತ ಯುದ್ಧವನ್ನು 18 ದಿನಗಳಲ್ಲಿ ಗೆದ್ದಿದೆ, ಆದರೆ ಇಡೀ ದೇಶ ಕರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಈ ಯುದ್ಧವು 21 ದಿನಗಳನ್ನು ತೆಗೆದುಕೊಳ್ಳುತ್ತದೆ” ಎಂದು ಅವರು ಮಾರ್ಚ್ 25 ರಂದು ಜನರನ್ನು ಉದ್ದೇಶಿಸಿ ಹೇಳಿದ್ದರು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಳೆದ ಆರು ವರ್ಷಗಳಲ್ಲಿ ಮೋದಿ ಅವರು ನೀಡಿದ ಭರವಸೆಗಳಲ್ಲಿ ಇದುವರೆಗೂ ಒಂದನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಾರ್ಚ್ 25 ರಂದು, ಲಾಕ್ಡೌನ್ ಪ್ರಾರಂಭವಾದಾಗ, COVID-19 ಪ್ರಕರಣಗಳು 606 ವರದಿಯಾಗಿವೆ, ಈ ಪೈಕಿ 87 ಪ್ರಕರಣಗಳನ್ನು ಹಿಂದಿನ 24 ಗಂಟೆಗಳಲ್ಲಿ ದಾಖಲಾಗಿದ್ದವು ಆದರೆ ಇಂದು ಇದರ ಸಂಖ್ಯೆ 3 ಲಕ್ಷಕ್ಕಿಂತ ಹೆಚ್ಚಿವೆ, ಇದು ದಿನಕ್ಕೆ ಸೋಂಕಿತರ ಸಂಖ್ಯೆ ಸರಾಸರಿ 11,000 ರಷ್ಟು ಹೆಚ್ಚಾಗುತ್ತಿದೆ.

ಮೂರು ಸುತ್ತಿನ ಲಾಕ್ಡೌನ್ ಮತ್ತು ಒಂದು ಸುತ್ತಿನ ಫ್ರೀ ಡೌನ್ ಬಳಿಕ ಇದೀಗ ದೇಶದ ಕರೋನಾ ಪಾಸಿಟಿವ್ ಪ್ರಕರಣಗಳು ಬರೋಬ್ಬರಿ ಮೂರು ಲಕ್ಷಕ್ಕೂ ಮೀರಿ ಮುನ್ನುಗ್ಗಿವೆ. ವಿಫಲ ಲಾಕ್ಡೌನ್ ಮತ್ತು ಪ್ರಕರಣಗಳ ಮಿತಿಮೀರಿದ ಏರಿಕೆಗೆ ಕಾರಣವಾದ ಫ್ರೀಡೌನ್ ಫಲಿತಾಂಶಗಳು ಈಗ ಸರ್ಕಾರ ಮತ್ತು ಜನರನ್ನು ದಿಕ್ಕು ತೋಚದ ಪರಿಸ್ಥಿತಿಗೆ ಎದುರಾಗಿಸಿವೆ.
ಮೊದಲ ಬಾರಿಗೆ ದೇಶವ್ಯಾಪಿ ಲಾಕ್ಡೌನ್ ಹೇರಿ ಬರೋಬ್ಬರಿ 83 ದಿನಗಳ ಬಳಿಕವೂ ಕರೋನಾ ಸೋಂಕು ಪ್ರಮಾಣ ಏರುಗತಿಯಲ್ಲೇ ಇದೆಯೇ ಹೊರತು, ಯಾವುದೇ ಇಳಿಮುಖ ಸೂಚನೆ ಸಿಕ್ಕಿಲ್ಲ. ಮೂರು ತಿಂಗಳ ಕಾಲದ ಲಾಕ್ಡೌನ್ನಿಂದಾಗಿ ಇಡೀ ದೇಶದ ಕೃಷಿ, ಉದ್ಯಮ, ಸೇವಾ ವಲಯಗಳು ಸೇರಿ ಉದ್ಯಮ, ಉದ್ಯೋಗ, ಬದುಕು ಕೊಚ್ಚಿ ಹೋಗಿದೆ. ಅಂದಿನ ಅನ್ನ ಅಂದಂದೇ ಸಂಪಾದಿಸುವ ಕೂಲಿಕಾರನಿಂದ ಸಾವಿರಾರು ಕೋಟಿ ಒಡೆಯರವರೆಗೆ ಎಲ್ಲರ ಬದುಕನ್ನು ಹೈರಾಣು ಮಾಡಿದ ಲಾಕ್ಡೌನ್ ಕೊನೆಗೂ ಕರೋನಾ ಸೋಂಕು ತಡೆಯುವಲ್ಲಿ; ಅಥವಾ ಕನಿಷ್ಟ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತೆ ಎಂದರೆ, ಅದೂ ಇಲ್ಲ. ಬದಲಾಗಿ ನೂರಾರು ಕೂಲಿ ಕಾರ್ಮಿಕರ ಸಾವಿಗೆ, ಕೋಟ್ಯಂತರ ಬಡವರ ಜೀವನಾಧಾರ, ಹೊತ್ತಿನ ಗಂಜಿಯ ನಷ್ಟಕ್ಕೆ ಕಾರಣವಾಯಿತು. ದೇಶದ ಇಡೀ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿತು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹಾಗಾದರೆ, ಇಂತಹ ವೈಫಲ್ಯಕ್ಕೆ, ನಷ್ಟಕ್ಕೆ, ಸಾವು-ನೋವಿಗೆ ಕಾರಣವೇನು? ಯಾಕೆ ಲಾಕ್ಡೌನ್ ವಿಫಲವಾಯಿತು? ಎಲ್ಲಿ ಯಡವಟ್ಟಾಯಿತು? ಯಾರು ಈ ಸಾವು-ನೋವು-ನಷ್ಟಕ್ಕೆ ಹೊಣೆ? ಯಾರ ತೀರ್ಮಾನ ಮತ್ತು ತೀರ್ಮಾನದ ಲೋಪ ಇದಕ್ಕೆಲ್ಲ ಕಾರಣ? ಎಂಬ ಪ್ರಶ್ನೆಗಳು ಈಗ ಕಾಡತೊಡಗಿವೆ. ಅಂತಹ ಕಾಡುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಕೂಡ ಆರಂಭವಾಗಿದೆ.

ಕರೋನಾ ವಿರುದ್ಧದ ಸಮರವನ್ನು 21 ದಿನದಲ್ಲೇ ಗೆದ್ದು ವಿಶ್ವಮಾದರಿಯಾಗುವ ವಿಶ್ವಾಸದ ಮಾತುಗಳ ಹಿಂದೆ ತಾರ್ತಿಕ ಲೆಕ್ಕಾಚಾರಗಳು, ವಾಸ್ತವಿಕ ಸಂಗತಿಗಳ ಅರಿವು ಮತ್ತು ಸೋಂಕು ಹರಡುವಿಕೆಯ ಕುರಿತ ಜ್ಞಾನ ಕೆಲಸ ಮಾಡಿದ್ದರೆ, ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲೇ ಮಹಾ ದುರಂತವಾಗಿ ಈ ಲಾಕ್ಡೌನ್ ಮತ್ತು ಕರೋನಾ ವಿರುದ್ಧದ ಸಮರಗಳು ದಾಖಲಾಗುತ್ತಿರಲಿಲ್ಲ ಎಂಬುದು ಇದೀಗ ಬೆಳಕಿಗೆ ಬರತೊಡಗಿದೆ. ಮೊದಲ ಹಂತದ ಅಂತ್ಯದ ಹೊತ್ತಿಗೇ ಸ್ವತಃ ಪ್ರಧಾನಿ ಮೋದಿಯವರೇ ರಚಿಸಿದ್ದ ಕರೋನಾ ವಿರುದ್ಧದ ಹೋರಾಟದ ಕುರಿತ ಉನ್ನತಮಟ್ಟದ ಕಾರ್ಯಪಡೆ ಲಾಕ್ಡೌನ್ ಮತ್ತು ಸೋಂಕು ನಿಯಂತ್ರಣ ಕುರಿತ ಮೋದಿಯವರ ಧೋರಣೆ ಮತ್ತು ನಡೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು.

ವ್ಯಾಪಕ ಪರೀಕ್ಷೆ, ಸೋಂಕಿತರ ಪತ್ತೆ, ಸಂಪರ್ಕ ಪತ್ತೆ, ಕ್ವಾರಂಟೈನ್, ಚಿಕಿತ್ಸೆ, ವೈದ್ಯಕೀಯ ವ್ಯವಸ್ಥೆಯ ಸಬಲೀಕರಣದಂತಹ ಕ್ರಮಗಳ ಹೊರತು ಕೇವಲ ಲಾಕ್ಡೌನ್ ಹಾಕಿ ಕೈಕಟ್ಟಿ ಕೂತರೆ ಏನೂ ಸಾಧಿಸಲಾಗದು. ಯಾವ ಸಮರವನ್ನೂ ಗೆಲ್ಲಲಾಗದು. ಬದಲಾಗಿ ಅಂತಹ ನಡೆ ಶತ್ರು ಪಡೆ ದಂಡೆತ್ತಿ ಬಂದಾಗ ಮರಳಲ್ಲಿ ಮುಖ ಹುಗಿದು ಕುಂಡೆ ಮೇಲೆ ಮಾಡಿಕೊಂಡು ಗೆದ್ದೇ ಎಂದು ಬೀಗಿದಷ್ಟೇ ಪರಮ ಮೂರ್ಖತನ ಎಂದೂ ಕಾರ್ಯಪಡೆ ಅಭಿಪ್ರಾಯಪಟ್ಟಿತ್ತು.

ಸ್ಪೇನ್, ಜರ್ಮನಿ, ಬ್ರಿಟನ್ ಮತ್ತು ಇಟಲಿ ದೇಶಗಳಲ್ಲಿ ಸೋಂಕು ಪ್ರಮಾಣ ಸಾಕಷ್ಟು ಗಣನೀಯ ಪ್ರಮಾಣದಲ್ಲಿರುವಾಗ ಹೇರಿದ್ದ ಲಾಕ್ಡೌನ್ ನನ್ನು ಬಹುತೇಕ ಸೋಂಕು ಪ್ರಮಾಣ ಇಳಿಮುಖವಾಗಿ ನೂರರ ಆಸುಪಾಸಿಗೆ ಇಳಿದಾಗ ತೆರವು ಮಾಡಿದ್ದರೆ, ಭಾರತದಲ್ಲಿ ಇಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ತೀರಾ ನಗಣ್ಯ(560ರಷ್ಟು) ಎಂಬಷ್ಟು ಪ್ರಮಾಣದ ಸೋಂಕು ಇರುವಾಗ ಅವಸರದಲ್ಲಿ ತೀರಾ ಮುಂಚಿತವಾಗಿ ಲಾಕ್ಡೌನ್ ಹೇರಲಾಯಿತು ಮತ್ತು ರೋಗ ಇನ್ನೂ ಏರುಗತಿಯಲ್ಲಿರುವಾಗಲೇ(ಪೀಕ್-ಶಿಖರಪ್ರಮಾಣ ತಲುಪುವ ಮುನ್ನವೇ) ತೆರವು ಮಾಡಲಾಯಿತು! ಇದು ಸೋಂಕು ಹರಡುವಿಕೆ ಪ್ರಮಾಣ, ವ್ಯಾಪಕತೆ, ದೇಶದ ಸಾಮಾಜಿಕ ಪರಿಸ್ಥಿತಿ, ಜನಸಂಖ್ಯಾ ಹಂಚಿಕೆಯ ರೀತಿ ಮುಂತಾದ ಮಾಹಿತಿಯೇ ಇಲ್ಲದೆ, ಕೇವಲ ಅಂಧಾನುಕರಣೆಯಲ್ಲಿ ಇತರ ದೇಶಗಳನ್ನು ಅನುಸರಿಸಲು ಹೋಗಿ ಮಾಡಿಕೊಂಡ ಎಡವಟ್ಟು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಜೊತೆಗೆ, ಹದಿನೈದು ದಿನ ತಡವಾಗಿ ಲಾಕ್ಡೌನ್ ಹೇರಿದ್ದರೆ, ಆರ್ಥಿಕವಾಗಿ ಸಾಕಷ್ಟು ನಷ್ಟವನ್ನು ತಪ್ಪಿಸಬಹುದಿತ್ತು. ಕಾರ್ಮಿಕರ ಬದುಕಿಗೆ ಕನಿಷ್ಟ ಭದ್ರತೆ ಒದಗಿಸಬಹುದಿತ್ತು. ಉತ್ಪಾದಿತ ಸರಕುಗಳನ್ನು ಮತ್ತುಅದಾಗಲೇ ಆರ್ಡರ್ ಪಡೆದಿದ್ದ ಬೇಡಿಕೆಗೆ ಸರಕು ಒದಗಿಸಲೂ ಕಾಲಾವಕಾಶ ಸಿಗುತ್ತಿತ್ತು. ಆಗ ಆರ್ಥಿಕ ನಷ್ಟ ಮತ್ತು ಹಣಕಾಸಿನ ಹೊಂದಾಣಿಕೆಯ ಮುಗ್ಗಟ್ಟು ಇಷ್ಟು ತೀವ್ರವಾಗಿರುತ್ತಿರಲಿಲ್ಲ. ಆದರೆ, ದೈನಂದಿನ ವ್ಯವಹಾರಗಳ ಅರಿವಿಲ್ಲದ ವಿವೇಚನಾಹೀನ ದಿಢೀರ್ ಲಾಕ್ಡೌನ್ ಕ್ರಮದಿಂದಾಗಿ ಇಡೀ ತಯಾರಿಕೆ ಮತ್ತು ಹಂಚಿಕೆಯ
ಆರ್ಥಿಕತೆ ಹಠಾತ್ ಕುಸಿದುಹೋಯಿತು.

ಒಟ್ಟಾರೆ ಲಾಕ್ಡೌನ್ ವಿಫಲ ಎಂಬುದು ಎಷ್ಟು ದಿಟವೋ, ಅಷ್ಟೇ ಅದು ಅನಾಹುತಕಾರಿ ಮತ್ತು ತಪ್ಪಿಸಬಹುದಾಗಿದ್ದ ರಾಷ್ಟ್ರೀಯ ದುರಂತ ಎಂಬುದು ಕೂಡ ನಿರ್ವಿವಾದ. ಎಲ್ಲವನ್ನೂ ತಮ್ಮ ವ್ಯಕ್ತಿತ್ವದ ವರ್ಚಸ್ಸು ವೃದ್ಧಿಯ ಅವಕಾಶವೆಂಬಂತೆ ನೋಡುವ ಮತ್ತು ಕೇವಲ ಮತಬ್ಯಾಂಕ್ ಹಿತಾಸಕ್ತಿಯೊಂದನ್ನೇ ಪರಿಗಣಿಸಿ ನೀತಿ ನಿಲುವುಗಳನ್ನು ಕೈಗೊಳ್ಳುವ ಪ್ರಧಾನಿಗಳ ವರಸೆಗೆ ದೇಶ ಬಲುದೊಡ್ಡ ಬೆಲೆ ತೆತ್ತಿದೆ ಎಂಬುದು ಕೂಡ ಅಷ್ಟೇ ಸತ್ಯ. ಗಿಲಿ ಗಿಲಿ ಪೂ ಎಂಬಂತೆ ಜಾದೂ ಮಾಡಿ ಸೋಂಕು ತಡೆಯುವುದು ಸಾಧ್ಯ ವೆಂದು ನಂಬಿರುವ ಮತ್ತು ಹಾಗೆ ಜನರನ್ನು ನಂಬಿಸುವ ಆಡಳಿತಗಾರರು ಮತ್ತು ಅವರ ತಾಳಕ್ಕೆ ಕುಣಿಯುವ ಸಾರ್ವಜನಿಕ ಮಾಧ್ಯಮಗಳ ಅವಿವೇಕಕ್ಕೆ ಶತಮಾನಗಳ ಕಾಲ ಮರೆಯದ ಸಂಕಷ್ಟಕ್ಕೆ ಜನಸಾಮಾನ್ಯರು ಬಲಿಯಾಗಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಸರ್ಕಾರಿ ನೌಕರಿ ಇದ್ದೂ ಬಿ.ಪಿ.ಎಲ್. ಹೊಂದಿದ್ದರೆ ನಿಮಗೆ ಜೈಲೇ ಗತಿ!!