ಚುನಾವಣೆ ಭದ್ರತೆಗಾಗಿ ಬಂದ ಯೋಧರಿಗೆ ಬೆಂಗಳೂರಿಗರು ಹೂ ಮಳೆ ಸುರಿಸಿ ಸ್ವಾಗತ ಕೋರಿ ದೇಶ ಪ್ರೇಮ ಮೆರೆದಿರುವುದು ಎಲ್ಲರಿಗೂ ಮಾದರಿಯಾಗಿದೆ..

0
314

ದೇಶಕ್ಕಾಗಿ ತಮ್ಮ ಪ್ರಾಣವನ್ನೇ ನೀಡುವ ಯೋಧರಿಗೆ ಎಷ್ಟೇ ಗೌರವ ಸಲ್ಲಿಸಿದರು ಕಡಿಮೆಯಾಗಿದೆ. ಯೋಧರು ಬರಿ ದೇಶದ ಗಡಿ ಕಾವಲು ಮಾತ್ರವಲ್ಲದೆ ದೇಶದ ಒಳಗೆ ನಡೆಯುವ ಪ್ರಕೃತಿ ವಿಕೋಪಗಳು, ಜಲ ಪ್ರಳಯ, ಭೂ ಕುಸಿತ, ಅಗ್ನಿ ದುರಂತಗಳು ಸೇರಿದಂತೆ ಯಾವುದೇ ರಕ್ಷಣಾ ಕಾರ್ಯಾಚರಣೆಯಲ್ಲಿ ಯೋಧರ ಮಹತ್ವ ತುಂಬಾನೇ ಇರುತ್ತದೆ. ಅಷ್ಟೇ ಅಲ್ಲದೆ ಹಂತ ಹಂತವಾಗಿ ನಡೆಯುವ ಚುನಾವಣೆ ಭದ್ರತೆಯಲ್ಲಿ ಕೂಡ ಯೋಧರ ಕೆಲಸ ಮೆಚ್ಚುವುದೇ. ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆ ಭದ್ರತೆಗಾಗಿ ಕರ್ನಾಟಕಕ್ಕೆ ಹಲವು ಯೋಧರು ಬರುತ್ತಿದ್ದಾರೆ ಅದರಂತೆ ಬೆಂಗಳೂರಿಗೆ ಬಂದ ಯೋಧರಿಗೆ ರಸ್ತೆ ಉದ್ದಕ್ಕೂ ಮನೆಯ ಮೇಲಿನಿಂದ ಹೂವಿನ ಮಳೆ ಸುರಿಸಿ ಸ್ವಾಗತ ಕೋರಲಾಗಿದೆ.

Also read: ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಸರ್ಕಾರದ ದುರುಪಯೋಗ; ಪಕ್ಷೇತರ ಅಭ್ಯರ್ಥಿ ಸುಮಲತಾ ಚುನಾವಣಾ ಆಯೋಗಕ್ಕೆ ದೂರು..

ಹೌದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಯೋಧರಿಗೆ ಅದ್ದೂರಿ ಸ್ವಾಗತ ನಡೆದಿದೆ. ಸುಮಾರು 8 ಕಿಮೀ ದೂರ ರಸ್ತೆಯಲ್ಲಿ ಸಾಗಿ ಸುಮಾರು 250 ಸಿಐಎಸ್‍ಎಫ್ ಯೋಧರು ಕೆಆರ್ ಪುರಂ ತಾಲೂಕು ಕಚೇರಿ ಬಳಿಯಿಂದ ದೇವಸಂದ್ರ ಮುಖ್ಯ ರಸ್ತೆ, ಮಸೀದಿ ರಸ್ತೆ, ಅಯ್ಯಪ್ಪ ನಗರ, ಬಟ್ಟರಹಳ್ಳಿ ಮಾರ್ಗವಾಗಿ ಸಾಗಿ ಟಿಸಿ ಪಾಳ್ಯ ಚರ್ಚ್ ರೋಡ್ ವರೆಗೂ ನಡೆದಿದ್ದರು. ಅವರು ಹೋಗುತ್ತಿರುವ ವೇಳೆ ಮನೆಯಿಂದ ಹೊರಬಂದ ಜನರು ಹೂ ಮಳೆ ಸುರಿಸಿ ಸ್ವಾಗತ ಕೊರಿದ್ದಾರೆ. ಅದರಲ್ಲಿ ಪುಲ್ವಾಮ ದಾಳಿ ನಡೆದ ನಂತರ ಭಾರತೀಯ ಸೈನಿಕರ ಮೇಲೆ ಜನರಿಗೆ ಗೌರವ ಹೆಚ್ಚಾಗಿದೆ. ಈಗ ಯೋಧರು ಎಲ್ಲೋ ಹೋದರು ಅವರನ್ನು ಪ್ರೀತಿಯಿಂದ ಗೌರವದ ಮೂಲಕ ಬರ ಮಾಡಿಕೊಳ್ಳುತ್ತಿದ್ದಾರೆ.

ಈ ಹಿಂದೆ ಕೊಡಗು ಜಲ ಪ್ರಳಯದಲ್ಲಿ ಸೈನಿಕರು ನೀರಿನಲ್ಲಿ ಸಿಲುಕಿರುವ ಜನರ ರಕ್ಷಣೆ ಮಾಡಿದ್ದು ಯೋಧರ ಮೇಲೆ ಮತಷ್ಟು ಪ್ರೀತಿ ಹೆಚ್ಚಾಗಿದ್ದು ಅವರ ಮಹತ್ವ ತಿಳಿದಿದೆ. ನೀರಲ್ಲಿ ಸಿಲುಕಿದವರನ್ನು ತಮ್ಮ ಬೆನ್ನ ಮೇಲೆ ಹತ್ತಿಸಿಕೊಂಡು ಪಾರು ಮಾಡಿದ ಯೋಧರ ಸಾಹಸವು ಕರ್ನಾಟಕದಲ್ಲಿ ಬಾರಿ ವೈರಲ್ ಆಗಿತ್ತು, ಅದೇ ಸಮಯಕ್ಕೆ ಕೇರಳದಲ್ಲಿ ಕೂಡ ದೊಡ್ಡ ಪ್ರಮಾಣದ ಜಲ ಪ್ರಳಯದಿಂದ ನೂರಾರು ಜನರು ನೀರಿನಲ್ಲಿ ಕೊಚ್ಚಿಕೊಂಡು ಹೋದರು ಆ ಸಮಯದಲ್ಲಿವೂ ಕೂಡ ಯೋಧರ ರಕ್ಷಣೆ ಮಹತ್ವದಾಗಿ ಜನರಿಗೆ ಯೋಧರ ಮೇಲೆ ಗೌರವ ಹೆಚ್ಚಾಯಿತು. ಅಷ್ಟೇ ಅಲ್ಲದೆ ಕೆಲವು ದಿನಗಳ ನಂತರ ಪುಲ್ವಾಮ ದಾಳಿಯಲ್ಲಿ ಯೋಧರ ಹೋರಾಟ ನೋಡಿ ದೇಶದ ಜನರು ಯೋಧರ ಮೇಲೆ ಪ್ರೀತಿ ಗೌರವ ಸಲ್ಲಿಸುತ್ತಿದ್ದಾರೆ.

Also read: ಜೋಡಿತುಗಳಲ್ಲ, ಕಳ್ಳೆತ್ತುಗಳು ದರ್ಶನ್-ಯಶ್ ವಿರುದ್ಧ ಸಿಎಂ ವಾಗ್ದಾಳಿ; ಈ ರೀತಿ ಹೇಳಿಕೆಗಳು ಸಿಎಂ ಹುದ್ದೆಯ ಘನತೆ ಕಳೆಯುತ್ತಾ??

ಈಗ ಚುನಾವಣಾ ಹಿನ್ನೆಲೆಯಲ್ಲಿ ಜನರಲ್ಲಿ ಸುರಕ್ಷತೆಯ ಭಾವನೆ ಮೂಡಿಸಿ ಯಾವುದೇ ಭಯವಿಲ್ಲದೇ ಮತ ಚಲಾಯಿಸುವಂತೆ ಪ್ರೇರಣೆ ನೀಡಲು ಯೋಧರು ಕರ್ನಾಟಕದ ಹಲವು ನಗರಗಳಲ್ಲಿ ಶಿಸ್ತಿನಿಂದ ಮಾರ್ಚ್ ನಡೆಸಿದ್ದರು. ಈ ವೇಳೆ ಮನೆ ಮೇಲೆ ನಿಂತ ಸಾರ್ವಜನಿಕರು ಯೋಧರು ಸಾಗುತ್ತಿದ್ದ ವೇಳೆ ಹೂ ಸುರಿಸಿ ಸ್ವಾಗತ ಮಾಡಿದ್ದಾರೆ. ಆ ಮೂಲಕ ಯೋಧರ ದಿನವನ್ನು ಸ್ಮರಣಿಯವನ್ನಾಗಿಸಿದ್ದಾರೆ. ಅದರಂತೆ ಚುನಾವಣೆ ಭದ್ರತೆಗಾಗಿ ಬಂದ ಯೋಧರಿಗೆ ಬೆಂಗಳೂರು ಸೇರಿದಂತೆ ಹಲವು ಕಡೆ ಅದ್ದೊರಿ ಸ್ವಾಗತ ಮಾಡಿದ್ದು ಕೇಳಿಬರುತ್ತಿವೆ.