ಎನ್‍ಡಿಎ ಮೈತ್ರಿ ಕೂಟದಲ್ಲಿ ಸಂತೋಷದ ಅಲೆ; ಎರಡು ದಿನದ ಮೊದಲೇ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ 2 ಸಾವಿರ ಕೆಜಿ ಸ್ವೀಟ್..

0
208

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನೆರಡು ದಿನ ಬಾಕಿ ಇದೆ. ಈಗಾಗಲೇ ಗೆಲುವಿನ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು, ಮತ್ತು ಅಭಿಮಾನಿಗಳು ಸಿದ್ದತೆಯಲ್ಲಿದ್ದಾರೆ. ಅದರಂತೆ ಈ ಬಾರಿ ಎನ್‍ಡಿಎ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ದೇಶದ ತುಂಬೆಲ್ಲ ಸಂಭ್ರಮಾಚರಣೆಗೆ ಸಿದ್ದತೆ ನಡೆಯುತ್ತಿದೆ ಮತ್ತೆ ಮೋದಿಯವರು ಪ್ರಧಾನಿಯಾಗುತ್ತಾರೆ ಎನ್ನುವ ಭರವಸೆಯಲ್ಲಿರುವ ಮುಂಬೈಯಲ್ಲಿ 2000 ಕೆ.ಜಿ. ಸ್ವೀಟ್ ತಯಾರಿಸುತ್ತಿದ್ದಾರೆ ಅಂತೆ.

ಹೌದು ಫಲಿತಾಂಶಕ್ಕೆ ಎರಡೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಗೆಲುವಿನ ಸಂಭ್ರಮ ಆಚರಿಸಿಕೊಳ್ಳಲು ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಇತ್ತ ಮುಂಬೈನ ಬೊರಿವಲಿ ಪ್ರದೇಶದ ಸ್ವೀಟ್‍ಮಾರ್ಟ್ ನಲ್ಲಿ ಸಿಬ್ಬಂದಿ ಮೋದಿ ಮುಖವಾಡ ಧರಿಸಿ ವಿವಿಧ ಬಗೆಯ ಸಿಹಿ ಖಾದ್ಯ ತಯಾರಿಸುತ್ತಿದ್ದಾರೆ. ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಅವರು 1500-2000 ಕೆ.ಜಿ. ಸಿಹಿ ಖಾದ್ಯಗಳ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸಿಬ್ಬಂದಿ ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಸ್ವೀಟ್‍ಮಾರ್ಟ್ ಮಾಲೀಕ ತಿಳಿಸಿದ್ದಾರೆ.

ಮತ್ತೆ ಮೋದಿ ಪ್ರಧಾನಿ

ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ತಿಳಿಸಿದೆ. ಈ ಸಮೀಕ್ಷೆಗಳ ಹಿನ್ನೆಲೆ ಫಲಿತಾಂಶದಲ್ಲಿಯೂ ಗೆದ್ದೆ ಗೆಲ್ಲುತ್ತೇವೆ ಎಂಬ ಸಂತಸ ಬಿಜೆಪಿ ನಾಯಕರಲ್ಲಿ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಂಭ್ರಮಾಚರಣೆ ಮನೆ ಮಾಡಿದ್ದು, ಇದಕ್ಕಾಗಿ ತಯಾರಿ ನಡೆಸಿದ್ದಾರೆ. ಉತ್ತರ ಮುಂಬಯಿನ ಅಭ್ಯರ್ಥಿ ಗೋಪಾಲ ಶೆಟ್ಟಿ ಗೆಲುವು ಸಾಧಿಸಲಿದ್ದಾರೆ ಎಂದು ಅವರ ಅಭಿಮಾನಿಗಳು ಸಿಹಿ ತಯಾರಿಕೆಗೆ ಸಜ್ಜಾಗಿದ್ದಾರೆ. ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ ಚಿತ್ರದ ನಟಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಉರ್ಮಿಳಾ ಮಾತೋಂಡ್ಕರ್ ಕಣಕ್ಕೆ ಇಳಿದಿದ್ದಾರೆ. ಸಮೀಕ್ಷೆಗಳ ಪ್ರಕಾರ ತಮ್ಮ ಗೆಲುವು ಖಚಿತ ಹಾಗೂ ಕೇಂದ್ರದಲ್ಲಿ ಮತ್ತೆ ಎನ್‍ಡಿಎ ಸರ್ಕಾರ ರಚನೆಯಾಗುತ್ತದೆ ಎಂಬ ಡಬಲ್ ಸಂಭ್ರಮದಲ್ಲಿರುವ ಗೋಪಾಲ್ ಶೆಟ್ಟಿ ಅವರು 2 ಸಾವಿರ ಕೆಜಿ ಸ್ವೀಟ್‍ಗೆ ಬೇಡಿಕೆ ಇಟ್ಟಿದ್ದಾರೆ.

ವಿಪಕ್ಷಗಳಲ್ಲಿ ಹೆಚ್ಚಿದ ಇವಿಎಂ ಬಗೆಗಿನ ಸಂಶಯ;

ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟಕ್ಕೆ 300ಕ್ಕಿಂತಲೂ ಹೆಚ್ಚು ಸ್ಥಾನ ನೀಡಿದ ಬೆನ್ನಲ್ಲೇ ಇವಿಎಂ ಬಗೆಗಿನ ಸಂಶಯ ವಿಪಕ್ಷಗಳಲ್ಲಿ ಮತ್ತಷ್ಟು ಹೆಚ್ಚಿದೆ. ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಇವಿಎಂಗಳ ಬಗ್ಗೆ ಸಂಶಯ ವ್ಯಕ್ತಪಡಿಸಲು ಆರಂಭಿಸಿದ್ದವು. ಇದರ ಮುಂದುವರೆದ ಭಾಗವಾಗಿ ಇಂದು ದೆಹಲಿಯಲ್ಲಿ ಸಭೆ ಸೇರಿದ ವಿಪಕ್ಷಗಳ ನಾಯಕರು ಮಹತ್ವದ ನಿರ್ಧಾರ ತಳೆದಿದ್ಧಾರೆ. ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಆಮ್​ ಆದ್ಮಿ, ಸಿಪಿಐ-ಸಿಪಿಐಎಂ, ಡಿಎಂಕೆ, ಎನ್​ಸಿಪಿ ಸೇರಿದಂತೆ ಇತರ ಅಂಗ ಪಕ್ಷಗಳು ಇಂದು ದೆಹಲಿಯಲ್ಲಿ ಮಹತ್ವದ ಸಭೆ ಸೇರಿದ್ದರು. ಎಲ್ಲಾ ಪಕ್ಷಗಳ ನಾಯಕರೂ ಒಕ್ಕೊರಲಿನಿಂದ ಶೇ. 50ರಷ್ಟು ವಿವಿಪ್ಯಾಟ್ ಎಣಿಕೆಗೆ ಒತ್ತಾಯ ಮಾಡಿದ್ದಾರೆ.

Also read: ಮಂಡ್ಯದಲ್ಲಿ ಜೋರಾದ ಪಲಿತಾಂಶದ ಕಾವು; ಸಮೀಕ್ಷೆಯ ನಂತರ ಬೆಟ್ಟಿಂಗ್-ನಲ್ಲಿ ಬದಲಾವಣೆ? ನಿಖಿಲ್ ಗೆಲುವಿಗೆ ಮೇಕೆ ಹರಕೆ ಬಿಟ್ಟ ಅಭಿಮಾನಿಗಳು..