ಚುನಾವಣೆಯ ನಂತರ ಮಂಡ್ಯದಲ್ಲಿ ನಡೆದ ಸಮೀಕ್ಷೆಯ ವರದಿ; ಸುಮಾರು 80 ಸಾವಿರ ಅಂತರದಲ್ಲಿ ಸುಲಮತಾ ಗೆಲುವು ಸಾಧ್ಯತೆ, ಈ ಸಮೀಕ್ಷೆಯೇ ನಿಜವಾಗುತ್ತಾ??

0
362

ಮಂಡ್ಯದಲ್ಲಿ ಚನಾವಣೆ ಮುಗಿದ ನಂತರ ಜನರ ಕುತೊಹಲ ಏನು ಕಡಿಮೆಯಾಗಿಲ್ಲ, ಮೈತ್ರಿ ಸರ್ಕಾರದ ಅಭ್ಯರ್ಥಿ ಗೆಲ್ಲುತ್ತಾರೋ, ಇಲ್ಲ ಸುಮಲತಾ ಗೆಲ್ಲುತ್ತಾರೋ ಅನ್ನೋ ಬೆಟ್ಟಿಂಗ್ ಶುರುವಾಗಿದ್ದು, ಈಗ ಎರಡು ಪಕ್ಷಗಳಲ್ಲಿ ಹಲವಾರು ಸಮೀಕ್ಷೆಗಳು ನಡೆಯುತ್ತಿವೆ. ಅದರಂತೆ ಸುಮಲತಾ ಪರ ಒಂದು ಸಮೀಕ್ಷೆ ವರದಿ ನೀಡಿದೆ ಅದರ ಪ್ರಕಾರ ಸುಮಲತಾ ಸುಮಾರು 80 ಸಾವಿರ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಎನ್ನುವ ಮಾಹಿತಿ ದೊರೆತ್ತಿದ್ದು ಮಂಡ್ಯದ ಚುನಾವಣೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಂತ್ತಾಗಿದೆ.

Also read: ಮಂಡ್ಯದ ಫಲಿತಾಂಶದ ಸಮೀಕ್ಷೆಯ ವರದಿ ನೋಡಿದ ಸಿಎಂ ಗೆ ಜೋರಾದ ಎದೆಬಡಿತ; ಮತ್ತೊಂದು ಸುತ್ತಿನ ಸಮೀಕ್ಷೆಗೆ ಸೂಚನೆ ನೀಡಿದ ಕುಮಾರಸ್ವಾಮಿ..

80 ಸಾವಿರ ಅಂತರದಲ್ಲಿ ಸುಮಲತಾ ಗೆಲುವು?

ಹೌದು ರಾಜ್ಯದಲ್ಲಿ ಹೆಚ್ಚು ಕುತೊಹಲ ಕೆರಳಿಸಿದ ಕ್ಷೆತ್ರ ಮಂಡ್ಯವಾಗಿದ್ದು ಈಗ ಪಲಿತಾಂಶದ ಸುದ್ದಿಗಾಗಿ ಜನರು ಕಾಯುತ್ತಿದ್ದಾರೆ. ಇದೇ ವೇಳೆ ಹಲವೆಡೆ ಹಲವು ರೀತಿಯ ಸಮೀಕ್ಷೆಗಳು ನಡೆಯುತ್ತಿವೆ. ಅದರಂತೆ ಮಂಡ್ಯ ಕ್ಷೇತ್ರದ ಬಗ್ಗೆ ಸಮೀಕ್ಷೆಯೊಂದು ಹೊರಬಿದ್ದಿದ್ದು, ಸುಮಲತಾ ಗೆಲುವು ಖಚಿತ ಎಂದು ಹೇಳಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಸುಮಲತಾ ಬೆಂಬಲಿಗರಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ‌ ಸಮೀಕ್ಷೆ ನಡೆದಿದೆ. ಸುಮಲತಾ ಬೆಂಬಲಿಗ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ಸಮೀಕ್ಷೆ ನಡೆದಿದ್ದು, ಸುಮಾರು 60 ರಿಂದ 80 ಸಾವಿರ ಲೀಡ್ ನಲ್ಲಿ ಸುಮಲತಾ ವಿಜಯಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

Also read: ಪ್ರಧಾನಿ ಮೋದಿಯವರ ಆಡಳಿತದಲ್ಲಿ ಕಾಶಿಯಲ್ಲಿ ಏನೆಲ್ಲಾ ಬದಲಾಗಿದೆ? ಸದ್ಯ ಗಂಗಾ ನದಿಯ ಸ್ವಚ್ಚತೆ ಹೇಗಿದೆ??

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಖುದ್ದು ಸಮೀಕ್ಷೆ ನಡೆಸಿದ್ದು, ಮದ್ದೂರು, ಮಳವಳ್ಳಿಯಲ್ಲಿ ಅತೀ ಹೆಚ್ಚಿನ ಮುನ್ನಡೆ ಸಾಧಿಸಲಿದ್ದಾರೆ. ಮಂಡ್ಯ, ಶ್ರೀರಂಗಪಟ್ಟಣ, ಕೆಆರ್ ನಗರದಲ್ಲಿ ಅಲ್ಪ ಮುನ್ನಡೆ, ಉಳಿದೆಡೆ ಸಮಬಲದ ಹೋರಾಟ ಎಂದು ವರದಿ ನೀಡಿದ್ದಾರೆ. ಸತತ 15 ದಿನ, ಪ್ರತಿ ಬೂತ್‌ಗೂ ತೆರಳಿ ಸಮೀಕ್ಷೆ ನಡೆಸಿದ್ದು, ಒಟ್ಟಾರೆ ಸುಮಲತಾ 60 ರಿಂದ 80 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವರದಿ ನೀಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 15 ಜನರಂತೆ ಸಮೀಕ್ಷೆ ನಡೆಸಿದ್ದಾರೆ. ಎನ್ನಲಾಗಿದೆ.

ಇದಷ್ಟೇ ಅಲ್ಲದೆ ಲೋಕಸಭೆ ಚುನಾವಣೆ 2019 ಸಂದರ್ಭದಲ್ಲಿ ಜನಪ್ರಿಯ ರಾಜಕೀಯ ತಜ್ಞ ಚಿಂತಾಮಣಿ ಅವರು ಎಲೆಕ್ಷನ್. ಇನ್ ವೆಬ್ ತಾಣಕ್ಕಾಗಿ ಸಂಗ್ರಹಿಸಿರುವ ಜನಾಭಿಪ್ರಾಯ ಸಮೀಕ್ಷಾ ವರದಿ ಮಾಡಿತ್ತು ಅದರಂತೆ ದಕ್ಷಿಣ ಭಾರತದಲ್ಲಿ ಮಾತ್ರ NDA ವಿರುದ್ಧ ಯುಪಿಎ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಲಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಮುರಿಯಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಸಾಧ್ಯವಾಗಿಲ್ಲ. 2014 ರಂತೆ 2019ರಲ್ಲೂ ಉತ್ತಮ ಫಲಿತಾಂಶ ನೀಡಲಿದೆ ಎಂದು ಸಮೀಕ್ಷಾ ವರದಿ ಹೇಳಿದ್ದು ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ 19 ಸ್ಥಾನ ಗಳಿಸಲಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾಗೆ ಗೆಲುವು ಸಿಗಲಿದೆ ಎಂದು ಸಮೀಕ್ಷೆ ಹೇಳಿದೆ. ಮಂಡ್ಯದಲ್ಲಿ ಆಡಳಿತರೂಢ ಪಕ್ಷದ ಒಮ್ಮತದ ಅಭ್ಯರ್ಥಿ, ಮುಖ್ಯಮಂತ್ರಿಗಳ ಪುತ್ರನಿಗೆ ಸೋಲುಂಟಾಗಲು ಮೈತ್ರಿ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಮುಖ್ಯ ಕಾರಣವಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಮೈತ್ರಿಯಲ್ಲಿ ಈಗಾಗಲೇ ಎರಡನೇ ಹಂತದಲ್ಲಿ ಸಮೀಕ್ಷೆ ನಡೆಯುತ್ತಿದ್ದು. ಕುಮಾರಸ್ವಾಮಿ ನಿದ್ದೆಗೆಡಸಿದೆ. ಎಲ್ಲಾ ಚುನಾವಣೆಯಲ್ಲೂ ಜಾತಿ ಆಧಾರದಲ್ಲಿ ಗೆಲುವಿನ ಲೆಕ್ಕಾಚಾರ ನಡೆಯುವ ಮಂಡ್ಯದ ಕಣದಲ್ಲಿ ಮೊದಲ ಬಾರಿಗೆ ಅಭಿವೃದ್ಧಿ ಹಾಗೂ ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ನಡೆದಿದೆ.

Also read: ಈ ಹೊಸ ನಿಯಮ ಜಾರಿಗೆ ಬಂದರೆ ಇನ್ಮುಂದೆ ಬರೀ ISI ಹೆಲ್ಮೆಟ್ ಮಾತ್ರ ಬಳಸಬೇಕಂತೆ, ಈ ನಿಯಮ ಒಳ್ಳೆದಾ ಕಿರಿಕಿರಿನಾ??

ಇದೇ ಕಾರಣಕ್ಕೆ ಚುನಾವಣೆ ಮುಗಿಯುತ್ತಿದ್ದಂತೆ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಒಂದು ಸುತ್ತಿನ ಸಮೀಕ್ಷೆ ನಡೆಸಲು ಸೂಚನೆ ನೀಡಿದ್ದರು. ಅದರಂತೆ ಸಮೀಕ್ಷೆ ನಡೆಸಿದ್ದ ಅಧಿಕಾರಿಗಳು ಸಹ ಕಡಿಮೆ ಅಂತರದಲ್ಲಿ ನಿಖಿಲ್ ಗೆಲುವು ಖಚಿತ ಎಂದು ವರದಿ ನೀಡಿದ್ದರು. ಆದರೆ, ಸಿಎಂ ಇಷ್ಟಕ್ಕೆ ಸುಮ್ಮನಾಗದೆ ಮಹಿಳಾ ಮತದಾರರ ಸಮೀಕ್ಷೆ ಮಾಡಲು ತಿಳಿಸಿದ್ದಾರೆ. ಏಕೆಂದರೆ ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಅಧಿಕವಾಗಿತ್ತು. ಅಲ್ಲದೆ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದರು. ಅದರಿಂದ ಮತ್ತೊಂದು ಸಮೀಕ್ಷೆ ನಡೆಯುತ್ತಿದೆ. ಇಷ್ಟೊಂದು ಕುತೊಹಲ ಕೆರಳಿಸಿದ ಮಂಡ್ಯ ಕ್ಷೆತ್ರದ ಪಲಿತಾಂಶ ಇದೆ ತಿಂಗಳ 23 ತಿಳಿಯಲಿದೆ.