ಲೋಕಸಭೆಯಲ್ಲಿ ಮಾತಾಡೋಕೆ ಬಿಡ್ತಿಲ್ಲ: ಮೋದಿ ಅಸಹಾಯಕತೆ

0
622

ಹಳೆಯ ೫೦೦ ಮತ್ತು ೧೦೦೦ ನೋಟುಗಳನ್ನು ರದ್ದುಪಡಿ ಸಿದ ತಮ್ಮ ನಿರ್ಧಾರದ ಬಗ್ಗೆ ಮಾತನಾಡಲು ಲೋಕ ಸಭೆಯ ಅಧಿವೇಶನದಲ್ಲಿ ಪ್ರತಿಪಕ್ಷಗಳು ಅವಕಾಶವನ್ನೇ ನೀಡುತ್ತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಗುಜರಾತ್ ನ ದೇಸಾದಲ್ಲಿ ಸಾರ್ವಜನಿಕ ಸಮಾರಂಭ ದಲ್ಲಿ ಶನಿವಾರ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳು ಪದೇಪದೇ ಅಧಿವೇಶನ ಗದ್ಧಲ ಮಾಡಿ ಕಲಾಪಕ್ಕೆ ಭಂಗ ಉಂಟು ಮಾಡುತ್ತಿವೆ ಎಂದು ಆರೋಪಿಸಿದರು. ಅಧಿವೇಶನದಲ್ಲಿ ಚರ್ಚೆಗೆ ನಾವು ಸಿದ್ಧ ಎಂದು ಹೇಳಿ ಕೊಂಡು ಬರುತ್ತಲೇ ಇದ್ದೇವೆ. ಆದರೆ ನೋಟ್ ಬ್ಯಾನ್ ಕುರಿತು ಮಾತನಾಡಲು ನನಗೆ ಅವಕಾಶವನ್ನೇ ನೀಡು ತ್ತಿಲ್ಲ. ಹಾಗಾಗಿ ಜನರ ಬಳಿ ಬಂದಿದ್ದೇನೆ ಎಂದರು.

ಕಲಾಪ ಸುಗಮವಾಗಿ ನಡೆಯಲು ಅವಕಾಶವನ್ನೇ ನೀಡದೆ ಇರುವುದರಿಂದ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೇ ಅಸಧಾನ ವ್ಯಕ್ತಪಡಿಸಿದ್ದಾರೆ ಎಂದು ಮೋದಿ ಉಲ್ಲೇಖಿಸಿದರು. ಹೌದು ಚುನಾವಣೆ ವೇಳೆ ಪ್ರತಿಪಕ್ಷಗಳು ಹಾಗೂ ನಮ್ಮ ನಡುವೆ ಸಾಕಷ್ಟು ಉದ್ವೆಗದ ಆರೋಪ- ಪ್ರತ್ಯಾರೋಪ ಗಳು ಆಗಿವೆ. ಆದರೆ ಈಗ ಚುನಾವಣೆ ಇಲ್ಲ.

ನನ್ನನ್ನು ಬೇಕಾದರೆ ವಿರೋಧಿಸಿ ಆದರೆ ಜನರಿಗೆ ನೆಟ್, ಮೊಬೈಲ್ ಬ್ಯಾಂಕಿಂಗ್ ಬಗ್ಗೆ ಅರಿವು ಮೂಡಿಸುವ ನಮ್ಮ ಕೆಲಸದಲ್ಲಿ ಕೈ ಜೋಡಿಸಿ ಎಂದು ಮನವಿ ಮಾಡಿದರು.