ಮಾನವ ರೂಪಿ ರೋಬೋಟ್‌-ಗಳಿಗೆ ನಿಮ್ಮ ಮುಖವಾಡ ಹಾಕಲು ಒಪ್ಪಿದರೆ ಈ ಕಂಪನಿಯಿಂದ ನಿಮಗೆ ಸಿಗುತ್ತೆ 92 ಲಕ್ಷ ರೂ.!

0
291

ಇತ್ತೀಚಿನ ದಿನಗಳಲ್ಲಿ ರೋಬೋಟ್‌ ತಂತ್ರಜ್ಞಾನ ಭಾರಿ ಸದ್ದು ಮಾಡುತ್ತಿದ್ದು, ಹೋಟೆಲ್, ಮನೆ ಕೆಲಸ, ಆಸ್ಪತ್ರೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ರೋಬೋಟ್ ಬಳಕೆ ಹೆಚ್ಚುತ್ತಿದ್ದು, ಈಗ ವಯಸ್ಸಾದವರಿಗೆ ಮತ್ತು ಸೈನಿಕರಿಗೆ ಸಹಾಯವಾಗಲು ರೋಬೋಟ್ ತಯಾರಿಸುತಿದ್ದು, ಅಂತಹ ರೋಬೋಟ್-ಗಳಿಗೆ ಬೇಕಾದ ಮುಖದ ಆಕಾರವನ್ನು ಹುಡುಕುತ್ತಿರುವ ಕಂಪನಿ ಜನರಿಗೆ ಒಂದು ಅವಕಾಶ ಕೇಳಿದ್ದು, ಇದಕ್ಕೆ ಒಪ್ಪಿದರೆ ನಿಮಗೆ 92 ಲಕ್ಷವನ್ನು ನೀಡುವುದಾಗಿ ಹೇಳಿದೆ.

Also read: ಪ್ಲಾಸ್ಟಿಕ್ ತಿನ್ನುವ ಹುಳುಗಳನ್ನು ಕಂಡು ಹಿಡಿದ ವಿಜ್ಞಾನಿಗಳು; ಹುಳುಗಳಿಂದ ಕಸದ ಸಮಸ್ಯೆ ಪರಿಹಾರ ವಾಗುತ್ತಾ??

ಏನಿದು ರೋಬೋಟ್ ಅವಕಾಶ?

ಹೌದು ನಿಮ್ಮ ಮುಖದ ಆಕಾರ ರೀತಿಯಲ್ಲಿ ರೋಬೋಟ್‌ ಬಳಸಲು ಒಪ್ಪಿದರೆ 92 ಲಕ್ಷ ರೂ.ಕಂಪನಿ ನೀಡುತ್ತದೆ. ಇಂತಹ ಒಂದು ಅವಕಾಶವನ್ನು ಜಿಯೋಮಿಕ್ ಎಂದು ಕರೆಯಲ್ಪಡುವ ಬ್ರಿಟಿಷ್ ರೋಬೋಟ್ ತಯಾರಿಕೆಯ ಕಂಪನಿಯು ನೀಡಿದ್ದು, ಅದರಂತೆ ಹೆಸರಿಲ್ಲದ ಕಂಪನಿಯೊಂದರ ಜೊತೆಗೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹೊಸ ‘ಅತ್ಯಾಧುನಿಕ’ ಹುಮನಾಯ್ಡ್ ರೋಬೋಟ್‌ನಲ್ಲಿ ಜನರು ತಮ್ಮ ಮುಖವನ್ನು ಬಳಸುವಂತೆ ಕೇಳುತ್ತಿದೆ. ಕಂಪನಿಯ ಹೆಸರನ್ನು ಬಹಿರಂಗಪಡಿಸದ ಕಾರಣ, ಜಿಯೋಮಿಕ್ ಪ್ರಸ್ತುತ ಎನ್‌ಡಿಎ ಅಥವಾ ರೋಬೋಟ್ ತಯಾರಿಸುವ ಕಂಪನಿಯೊಂದಿಗೆ ಬಹಿರಂಗಪಡಿಸದ ಒಪ್ಪಂದಕ್ಕೆ ಬದ್ಧವಾಗಿದೆ. ಅದರಂತೆ ಆಯ್ಕೆಯಾದ ಜನರಿಗೆ ಅದೇ ಎನ್‌ಡಿಎಗೆ ಬದ್ಧವಾಗಿದ್ದರೂ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು.

ಅಧಿಕೃತ ಬ್ಲಾಗ್ ಪೋಸ್ಟ್ ನಲ್ಲಿ ಉಲ್ಲೇಖಿಸಿದಂತೆ, “ಕಂಪನಿಯು ಉತ್ಪಾದನೆಗೆ ಹೋದ ನಂತರ ರೋಬೋಟ್ ಅಕ್ಷರಶಃ ಮುಖದ ರೀತಿ ಮತ್ತು ಸ್ನೇಹಪರ ಮುಖವನ್ನು ಹುಡುಕುತ್ತಿದೆ. ಇದು ಆಯ್ದ ವ್ಯಕ್ತಿಯ ಮುಖವನ್ನು ಸಾವಿರಾರು ಆವೃತ್ತಿಗಳಲ್ಲಿ ಪುನರುತ್ಪಾದಿಸಲು ಅನುವು ಮಾಡಿಕೊಡುತ್ತದೆ. ಬ್ಲಾಗ್ ಪೋಸ್ಟ್ ಪ್ರಕಾರ ಇಂತಹ ರೋಬೋಟ್‌ಗಳನ್ನು ವಿಶ್ವದ್ಯಾದಂತ ವಯಸ್ಸಾದ ಜನರಿಗೆ “ವರ್ಚುವಲ್ ಸ್ನೇಹಿತನಾಗಿ ವರ್ತಿಸುವುದು” ರೋಬೋಟ್-ಗಳ ಉದ್ದೇಶವಾಗಿದೆ. ಈ ರೋಬೋಟ್ ಮುಂದಿನ ವರ್ಷ ಉತ್ಪಾದನಾ ಶ್ರೇಣಿಯನ್ನು ತಲುಪುವ ನಿರೀಕ್ಷೆಯಲ್ಲಿದ್ದು, ಸುಮಾರು ಐದು ವರ್ಷಗಳಿಂದ ಅಭಿವೃದ್ಧಿಯಲ್ಲಿದೆ.

ಈ ರೋಬೋಟ್‌ಗಳನ್ನು ತಯಾರಿಸಲು ಸಂಸ್ಥೆಯು ಹಲವಾರು ಸ್ವತಂತ್ರ ವಿಸಿಗಳಿಂದ ಹೂಡಿಕೆ ಮಾಡಿದೆ ಮತ್ತು ಶಾಂಘೈ ಮೂಲದ ಪ್ರಮುಖ ನಿಧಿಯನ್ನು ತೆಗೆದುಕೊಂಡಿದೆ. ಜಿಯೋಮಿಕ್ ಪ್ರಸ್ತುತ ಪರೋನಂತಹ ಥೆರಪಿ ರೋಬೋಟ್‌ಗಳನ್ನು ತಯಾರಿಸಲು ಹೆಸರುವಾಸಿಯಾಗಿದ್ದು, ಇದು ಹಿರಿಯ ನಾಗರಿಕರಿಗೆ ಮತ್ತು ಸೇನಾ ಯೋಧರಿಗೆ ಒಂಟಿತನವನ್ನು ದೂರ ಮಾಡಲು ಮತ್ತು ಸಹಾಯ ಮಾಡುತ್ತದೆ. ಇದೆಲ್ಲವೂ ಒಂದು ಒಳ್ಳೆಯ ಅವಕಾಶ ಆದರೆ ಈ ಮುಖದ ಡೇಟಾ ಆಕಸ್ಮಿಕವಾಗಿ ಸೋರಿಕೆಯಾಗಿದ್ದರೆ ಲೈಂಗಿಕ ರೋಬೋಟ್ ತಯಾರಕರು ಕಳ್ಳತನ ಮಾಡಿದರೆ ಅದು ನಿಜವಾಗಿಯೂ ಭೀಕರವಾಗಿರುತ್ತದೆ. ಈಗಾಗಲೇ ಒಳ್ಳೆ ಹೆಸರಿರುವ ಕಂಪನಿಗಳಲ್ಲಿ ಸಹ ಹಲವಾರು ಡೇಟಾ ಕಳ್ಳತನಗಳು ಮತ್ತು ಉಲ್ಲಂಘನೆಗಳು ನಡೆಯುತ್ತಿರುವುದರಿಂದ, ಇದೇನು ಹೊಸದಲ್ಲ.