ಅಗ್ನಿ ಅವಘಡ: ಪವಾಡಸದೃಶವಾಗಿ ಬದುಕುಳಿದ ಮಗು!!

0
504

ಲಂಡನ್: ಗ್ರೆನ್‌ಫೆಲ್ ಟವರ್‌ನಲ್ಲಿ ಬುಧವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದ ವೇಳೆ 9 ಅಥವಾ10ನೇ ಮಹಡಿಯ ಕಿಟಕಿಯಿಂದ ಎಸೆದ ಮಗುವನ್ನು ಕೆಳಗಿದ್ದ ವ್ಯಕ್ತಿಯೊಬ್ಬರು ಹಿಡಿದು ರಕ್ಷಿಸಿದ ಘಟನೆ ನಡೆದಿದೆ.

Image result for London tower block blaze

24 ಮಹಡಿಯುಳ್ಳ ಗ್ರೆನ್‌ಫೆಲ್ ಟವರ್‌ ನಲ್ಲಿ ಬೆಂಕಿ ಅವರಿಸಿಕೊಂಡಿದ್ದಾಗ ಆತಂಕಗೊಂಡ ಮಹಿಳೆಯೊಬ್ಬರು ತನ್ನ ಮಗುವನ್ನು ಯಾರಾದರೂ ರಕ್ಷಿಸುತ್ತಾರೆ ಎಂಬ ವಿಶ್ವಾಸದಿಂದ ತನ್ನ ಮಗುವನ್ನು 9 ಅಥವಾ10ನೇ ಮಹಡಿಯ ಕಿಟಕಿಯಿಂದ ಕೆಳಗೆ ನಿಂತಿದ್ದ ಸಾರ್ವಜನಿಕರತ್ತ ಎಸೆದಿದ್ದರೆ ಅದೃಷ್ಟವಶಾತ್ ಕೂಡಲೇ ಕೆಳಗಿದ್ದ ವ್ಯಕ್ತಿಯೊಬ್ಬರು ಮುಂದೆ ಓಡಿ ಹೋಗಿ ಮಗುವನ್ನು ರಕ್ಷಿಸಿದ್ದಾರೆ. ಉಎಂದು ಪ್ರತ್ಯಕ್ಷದರ್ಶಿ ಸಮಿರಾ ಲಮ್ರಾನಿ ಅವರು ಹೇಳಿರುವುದಾಗಿ ದಿ ಟೆಲೆಗ್ರಾಫ್ ವರದಿ ಮಾಡಿದೆ.

ಮತ್ತೊಬ್ಬ ತಾಯಿ ಐದು ಅಥವಾ ಆರನೇ ಮಹಡಿಯಿಂದ ಐದು ವರ್ಷದ ಮಗನನ್ನು ಎಸೆದಿದ್ದಾರೆ. ಆ ಮಗುವಿಗೆ ಹೆಚ್ಚೆಂದರೆ ಮೂಳೆ ಮುರಿದಿರಬಹುದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಲಂಡನ್ನಿನ ಗ್ರೆನ್‌ಫೆಲ್ ಟವರ್‌ನಲ್ಲಿನಲ್ಲಿ ತಡರಾತ್ರಿ ಅಗ್ನಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಈ ಪ್ರತಿಷ್ಠಿತ ಅಪಾರ್ಟ್ ಮೆಂಟ್ ನಲ್ಲಿ ಸುಮಾರು 120 ಮನೆಗಳಿದ್ದು, ಅಗ್ನಿ ಅವಘಡದಲ್ಲಿ ಕನಿಷ್ಠ 12 ಮಂದಿ ಮೃತರಾಗಿದ್ದು ಐವತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.