ಕ್ಯಾನ್ಸರ್ ಕಾಯಿಲೆಗಿಂತ ಹೆಚ್ಚು ಅಪಾಯ ತರುವ ಕಾಯಿಲೆ; ಈ ಕಾಯಿಲೆ ನಿಮಗೂ ಇರಬಹುದು ನೋಡಿ..

0
900

ಈಗೀಗ ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ಕಾಯಿಲೆಗಳು ಬರುವುದು ಸಾಮಾನ್ಯವಾಗಿದೆ ಕೆಲವುಗಳು ಆಹಾರದ ಕ್ರಮಗಳಿಂದ ಬಂದರೆ ಇನ್ನೂ ಕೆಲವು ಕಾಯಿಲೆಗಳು ದುಶ್ಚಟಗಳಿಂದ ಬರುವುದು ಸಾಮಾನ್ಯವಾಗಿವೆ. ಆದರೆ ಯಾವುದೇ ಅಭ್ಯಾಸವಿಲ್ಲದೆ ತಮಗೆ ತಾವೇ ದೊಡ್ಡ ಕಾಯಿಲೆಗಳನ್ನು ಸ್ವಾಗತಿಸುವುದು ಹೆಚ್ಚಾಗುತ್ತಿದೆ ಅಂತಹ ಕಾಯಿಲೆ ಯಾವುದು ಅಂದರೆ “ಒಟ್ತಿತನ”.

Also read: ಖಿನ್ನತೆಯಿಂದ ಬಳಲುತ್ತಿರುವವರಿಗೆ ಒಂದಿಷ್ಟು ಮಾಹಿತಿ

ಹೌದು ಯಾವುದೋ ಒಂದು ಸಣ್ಣ ಘಟನೆ ಅಥವಾ ಮಾನಸಿಕ ಒತ್ತಡದಿಂದ ಜನರು ನಾನು ಸ್ವಲ್ಪ ಫ್ರೀ ಇರಬೇಕು ಅಲೋನ್ ಇರ್ಬೇಕು ಅಂತ ಬಾವಿಸುತ್ತಾರೆ. ಇದರಲ್ಲಿ ಮಗ್ನರಾದ ಕೆಲವೊಬ್ಬರು ಆ ಕಾಯಿಲೆಯಿಂದ ಹೊರ ಬಂದರೆ ಇನ್ನು ಕೆಲವೊಬ್ಬರು ಅದೇರಲ್ಲೇ ಇದ್ದು ಹೆಚ್ಚಾಗಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ. ಅಂದರೆ ಒಂಟಿತನದಲ್ಲಿ ಕಾಲ ಕಳೆಯುವ ಶೇ.50 ರಷ್ಟು ಮಂದಿ ಅಕಾಲಿಕ ಮರಣ ಹೊಂದುವ ಸಾಧ್ಯತೆಯಿದೆ ಅಂತ ಸಂಶೋಧನೆ ಒಂದು ತಿಳಿಸಿದೆ.

ಒಂಟಿತನ ಸಾವು ತರುತ್ತಾ?

ಹೆಚ್ಚಿನವರು ಏಕಾಂಗಿಯಾಗಿ ಇರಲು ಇಷ್ಟಪಡುವುದಿಲ್ಲ. ಆದರೆ ಕೆಲವು ಮಂದಿ ಯಾವ ಕಾರಣ ಗೊತ್ತಿಲ್ಲ ಸದಾ ಇತರರಿಂದ ದೂರ ಉಳಿಯುತ್ತಾರೆ. ತಮ್ಮ ಒಂಟಿತನಕ್ಕೆ ಏನು ಕಾರಣ ಎಂದು ಯಾರೊಂದಿಗೂ ಮಾತನಾಡದೇ ಒಂಟಿಯಾಗಿರಲು ಇಷ್ಟಪಡುತ್ತಾರೆ. ಒಂದಾರ್ಥದಲ್ಲಿ ಅವರು ಏಕಾಂತವನ್ನು ಬಯಸುತ್ತಿದ್ದಾರೆ ಎನ್ನಬಹುದು. ಇದು ಅತಿ ಶೀಘ್ರದಲ್ಲೇ ದೊಡ್ಡ ಅಪಾಯಕ್ಕೆ ದಾರಿ ಮಾಡಿ ಕೊಡಲಿದೆ ಎಂಬ ಎಚ್ಚರಿಕೆಯನ್ನು ಸಂಶೋಧಕರು ತಿಳಿಸಿದ್ದಾರೆ.

ಒಂಟಿತನದಿಂದ ಆಗುವ ಅಪಾಯಗಳು:

ಒಂಟಿತನವನ್ನು ಹೆಚ್ಚಾಗಿ ಬಯಸುವವರಲ್ಲಿ ಶೇ.40 ರಷ್ಟು ಹೃದಯಾಘಾತದ ಅಪಾಯ ಕಂಡು ಬರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಲ್ಲದೆ ಇದುವೇ ಖಿನ್ನತೆಯ ಸಮಸ್ಯೆಯನ್ನು ಉಂಟು ಮಾಡುತ್ತದೆ ಎಂದು ತಿಳಿಸಿದ್ದು, ಇದು ಒಂದು ರೀತಿಯಲ್ಲಿ ಕ್ಯಾನ್ಸರ್​ ರೋಗಕ್ಕಿಂತ ಅಪಾಯಕಾರಿ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಈ ಸಂಶೋಧನೆಯ ಪ್ರಕಾರ, ಒಂಟಿತನದಿಂದ ದೀರ್ಘಕಾಲದ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತದೆ.

ಖಿನ್ನತೆಯಿಂದ ಹೃದಯಾಘಾತ ಹೆಚ್ಚು:

ಸಾಮಾನ್ಯ ಜನರಿಗೆ ಹೋಲಿಸಿದರೆ, ಏಕಾಂತದಲ್ಲಿ ಕಾಲ ಕಳೆಯುವ ವ್ಯಕ್ತಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿರುತ್ತದೆ ಎಂದು ಈ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಇದು ಖಿನ್ನತೆಯ ಮತ್ತೊಂದು ರೂಪ ಎಂದು ತಿಳಿಸಿರುವ ಸಂಶೋಧಕರು, ಹೀಗಾಗಿಯೇ ಇಂತಹ ವ್ಯಕ್ತಿಗಳು ಸಮಾಜದಿಂದ ದೂರ ಉಳಿಯಲು ಬಯಸುತ್ತಾರೆ ಎಂದು ತಿಳಿಸಿದ್ದಾರೆ.

ಈ ಕಾಯಿಲೆಗೆ ಪರಿಹಾರ ಏನು?

ಇಂತಹ ವ್ಯಕ್ತಿಗಳು ಹೆಚ್ಚಾಗಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ. ಅಂದರೆ ಒಂಟಿತನದಲ್ಲಿ ಕಾಲ ಕಳೆಯುವ ಶೇ.50 ರಷ್ಟು ಮಂದಿ ಅಕಾಲಿಕ ಮರಣ ಹೊಂದುವ ಸಾಧ್ಯತೆಯಿದೆ. ಈ ರೀತಿಯ ಸಮಸ್ಯೆ ನಿಮ್ಮಲ್ಲೂ ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುವುದು ಉತ್ತಮ. ಮತ್ತು ಈ ತರಹದ ಯೋಚನೆಗಳು ಹೆಚ್ಚಾಗಿ ಬಂದರೆ ಸಂಕೋಚವಿಲ್ಲದೆ ಆಪ್ತರಲ್ಲಿ ಹೇಳಿಕೊಳ್ಳಬೇಕು. ಇದರಿಂದ ನಿಮ್ಮ ಘನತೆಗೆ ದಕ್ಕೆ ಬರುವುದು ಎಂದು ಮುಜುಗರ ಮಾಡಿಕೊಂಡರೆ ನಿಮ್ಮ ಯೋಚನೆಯಿಂದ ಪ್ರಾಣವನ್ನೇ ಕಳೆದುಕೊಳ್ಳುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

Also read: ಮಕ್ಕಳಲ್ಲಿ ಕಾಡುವ ಖಿನ್ನತೆ ಎಂಬ ಮಹಾ ಮಾರಿಯ ಬಗ್ಗೆ ನಿಮಗೆಷ್ಟು ಗೊತ್ತು