ಉದ್ದ ಕೂದಲಿಗೆ ದುಬಾರಿ ಕ್ರೀಮ್/ಶಂಪೂ ಬಿಟ್ಟುಬಿಡಿ… ಈ ಮನೆಮದ್ದುಗಳನ್ನು ಪಾಲಿಸಿ ಸಾಕು..!!

0
2523

ಹೆಣ್ಣು ಮಕ್ಕಳು ಸೌಂದರ್ಯ ಹೆಚ್ಚಿಸುವ ಕೂದಲಿನ ಬಗ್ಗೆ ಜಾಸ್ತಿ ಗಮನ ಹರಿಸುತ್ತಾರೆ. ಕೂದಲು ಬೇಗನೆ ಉದ್ದ ಬರಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಉದ್ದ ಕೂದಲನ್ನು ಬಿಡಲು ಇಷ್ಟಪಡದಿದ್ದರೂ, ಕೂದಲು ಕತ್ತರಿಸಿದ ಬಳಿಕ ಬೇಗನೆ ಉದ್ದ ಬೆಳೆಯದಿದ್ದರೆ ಚಡಪಡಿಸುವವರು ಬಹಳಷ್ಟು ಮಂದಿ . ಅನೇಕರು ಕೂದಲು ಬೆಳವಣಿಗೆಗೆ ಅನೇಕ ರೀತಿಯ ಶಾಂಪೂ, ಕಂಡೀಷನರ್ ಅಂತಹ ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ. ಆದರೂ ಕೂದಲು ಉದ್ದ ಬೆಳೆಯುವುದಿಲ್ಲ. ಇದಕ್ಕೆ ಇರುವ ಕಾರಣವೇನೆಂದರೆ ಕೂದಲ ಆರೈಕೆಯಲ್ಲಿ ಮಾಡುವ ಕೊರತೆ . ಕೆಲವರು ಕೂದಲು ಬೆಳವಣಿಗೆಗೆ ಮಾತ್ರೆಗಳನ್ನು ಮತ್ತು ಎಣ್ಣೆಗಳನ್ನೇ ಬಳಸುತ್ತಾರೆ ಆದರೆ ಕೂದಲ ಬೆಳವಣಿಗೆಗೆ ಪೂರಕವಾದ ಆಹಾರ ಪದಾರ್ಥಗಳನ್ನು ಬಳಸುವದನ್ನು ಮರೆತುಬಿಡುತ್ತೇವೆ…

ಕೂದಲು ಬೇಗನೆ ಉದ್ದ ಬೆಳೆಯಬೇಕೆ? ಹಾಗಾದರೆ ಇಲ್ಲಿ ನಾವು ಹೇಳುವ ದಿನನಿತ್ಯ ಕೆಲವು ಆಹಾರ ಪದ್ದತಿಗಳನ್ನು ಅನುಸರಿಸಿ ಕೂದಲಿನ ಬುಡ ಗಟ್ಟಿ ಮಾಡಿಕೊಳ್ಳುವುದರ ಜೊತೆಗೆ ಉದ್ದ ಕೂದಲು ನಿಮ್ಮದಾಗಿಸಿಕೊಳ್ಳಿ.

ಮೊಟ್ಟೆ:
ಮೊಟ್ಟೆಗಳು ಪ್ರೋಟಿನ್‌ನ ಅತ್ಯಂತ ಪ್ರಮುಖ ಮೂಲಗಳಾಗಿವೆ. ಪ್ರತಿ ಮೊಟ್ಟೆಯಲ್ಲಿ ಒಂದು ಗ್ರಾಂ.ನಷ್ಟು ಕಬ್ಬಿಣಾಂಶ ಇರುತ್ತದೆ. ಮೊಟ್ಟೆಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನುಗಳು ಮತ್ತು ಬಯೋಟಿನ್ ಎಂಬ ಪೋಷಕಾಂಶಗಳಿದ್ದು ಇವು ಕೂದಲ ಬುಡದ ಜೀವಕೋಶಗಳ ಬೆಳವಣಿಗೆಗೆ ಪೂರಕವಾಗಿವೆ. ಇದರಿಂದ ಕೂದಲು ಹೆಚ್ಚಿನ ದೃಢತೆ ಪಡೆಯುವುದರ ಜೊತೆಗೇ ಉದುರುವುದರಿಂದಲೂ ರಕ್ಷಣೆ ಪಡೆಯುತ್ತದೆ.

ಕೋಳಿಮಾಂಸ (ಚಿಕನ್)
ಕೋಳಿಮಾಂಸದಲ್ಲಿಯೂ ಹೆಚ್ಚಿನ ಪ್ರಮಾಣದ ಪ್ರೋಟೀನು ಇದ್ದು ಸುಲಭವಾಗಿ ತುಂಡಾಗುವ ಕೂದಲಿಗೆ ವಿಶೇಷ ಆರೈಕೆ ನೀಡಿ ಕೂದಲುಗಳು ಸಾಫ್ಟ್ ಆಗುವಂತೆ ಮಾಡುತ್ತವೆ. ತಲೆಯ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳಿರುವ ಕಾರಣ ಕೋಳಿಮಾಂಸ ಉತ್ತಮ ಆಹಾರವಾಗಿದೆ.

ಮೀನು:
ಮೀನುಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ-6, ಪ್ರೋಟಿನ್ ಮತ್ತು ಒಮೇಗಾ ೩ ಫ್ಯಾಟಿ ಆಸಿಡ್ ಗಳು ಉತ್ತಮ ಪ್ರಮಾಣದಲ್ಲಿರುತ್ತವೆ. ಈ ಪೌಷ್ಟಿಕಾಂಶಗಳು ಕೂದಲಿನ ಬುಡವನ್ನು ಗಟ್ಟಿಮಾಡಿ ಹೊಳಪನ್ನು ಹೆಚ್ಛ್ಸಿ ಕೂದಲು ಸೊಂಪಾಗಿ ಬೆಳೆಯುವಂತೆ ಪ್ರಚೋದಿಸುತ್ತದೆ.

ಹಸಿರು ಸೊಪ್ಪು ಮತ್ತು ಹಸಿ ತರಕಾರಿಗಳು:
ಮೆಂತ್ಯೆ, ಸಬ್ಬಸ್ಸಿಗೆ ಮತ್ತು ದಂಟಿನ ಸೊಪ್ಪುಗಳಲ್ಲಿ ಕಬ್ಬಿಣಾಂಶ ಅಧಿಕ ಪ್ರಮಾಣದಲ್ಲಿ ಇದ್ದು ಕೂದಲಿಗೆ ದೃಢತೆ ನೀಡುವುದರ ಜೊತೆಗೇ ಅಕಾಲಿಕ ನೆರೆ ಮತ್ತು ಉದುರುವುದನ್ನೂ ತಡೆಯುತ್ತದೆ. ದಂಟಿನ ಸೊಪ್ಪುಗಳಲ್ಲಿ ಆಕ್ಸಾಲಿಕ್ ಆಮ್ಮ ಅತಿ ಹೇರಳವಾಗಿರುತ್ತವೆ. ಮೆಂತ್ಯೆ ಸೊಪ್ಪಿನಲ್ಲಿ ಪ್ರೋಟೀನ್ ಮತ್ತು ನಿಕೋಟಿನಿಕ್ ಆಸಿಡ್ ಜಾಸ್ತಿ ಇರುವುದರಿಂದ ಕೂದಲು ಸಮೃದ್ಧವಾಗಿ ಬೆಳೆಯಲು ಸಹಾಯ ಮಾಡುತ್ತವೆ.

ಬಾದಾಮಿ ಮತ್ತು ವಾಲ್ ನಟ್ ಗಳು:
ಇದು ಅತಿ ಹೇರಳವಾಗಿ ಬಯೋಟಿನ್ ಹೊಂದಿರುವ ಏಕಮಾತ್ರ ಒಣಫಲ.ಇದರಲ್ಲಿರುವ ವಿಟಮಿನ್ ಬಿ ತಲೆಯ ಚರ್ಮಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಕೂದಲ ಬುಡಗಳನ್ನು ದೃಢಗೊಳಿಸಿ ಅಕಾಲಿಕ ನೆರೆ ಮತ್ತು ಉದುರುವುದನ್ನೂ ತಡೆಯುತ್ತದೆ. ಬಾದಾಮಿ ಮತ್ತು ವಾಲ್‌ನಟ್‍ ಕಬ್ಬಿಣಾಂಶ ಮತ್ತು ವಿಟಮಿನ್ ಇ ಸಂಪನ್ಮೂಲಗಳ ಉತ್ತಮ ಆಗರವಾಗಿದೆ. ಇವುಗಳಲ್ಲಿರುವ ಒಮೇಗಾ ೩ ಮತ್ತು ೬ ಫ್ಯಾಟಿ ಆಸಿಡ್ಗಳು ಹಾರ್ಮೋನ್ ಗಳ ಏರುಪೇರನ್ನು ತಡೆಗಟ್ಟಿ ಕೂದಲು ಉದುರುವದನ್ನು ತಡೆಗಟ್ಟುತ್ತದೆ.

ದ್ವಿದಳ ಧಾನ್ಯಗಳಲ್ಲಿ:
ದ್ವಿದಳ ಧಾನ್ಯಗಳಲ್ಲಿ ಪ್ರೋಟೀನುಗಳು ಹೇರಳವಾಗಿದ್ದು ಕೂದಲ ಜೀವಕೋಶಗಳ ವಿಭಜನೆಯಲ್ಲಿ ಸಹಕರಿಸುವ ಮೂಲಕ ಕೂದಲ ಬೆಳವಣಿಗೆ ಹೆಚ್ಚಿಸುತ್ತದೆ. ಅಲ್ಲದೇ ಇದರಲ್ಲಿರುವ ಫೋಲಿಕ್ ಆಮ್ಲ ಕೂದಲ ಬುಡಕ್ಕೆ ಅಗತ್ಯವಾದ ಆಮ್ಲಜನಕವನ್ನು ಒದಗಿಸುವ ಮೂಲಕ ಕೂದಲ ದೃಢತೆ ಮತ್ತು ಕಾಂತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಕುಂಬಳಕಾಯಿ ಬೀಜಗಳು ಕೂದಲಿಗೆ ಉತ್ತಮ ಆಹಾರ. ಇದರಲ್ಲಿ ವಿಟಮಿನ್ಗಳು B1, B2, B3, ಮತ್ತು B4 ಅನ್ನು ಒಳಗೊಂಡಿರುತ್ತವೆ, ಇವು ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ
50 ಅಡಿ ರಸ್ತೆ, ಹನುಮಂತನಗರ
ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840