ಪ್ರೀತಿ ಚಿರಕಾಲ ಉಳಿಯಬೇಕು ಅಂದ್ರೆ ಈ ಸರಳ ಸೂತ್ರಗಳನ್ನ ಪಾಲಿಸಿ!!

0
1837

ಹೆಚ್ಚು ದಿನ ಉಳಿಯುವ-ಪ್ರೇಮಿಗಳ ೪ ಅಭ್ಯಾಸಗಳು

ಒಂದು ಸಂಬಂಧ ಹೆಚ್ಚು ದಿನ ಉಳಿಯಬೇಕೆಂದರೆ ಪ್ರೀತಿಯ ಜೊತೆ , ಪ್ರೀತಿಯನ್ನು ಉಳಿಸಿಕೊಳ್ಳಲು ಪರಿಶ್ರಮ ಕೂಡ ಅತ್ಯಗತ್ಯ. ಹೆಚ್ಚಿನ ದಿನ ಉಳಿಯುವ ಪ್ರೇಮಿಗಳು ಪರಸ್ಪರ ಭಾವನೆಗೆ ಸ್ಪಂದಿಸುತಾರೆ. ಈ ಸ್ಪಂದನೆ ಹಾಗು ಭಾವನೆಗಳು ಒಂದು ಸಂಬಂಧದಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

Image result for long lasting relationship

 ಈ ಕೆಳಗಿನ ೪ ಗುಣಗಳು ಅಥವ ಅಭ್ಯಾಸಗಳು ಪ್ರೇಮಿಗಳು ರೂಢಿಸಿಕೊಂಡರೆ , ಅವರ ಸಂಬಂಧ ಗಟ್ಟಿಯಾಗಿರುತ್ತದೆ.

 1. ಸಮಸ್ಯೆಗಳ ಪರಿಹಾರದ ಬಗ್ಗೆ ಗಮನ ಹರಿಸಿ

ದಿನಕ್ಕೆ ನೂರಾರು ಸಮಸ್ಯೆಗಳ್ಳನ್ನು ಎದುರಿಸುತ್ತೇವೆ , ಊಟ ಏನು ಮಾಡುವುದು ಎನ್ನುವುದರಿಂದ ಹಿಡಿದು ಮನೆಯನ್ನು ಎಲ್ಲಿ ಖರೀದಿ ಮಾಡುವುದು ಎನ್ನುವುದರ ವರೆಗೆ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ. ಯಾರು ಸರಿ ಎಂದು ವಾದಿಸುವ ಬದಲು , ಸಮಸ್ಯೆಯ ಪರಿಹಾರದ ಬಗ್ಗೆ ಗಮನಿಸಿದರೆ ಸಂಬಂಧ ಉಳಿಯುತ್ತದೆ.

Image result for long lasting relationship

2. ಅನ್ನಿಸಿದ್ದನ್ನು ಹೇಳಿ

ಎಷ್ಟೋ ಸಂಬಂಧಗಳು ತಪ್ಪುಸಂದೇಶ ರಾವನೆಯಿಂದ ಮುರಿದು ಬೀಳುತ್ತದೆ.ಯಾವುದೇ ವಿಷಯದಲ್ಲಿ ನಿಮ್ಮ ಅನಿಸಿಕೆಯನ್ನು ಸ್ಪಷ್ಟವಾಗಿ ಹೇಳಿ , ನಿಮ್ಮ ಜೊತೆಗಾರರ ಅನಿಸಿಕೆಯನ್ನು ಗೌರವಿಸಿ. ನಂತರ ಒಟ್ಟಿಗೆ ನಿರ್ಧಾರವನ್ನು ತೆಗೆದುಕೊಳ್ಳಿ.

Related image

3. ನಿಮ್ಮ ಜೊತೆಗಾರರ ಜೊತೆ ಕಳೆಯುವ ಪ್ರತಿಯೊಂದು ಕ್ಷಣವನ್ನು ವಿಶೇಷವಾಗಿರಿಸಿ  

ವಿಶೇಷ ಎಂದರೆ ದುಬಾರಿ ಉಡುಗೊರೆ ಎಂದಲ್ಲ , ಬದಲಾಗಿ ನಿಮ್ಮವರನ್ನು ಚೆನ್ನಾಗಿ ಅರಿತು ಚಿಕ್ಕ ಚಿಕ್ಕ ಖುಷಿಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವುದು. ಇಂತದ್ದರಿಂದ ಪ್ರೀತಿ ಹೆಚ್ಚುತ್ತದೆ , ಸಂಬಂಧ ಮತ್ತೂ ಗಟ್ಟಿಯಾಗುತ್ತದೆ.

Image result for long lasting relationship

4. ನಿಮ್ಮ ಪ್ರೀತಿಯ ಬಗ್ಗೆ ಅವರಿಗೆ ವಿಶ್ವಾಸ ತರಿಸಿ .

ಇದು ಕ್ಲಿಷೆ ಎನ್ನಿಸಿದರೂ ಸಹ ಬಹಳ ಉಪಯುಕ್ತವಾದುದು . ಅವರಿಗೆ ನಿಮ್ಮ ಪ್ರೀತಿಯ ಬಗ್ಗೆ ವಿಶ್ವಾಸ ಮೂಡಿದರೆ , ನಿಮ್ಮ ಮೇಲೆ ನಂಬಿಕೆ ಬರುತ್ತದೆ ಹಾಗು ಪ್ರೀತಿ ಹೆಚ್ಚುತ್ತದೆ .

ಸಂಬಂಧ ಉಳಿಸಲು ತಾಜ್ ಮಹಲ್ ತರಬೇಕೆಂದಿಲ್ಲ , ಈ ಸರಳ ಸೂತ್ರಗಳನ್ನು ಪಾಲಿಸಿದರೆ ಸಾಕು .