ಶ್ರೀ ರಾಮನು ಹೆಂಡ ಮಾಂಸ ತಿನ್ನುತ್ತಿದ್ದ; ಸೀತೆಗೆ ಮದ್ಯ ಕುಡಿಸುತ್ತಿದ್ದ, ಅವನೊಬ್ಬ ಕೊಲೆಗಡುಕ ಎಂದು ವಿವಾದ ಸೃಷ್ಟಿಸಿದ ಪ್ರೊ ಭಗವಾನ್..

0
912

ಶ್ರೀ ರಾಮ ಮಂದಿರದ ವಿಷಯಕ್ಕೆ ದೇಶದ ತುಂಬೆಲ್ಲ ವಿವಾದಗಳು ನಡೆಯುತ್ತಿರುವುದು ಗೊತ್ತೇ ಇದೆ. ಈ ವಿಷಯಕ್ಕೆ ಸಂಬಂಧಪಟ್ಟಟ್ಟೆ ರಾಮಮಂದಿರ ಏಕೆ ಬೇಡ? ಎಂಬ ಪುಸ್ತಕವನ್ನು ಬರೆದ ಮೈಸೂರಿನ ವಿಚಾರವಾದಿ ಪ್ರೊಫೆಸರ್ ಭಗವಾನ್ ಮತ್ತೊಂದು ವಿವಾದಾಕ್ಕೆ ಗುರಿಯಾಗಿದ್ದಾರೆ. ಶ್ರೀರಾಮ ದೇವರೆ ಅಲ್ಲ, ಸತ್ಯವಂತನೂ ಅಲ್ಲ, ವೀರನೂ ಅಲ್ಲ. ಕೊಲೆಗಡುಕ” ಸೀತೆಯ ಜೊತೆ ಮಧು ಮೈರೇಯಕಂ ಎಂಬ ಮದ್ಯಪಾನ ಮಾಡುತ್ತಿದ್ದನು, ಮಾಂಸ ತಿನ್ನುತ್ತಿದ್ದನು. ರಾಮ ಮದಿರೆ ಮಾನಿನಿಯರಲ್ಲಿ ಮೈ ಮರೆಯುತ್ತಿದ್ದನು‌. ಅವನು ರಾಜ್ಯಭಾರ ಮಾಡುತ್ತಿರಲಿಲ್ಲ ಬದಲಿಗೆ ಅವನು ತಮ್ಮ ಭರತ ರಾಜ್ಯವಾಳುತ್ತಿದ್ದ ಎಂದು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

Also read: ಮೋದಿ ತರುತ್ತಿರುವ ದೇಶದ ಅತಿ ವೇಗದ ಟ್ರೈನ್ ಬಗ್ಗೆ ತಿಳಿದುಕೊಳ್ಳಿ, ನಮ್ಮ ದೇಶಾನೂ ಪಾಶ್ಚಾತ್ಯ ದೇಶಗಳಿಗಿಂತ ಕಮ್ಮಿಯಿಲ್ಲ ಅನ್ಸೋಕ್ಕೆ ಶುರು ಆಗುತ್ತೆ!!

ಪುಸ್ತಕದಲ್ಲಿ ಏನಿದೆ?

ಶುಚಿಯಾದ ಮೈರೇಯಕವನ್ನು ದೇವೇಂದ್ರ ತನ್ನ ಹೆಂಡತಿ ಶುಚಿಗೆ ಕುಡಿಸಿದಂತೆ ರಾಮ ತನ್ನ ಕೈಯಿಂದ ಸೀತೆಗೆ ಕುಡಿಸಿದನು. ಅವರ ಊಟಕ್ಕೆ ಸೇವಕರು ಒಳ್ಳೆಯ ಮಾಂಸವನ್ನು ಬಗೆಬಗೆಯ ಹಣ್ಣುಗಳನ್ನು ತರುತ್ತಿದರು. ಅವನೊಬ್ಬ ಕೊಲೆಗಾರ. ರಾಮ ಅಷ್ಟೇ ಅಲ್ಲ. ಕೃಷ್ಣ, ಶಿವ, ಚಂಡಿ, ಚೌಡಿ, ಚಾಮುಂಡಿ ದೇವರ ಬಗ್ಗೆಯೂ ಪುಸ್ತಕದಲ್ಲಿ ಉಲ್ಲೇಖಿಸಿರುವ ಅವರು ತೊಂದರೆಯಲ್ಲಿದ್ದವರಿಗೆ ಕಷ್ಟಕಾಲದಲ್ಲಿ ನೆರವಿಗೆ ಬಾರದ ದೇವರು ಕಲ್ಲಿನ ಆಕಾರಗಳು ಅಷ್ಟೇ ಗುಜರಾತಿನ ಸೋಮನಾಥನ ದೇವಾಲಯದ ಮೇಲೆ ಒಂದಲ್ಲ 18 ಬಾರಿ ದಾಳಿ ಮಾಡಿ ಚಿನ್ನ, ಬೆಳ್ಳಿ ನಗ-ನಾಣ್ಯಗಳನ್ನು ಎತ್ತಿಕೊಂಡು ಹೋದ ದಾಳಿಕೋರನ ಮೇಲೆ ನಿಮ್ಮ ಸೋಮನಾಥ ಏನು ಮಾಡಿದ. ಮಾರಮ್ಮರನ್ನು ಕಸದಂತೆ ತಿರಸ್ಕರಿಸಿ ಎಸೆಯಿರಿ.

Also read: ಪ್ರಯಾಣ ಮಾಡುವಾಗ ವಾಂತಿ ಹಾಗೂ ತಲೆಸುತ್ತಿನಿಂದ ಮುಕ್ತಿ ಸಿಗಬೇಕಾದರೆ ಈ ಮನೆಮದ್ದುಗಳನ್ನು ಪಾಲಿಸಿ…!!

ಜನರು ಮೊದಲಿನಿಂದ ರಾಮಾಯಣದ ತಪ್ಪು ವ್ಯಾಖ್ಯಾನಗಳನ್ನು ನಂಬಿಕೊಂಡು ಬಂದಿದ್ದಾರೆ. ವಾಲ್ಮೀಕಿ ಪ್ರಕಾರ ರಾಮ ಶ್ರೇಷ್ಠ ಅಲ್ಲ. ಸೀತೆ ಮಾತ್ರ ಶ್ರೇಷ್ಠಳು. ಈ ವಿಚಾರಗಳನ್ನು ನಾನು ಪುಸ್ತಕದಲ್ಲಿ ಸರಿಯಾಗಿ ವ್ಯಾಖ್ಯಾನಿಸಿದ್ದೇನೆ. ನಾನು‌ ರಾಮನನ್ನು ಅವಹೇಳನ ಮಾಡಿಲ್ಲ. ವಾಲ್ಮೀಕಿ ಬರೆದಿರುವ ರಾಮಾಯಣವನ್ನ ಸರಿಯಾಗಿ ವ್ಯಾಖ್ಯಾನಿಸಿದ್ದೇನೆ. ಶ್ರೀರಾಮ ಸೀತೆಗೆ ಮದ್ಯ ಕುಡಿಸುತ್ತಿದ್ದ. ಸ್ತ್ರೀಯರೊಂದಿಗೆ ಕಾಲ ಕಳೆಯುತ್ತಿದ್ದ ಎಂದು ವಾಲ್ಮೀಕಿ ಉಲ್ಲೇಖಿಸಿದ್ದಾರೆ. ಅದನ್ನು ನಾನು ವಿವರಿಸಿದ್ದೇನೆ ಎಂದು ಹೀಗೆ ರಾಮನ ಕುರಿತಾಗಿ ಇಡೀ ಪುಸ್ತಕದಲ್ಲಿ ಕೆಲ ಚರ್ಚಾಸ್ಪದ ಅಂಶಗಳನ್ನು ಅವರು ಉಲ್ಲೇಖಿಸಿದ್ದಾರೆ.

ಗಾಂಧಿಜಿ ಬಗ್ಗೆಯೂ ಅವಹೇಳನ:

ಗಾಂಧಿ ಮತಾಂಧ ಮೂಲಭೂತವಾದಿ. ಗಾಂಧೀಜಿಯವರಲ್ಲಿ ಮಾನವ ಪ್ರಜ್ಞೆಗಿಂತ ಮತ ಪ್ರಜ್ಞೆ ಅಪಾರವಾಗಿ ಭಯಂಕರವಾಗಿತ್ತು ಗಾಂಧೀಜಿ ರಾಮ ಭಗವದ್ಗೀತೆಯ ಚಾತುರ್ವರ್ಣವನ್ನು ತಮ್ಮ ಆದರ್ಶ ಮಾಡಿಕೊಂಡಿದ್ದರು. ಅವರು ಅಬ್ರಾಹ್ಮಣರನ್ನು ಮತೀಯ ದಾಸ್ಯದಲ್ಲೇ ಉಳಿಯುವಂತೆ ಮಾಡಿದರು. ಇದು ಶೂದ್ರರಿಗೆ ಗಾಂಧೀಜಿ ಎಸಗಿದ ಮಹಾ ದ್ರೋಹ. ಮಹಾ ಅನ್ಯಾಯ ಎಂದು ಬರೆದಿದ್ದಾರೆ.

ಈ ವಿವಾದದ ಬಗ್ಗೆ ಭಗವಾನ್​:

@publictv.com

Also read: ಭಾರತೀಯ ರೈಲ್ವೆ ಇಲಾಖೆಯಿಂದ ವಿವಿಧ 14,033 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಶ್ರೀರಾಮನ ಬಗ್ಗೆ ಬರೆದ ಪುಸ್ತಕ ವಿವಾದಾತ್ಮಕ ಸ್ವರೂಪ ಪಡೆಯುತ್ತಿದ್ದಂತೆ, ಪ್ರೊ.ಕೆ.ಎಸ್​.ಭಗವಾನ್ ಈ ಕುರಿತು​ ಸ್ಪಷ್ಟನೆ ನೀಡಿದು. ನನ್ನ ಅಭಿಪ್ರಾಯದಲ್ಲಿ ರಾಮಾಯಣದ ಅಂಶ ಬಹಿರಂಗಪಡಿಸಿದ್ದೇನೆ. ನನ್ನ ಪ್ರತಿಯೊಂದು ಮಾತನ್ನು ಸಮಗ್ರವಾಗಿ ಚಿತ್ರಿಸಿದ್ದೇನೆ. ಅದು ನನ್ನ ವೈಯಕ್ತಿಕ ಮಾತು ಎಂದು ಹೇಳಿದ್ದಾರೆ.