ಶಿವಲಿಂಗದ ಮೇಲೆ ನೀರಿನ ಧಾರೆಯನ್ನು ಯಾಕೆ ಹರಿಯ ಬಿಡುತ್ತಾರೆ..?

0
1871

Kannada News | Karnataka Temple History

ಶ್ರದ್ಧೆ ಭಕ್ತಿಯಿಂದ ಪೂಜಿಸುವ ದೇವರುಗಳಲ್ಲಿ ಶಿವ ಸಹ ಒಬ್ಬನು. ಉಳಿದ ದೇವಾನು ದೇವತೆಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಬೇರೆ ದೇವತೆಗಳನ್ನು ಅವರವರ ರೂಪಗಳಲ್ಲಿ ಇರುವ ವಿಗ್ರಹಗಳನ್ನು ಅಥವಾ ಮೂರ್ತಿಗಳನ್ನು ಪೂಜಿಸುತ್ತಾರೆ. ಆದರೆ ಶಿವನನ್ನು ಮಾತ್ರ ಲಿಂಗ ರೂಪದಲ್ಲಿ ಭಕ್ತರು ಆರಾಧಿಸುತ್ತಾರೆ. ಹೌದು ಶಿವಾಲಯಕ್ಕೆ ಹೋದರೂ ಅಲ್ಲಿ ಶಿವನ ವಿಗ್ರಹ ಇರಲ್ಲ. ಲಿಂಗ ಮಾತ್ರ ಇರುತ್ತದೆ. ಆದರೆ ಈ ಶಿವಲಿಂಗದ ಬಗ್ಗೆ ನಾವು ತಿಳಿದುಕೊಳ್ಳುವ ಎಷ್ಟೋ ಸಂಗತಿಗಳು ಇವೆ, ಅದರಲ್ಲಿ ಒಂದು ಶಿವಲಿಂಗದ ಮೇಲೆ ನೀರಿನ ಧಾರೆಯನ್ನು ಹರಿಯ ಬಿಡುವುದು…

ಶಿವಪರಮಾತ್ಮನು ಜ್ಞಾನ ಸಾಗರನಾಗಿದ್ದಾನೆ. ಜ್ಞಾನಗಂಗೆಯು ಅವನ ಬಳಿ ಇದೆ. ಆದುದರಿಂದಲೇ ಅವನನ್ನು ಜ್ಞಾನಗಂಗಾಧರನೆಂದು ಕರೆಯಲಾಗುತ್ತದೆ. ಶಂಕರನು ತ್ರಿಮೂರ್ತಿಗಳಲ್ಲಿ ಒಬ್ಬನು. ಮತ್ತು ಶಿವನ ರಚನೆ ಆಗಿದ್ದರಿಂದ ಶಂಕರನು ಜ್ಞಾನಗಂಗಾಧರನಲ್ಲ ಶಿವಪರಮಾತ್ಮನು ಪ್ರಜಾಪಿತ ಬ್ರಹ್ಮರವರ ಮುಖಧರಿಸಿ ಜ್ಞಾನಗಂಗೆಯನ್ನು ಜನತೆಗೆ ಉಪದೇಶಿಸಿದ ತ್ರಿಕಾಲಜ್ಞಾನ ರೂಪಿಸುವ ಸಾಂಕೇತಿಕವಾಗಿ ಧಾರಾಪಾತ್ರೆಯನ್ನು ಲಿಂಗದ ಮೇಲೆ ಇಟ್ಟು ಧಾರೆ ಅಂದರೆ ಹನಿ ಹನಿಯಾಗಿ ಬೀಳುವಂತೆ ಏರ್ಪಡಿಸಲಾಗಿದೆ.

ಇದರ ಜೊತೆ ಜೊತೆಗೆ ಲಿಂಗದಲ್ಲಿ ಶಿವ-ಶಕ್ತಿ ಒಟ್ಟಿಗೆ ಇರುವುದರಿಂದ ಪ್ರಚಂಡ ಶಕ್ತಿಯು ನಿರ್ಮಾಣವಾಗುತ್ತದೆ. ಲಿಂಗದ ಕಣಗಳ ಮೇಲೆ ಹಾಗೂ ದರ್ಶನಕ್ಕೆ ಬರುವ ಭಕ್ತರ ಮೇಲೆ ಅದರ ಪ್ರತಿಕೂಲ ಪರಿಣಾಮವಾಗ ಬಾರದೆಂದು ಲಿಂಗದ ಮೇಲೆ ಸತತವಾಗಿ ನೀರಿನ ಧಾರೆಯು ಬೀಳುವ ಹಾಗೆ ಮಾಡುತ್ತಾರೆ. ಲಿಂಗದ ಮೇಲೆ ಬೀಳುವ ನೀರಿನ ಧಾರೆಯಿಂದ ಸೂಕ್ಷ್ಮವಾಗಿ ಓಂಕಾರವು ನಿರ್ಮಾಣವಾಗುತ್ತದೆ ಅಂತ ಶಿವ ಪುರಾಣದಲ್ಲಿ ಉಲ್ಲೇಖವಿದೆ. ಅದರಂತೆ ಜೀವಾತ್ಮದ ಮೇಲೆ ಸತತವಾಗಿ ಮಂತ್ರಧಾರೆಯನ್ನು ಮಾಡಿದರೆ, ಕಾಲಪಿಂಡವು ತೆರೆಯುತ್ತದೆ, ಅಂದರೆ ನಿರ್ಗುಣ ಬ್ರಹ್ಮನ ವರೆಗೆ ಹೋಗಲು ಸಾಧ್ಯವಾಗುತ್ತದೆ.

ದೇವಾಲಯದಲ್ಲಿ ಧಾರಾಪಾತ್ರೆಯಲ್ಲಿ ಗಂಗೆ ಹೆಚ್ಚು ಕಡಿಮೆ ಇಲ್ಲದಂತೆ ಒಂದೊಂದೇ ಹನಿಹನಿಯಾಗಿ ಶಿವಲಿಂಗದ ಮೇಲೆ ಬೀಳುವಂತೆ ಧಾರಾಪಾತ್ರೆಯನ್ನು ಅಳವಡಿಸಲಾಗುತ್ತದೆ. ಧಾರಾಪಾತ್ರೆಯಲ್ಲಿನ ನೀರು ಶಿವಲಿಂಗದ ಮೇಲೆ ಬಿದ್ದು ನಂತರ ಮುಂದಕ್ಕೆ ಹರಿದಾಗ ಶಿವತೀರ್ಥವೆಂದು ಶಿವ ಭಕ್ತರು ಸ್ವೀಕರಿಸುತ್ತಾರೆ. ಇದು ಪರಮಾತ್ಮನಿಂದ ತಾನೂ ಧರಿಸಿದ ಪ್ರಜಾಪಿತನಿಂದ ಬ್ರಹ್ಮನ ಮುಖಕಮಲದ ಮೂಲಕ ಬೋಧಿಸಲ್ಪಟ್ಟ ಜ್ಞಾನ ತೀರ್ಥವನ್ನು ಜನತೆ ಸ್ವೀಕರಿಸಿದ ಸಂಕೇತವಾಗಿದೆ.

Also Read: ಹಲವಾರು ವೈಶಿಷ್ಟ್ಯತೆಗಳನ್ನೊಳಗೊಂಡ “ಶಿವ ಲಿಂಗ”ದ ಹಿಂದಿನ ಪುರಾಣ, ಮಹತ್ವ ತಿಳಿದುಕೊಂಡು ಶಿವನ ಕೃಪೆಗೆ ಪಾತ್ರಾರಾಗಿ..!!