ಈ ಮಹಿಳಾ ಲಾರಿ ಚಾಲಕಿಯ ಕಥೆ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಸ್ಪೂರ್ತಿ!!!

0
1130

ಸ್ತ್ರಿ ಸ್ವಾತಂತ್ರದ ಹಾಗು ಸಮಾನತೆಯ ಪ್ರತೀಕ ಈ ತಬಸ್ಸುಮ್.

ಲಾರಿ ಚಾಲನೆಯು ಹುಡುಗಿಯರ ಪರಿಮಿತಿಯಲಿಲ್ಲ ಎನ್ನುವುದು ಸಮಾಜದ ಅಲಿಖಿತ ನಿಯಮ. ಆದರೆ ಅದು ಈ ೨೫ ವರ್ಷದ ಯುವತಿ ತಬಸ್ಸುಮ್ ಅಲಿ ಗೆ ಅನ್ವಯಿಸುವುದಿಲ್ಲ. ಮಧ್ಯಪ್ರದೇಶದ ಮಂಡಲ ಜಿಲ್ಲೆಯ ಈ ಯುವತಿ ಗೆ ಲಾರಿ ಚಾಲನೆ ನೀರು ಕುಡಿದಷ್ಟೇ ಸುಲಭ . ಅತಿ ದೂರದ ಪ್ರಯಾಣದ ಹೆದರಿಕೆ ಅಥವ ರಾತ್ರಿಯ ಹೊತ್ತಿನ ಚಲನೆಯ ಭಯ ಈಕೆಗೆ ಇಲ್ಲ. ಈಕೆ ಮಧ್ಯಪ್ರದೇಶದಲ್ಲಿ ಭಾರದ ವಾಹನಗಳ ಚಲನೆಯ ಲೈಸೆನ್ಸ್ ಪಡೆದ ಮೊದಲ ಮಹಿಳೆ.

Credits: Weekend Leader

ಅವರು ಸರಿ ಸುಮಾರು ೨೦೦-೨೨೫ ಕಿ.ಮಿಗಳ ದೂರವನ್ನು ದಿನ ಕ್ರಮಿಸುತ್ತಾರೆ , ಆ ಸಮಯದಲ್ಲಿ ಅವರ ಜೊತೆ ಒಬ್ಬ ಸಹಾಯಕ ಮಾತ್ರ ಇರುತ್ತಾನೆ. ಕಳೆದ ೩ ವರ್ಷದಿಂದ ಲಾರಿ ಚಲನೆಯೇ ತಬಸ್ಸುಮ್ ರವರ ಜೀವನ ಶೈಲಿಯಾಗಿದೆ ಅವರು ತಮ್ಮ ೯ ಜನರ ಕುಟುಂಬಕ್ಕೆ ಆರ್ಥಿಕ ಸ್ಥಾಮಭವಾಗಲು ಲಾರಿ ಚಲನೆಯನ್ನು ಶುರು ಮಾಡಿದರು .ಅವರು ಲಾರಿ ಓಡಿಸಲು ರಸ್ತೆಗಿಳಿದಾಗ , ಎಷ್ಟೋ ಕಣ್ಣುಗಳು ಬೆರಗಿನಿಂದ ಅವರನ್ನು ನೋಡುತ್ತದೆ , ಆದರೆ ಅವರ ಊರಿನಲ್ಲಿ ಎಲ್ಲರು ಅವರನ್ನು ಶ್ಲಾಘಿಸುತ್ತಾರೆ .

Credits: Weekend Leader

ಲಾರಿಗಳು ತಬಸ್ಸುಮ್ ರವರಿಗೆ ಹೊಸದೇನಲ್ಲ , ಅವರ ತಂದೆ ಹಾಗು ಅಣ್ಣ ಕೂಡ ಲಾರಿ ಚಾಲಕರು .ಅವರಿಗೆ ಲಾರಿ ಓಡಿಸಲು ಅವಕಾಶ ಸಿಕ್ಕಿದ್ದು ಆಕಸ್ಮಿಕವಾಗಿ . ೨೦೧೩ರಲ್ಲಿ ಒಂದು ದಿನ ಎರಡು ಲಾರಿಯಲ್ಲಿ ಸಾಮಾನನ್ನು ತೆಗೆದುಕೊಂಡು ಹೋಗಬೇಕಾಗಿತ್ತು , ಆದರೆ ಒಂದು ಲಾರಿ ಚಾಲಕ ಆ ದಿನ ಬಂದಿರದ ಕಾರಣ ಇವರ ತಂದೆ ಇವರಿಗೆ ಓಡಿಸಲು ಹೇಳುತ್ತಾರೆ . ಆಗ ಅವರ ಲಾರಿ ಚಾಲನೆಯ ಜೀವನ ಶುರು ಆಗುತ್ತದೆ .೭ ಜನ ಮಕ್ಕಳಲ್ಲಿ ೨ನೆಯವರಯಾದ ತಬಸ್ಸುಮ್ , ತಮ್ಮ ಕುಟುಂಬಕ್ಕೆ ಆರ್ಥಿಕ ಅವಶ್ಯಕತೆ ಇದೆ ಎಂದು ತಿಳಿದು , ಲಾರಿ ಚಲನೆಯನ್ನು ವೃತಿಯಾಗಿ ತೆಗುದುಕೊಳ್ಳುತಾರೆ .

Credits: Weekend Leader

ತನ್ನ ಹುಷಾರಿಲ್ಲದ ಅಮ್ಮ ಹಾಗು ೫ ಜನ ತಂಗಿಯರ ಓದಿನ ಖರ್ಚನ್ನು ಭರಿಸಲು ಸಹಾಯ ಮಾಡಲು ಇವರು ಲಾರಿ ಚಲನೆಯನ್ನು ಶುರು ಮಾಡುತ್ತಾರೆ ರಾತ್ರಿಯಲ್ಲೂ ಚಾಲನೆ ಮಾಡುವ ತಬಸ್ಸುಮ್ ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆಯನ್ನು ಬೇರೆ ಪುರುಷ ಚಾಲಕರಿಂದ ಎದುರಿಸಿಲ್ಲ . ಆದರೂ ಅವರು ತಮ್ಮ ಬಳಿ ಯಾವಾಗಲೂ ಒಂದು ಕೋಲು ಹಾಗು ಚಾಕುವನ್ನು ಇರಿಸಿಕೊಂಡಿರುತ್ತಾರೆ.  ಅವರು ಲಾರಿ ಚಾಲನೆ ಮಾಡುವಾಗ ಎಷ್ಟೋ ಜನ ಅವರನ್ನು ನಿಲ್ಲಿಸಿ ಫೋಟೋ ಹಾಗು ಅವರ ಜೊತೆ ಸೆಲ್ಫಿ ತೆಗುದುಕೊಳ್ಳುತಾರೆ . ಅವರು ಲಾರಿ ಚಾಲನೆ ಮಾತ್ರವಲ್ಲ ಅದರ ರಿಪೈರಿಯನ್ನು ಸಹ ಮಾಡುತ್ತಾರೆ .  ಅವರು ಈಗ ತಿಂಗಳಿಗೆ ೩೦೦೦೦ ದುಡಿಯುತ್ತಾರೆ ಅದನ್ನು ಅವರು ತಂಗಿಯಾರ ಶಿಕ್ಷಣಕ್ಕೆ ಬಳುಸುತ್ತಾರೆ.  ಸ್ತ್ರಿ ಸ್ವಾತಂತ್ರದ ಹಾಗು ಸಮಾನತೆಯ ಪ್ರತೀಕ ಈ ತಬಸ್ಸುಮ್ .