ಪ್ರೀತಿ ಎಲ್ಲಿ ಇರುತ್ತದೆಯೋ ಅಲ್ಲಿ ಐಶ್ವರ್ಯ ಮತ್ತು ಯಶಸ್ಸು ಬರುತ್ತದೆ ಅನ್ನುವುದಕ್ಕೆ ಈ ಸ್ಟೋರಿ ಸಾಕ್ಷಿ..!

0
1674

ಒಂದು ಪುಟ್ಟ ಹಳ್ಳಿ ಮನೆಯಲ್ಲಿ ಒಬ್ಬ ಮಹಿಳೆ ಒಂದು ದಿನ ಮಧ್ಯಾಹ್ನ ತನ್ನ ಮನೆಯ ಬಾಗಿಲ ಬಳಿ ಬಂದು ನಿಂತಿದ್ದಳು ಆಗ ಅಲ್ಲೇ ದಾರಿಯ ಮಧ್ಯದಲ್ಲಿ ಮೂರು ಜನ ಮುದುಕರು ಕೂತಿದ್ದರು ತುಂಬಾನೇ ಬಿಸಿಲಿ ಇತ್ತು. ಈ ಸಮಯದಲ್ಲಿ ಆ ಮೂರು ಜನ ಮುದುಕರನ್ನು ನೋಡಿದ ಆ ಮಹಿಳೆ ಪಾಪ ಅಂದುಕೊಂಡು ಆ ಮೂವರನ್ನು ತನ್ನ ಮನೆಯ ಒಳಗೆ ಬರುವಂತೆ ಕರೆಯುತ್ತಾಳೆ.

ಆಗ ಆ ಮೂವರು ಇಲ್ಲ ನಾವು ಮೂವರು ಒಟ್ಟಿಗೆ ಬರಲು ಸಾಧ್ಯವಿಲ್ಲ ಯಾರಾದರೂ ಒಬ್ಬರು ಮಾತ್ರ ಬರುತ್ತೇವೆ ಅಂತ ಹೇಳುತ್ತಾರೆ. ಆಗ ಆ ಮಹಿಳೆ ಯಾಕೆ ನೀವು ಒಟ್ಟಿಗೆ ಬರಲ್ಲ ಅಂತ ಕೇಳಿದಳು.ಆಗ ಆ ಮುದುಕರು ಹೇಳಿದರು ನಮ್ಮ ಹೆಸರು ಒಬ್ಬ ಐಶ್ವರ್ಯ ಮತೊಬ್ಬ ಯಶಸು ಇನ್ನೊಬ್ಬ ಪ್ರೀತಿ ಈ ಮೂವರಲ್ಲಿ ಯಾರು ನಿಮ್ಮ ಮನೆಯೊಳಗೇ ಬರಬೇಕು ಹೇಳಿ ಅಂತ ಕೇಳಿದರು.

ಆಗ ಆ ಮಹಿಳೆ ಮನೆಯೊಳಗೇ ಹೋಗಿ ತನ್ನ ಗಂಡನ ಹತ್ತಿರ ಈ ವಿಚಾರ ತಿಳಿಸಿದಾಗ ಗಂಡ ಸರಿ ಐಶ್ವರ್ಯ ನಮ್ಮ ಮನೆಯೊಳಗೇ ಬರಲಿ ಅಂತ ಹೇಳುತ್ತಾನೆ ಆಗ ಹೆಂಡತಿ ಬೇಡ ನಮಗೆ ಐಶ್ವರ್ಯ ಇದೆ ಯಶಸ್ಸು ಬೇಕು ಯಶಸ್ಸು ಬರಲಿ ಅಂತ ಹೇಳುತ್ತಾಳೆ.ಆಗ ಇವರು ಒಂದು ಹೆಣ್ಣು ಮಗು ಬಂದು ಅಮ್ಮ ನಮ್ಮ ಮನೆಗೆ ಪ್ರೀತಿ ಬರಲಿ ಯಶಸ್ಸು ಐಶ್ವರ್ಯ ಯಾವುದು ಬೇಡ ಅಂತ ಮಗು ತುಂಬ ಅಳುತ್ತದೆ.

ಆಗ ಸರಿ ಅಂತ ಹೇಳಿ ಆ ಮಹಿಳೆ ಮನೆಯ ಹೊರಗೆ ಬಂದು ಆ ಮುದುಕರಿಗೆ ಹೇಳುತ್ತಳೆ “ನಿಮ್ಮಲ್ಲಿ ಪ್ರೀತಿ ಯಾರು ಅವರು ನಮ್ಮ ಮನೆಯೊಳಗೇ ಬನ್ನಿ” ಅಂತ ಹೇಳುತ್ತಾಳೆ. ಆಗ ಪ್ರೀತಿ ಎಂಬ ಹೆಸರಿನ ಮುದುಕ ಆ ಮನೆಯೊಳಗೇ ಹೋಗುತ್ತಾನೆ. ಆಮೇಲೆ ನಿದಾನವಾಗಿ ಐಶ್ವರ್ಯ ಮತ್ತು ಯಶಸ್ಸು (ಮುದುಕರು) ಕೂಡ ಆ ಮನೆಯೊಳಗೇ ಹೋಗುತ್ತಾರೆ. ಆಗ ಆ ಮಹಿಳೆ ಯಾಕೆ ನೀವು ಒಬ್ಬರೇ ಬರುವುದು ಅಂತ ಹೇಳಿ ಮೂವರು ಒಳಗೆ ಬಂದಿದ್ದಿರಲ್ಲ ಅಂತ ಕೇಳುತ್ತಾಳೆ.

ಆಗ ಆ ಮೂವರು ಪ್ರೀತಿ ಎಲ್ಲಿ ಇರುತ್ತೋ ಅಲ್ಲಿ ಐಶ್ವರ್ಯ ಮತ್ತು ಯಶಸ್ಸು ಕೂಡು ಬರುತ್ತೆ ಅಂತ ಹೇಳುತ್ತಾರೆ. ನೋಡಿ ಅದಕ್ಕೆ ಹೇಳೋದು ಮೊದಲು ಪ್ರೀತಿ ಮಾಡಿ ಆಮೇಲೆ ಐಶ್ವರ್ಯ, ಯಶಸ್ಸು ಎಲ್ಲಾ ನಿಮಗೆ ಸಿಗುತ್ತೆ.