ಜಾತಕದ ರೀತಿ ಪ್ರೇಮವಿವಾಹ ಯಾರಿಗೆ…??

0
1212

ಪ್ರೇಮವಿವಾಹ ವಿಚಾರವನ್ನು ನೋಡುವಾಗ ಪುರುಷನ ಜಾತಕದಲ್ಲಿ ಶುಕ್ರನ ಸ್ಥಾನವನ್ನು ಸ್ತ್ರೀಯ ಜಾತಕದಲ್ಲಿ ಕುಜನ ಸ್ಥಾನವನ್ನು ನೋಡುತ್ತೇವೆ ಮತ್ತು ಪ್ರೀತಿ ಪ್ರೇಮದ ವಿಚಾರಕ್ಕೆ ಲಗ್ನದಿಂದ ಅಂದರೆ ಒಂದನೇ ಸ್ಥಾನದಿಂದ ಪಂಚಮ ಸ್ಥಾನವನ್ನು ಮತ್ತು ವಿವಾಹಕ್ಕೆ ಸಪ್ತಮವನ್ನು ನೋಡಬೇಕು.

ಈ ಕೆಳಗೆ ಅನೇಕ ವಿಚಾರಗಳು ತಿಳಿಸಲಾಗಿದೆ.

* ಪುರುಷನ ಜಾತಕದಲ್ಲಿ ಶುಕ್ರನು ಸ್ತ್ರೀ ಜಾತಕದಲ್ಲಿ ಕುಜನು ಒಂದೇ ರಾಶಿಯಲ್ಲಿ ಅಥವಾ ಒಂದೇ ನವಾಂಶದಲ್ಲಿ ಇದ್ದರೆ ಪ್ರೇಮವಿವಾಹವಾಗುತ್ತದೆ ಯಾವುದೇ ತೊಂದರೆಗಳು ಬರುಹುದಿಲ್ಲ.
* ಶನಿ ಮತ್ತು ಶುಕ್ರಗ್ರಹ ಸಪ್ತಮಾಧಿಪತಿ ಯೊಂದಿಗೆ ಕಲೆತಿದ್ದರೆ ತಾನು ಪ್ರೇಮಿಸಿರುವರೊಂದಿಗೆ ತಂದೆ ತಾಯಿಯನ್ನು ಒಪ್ಪಿಸಿ ಪ್ರೇಮವಿವಾಹವಾಗುತ್ತಾರೆ.


* ಪಂಚಮದಲ್ಲಿ ಉಚ್ಚ ಶುಕ್ರನಿದ್ದರೆ ಹುಡುಗನು ಪ್ರೇಮವಿವಾಹವಾಗುವನು.
* ಸಪ್ತಮದಲ್ಲಿ ಶುಭನಾದ ಶನಿ ಇದ್ದರೆ ಅಥವಾ ದೃಷ್ಠಿಬಿದ್ದರೆ ಗೊತ್ತಿರುವ ಹುಡುಗ ಹುಡುಗಿಯೊಂದಿಗೆ ಪ್ರೇಮವಾಗುವುದು.
* ಪಂಚಮಾಧಿಪತಿ ಮತ್ತು ಕುಜನು ಲಗ್ನದಲ್ಲೆ ಶುಭರಾಗಿದ್ದೆ ಹುಡುಗಿಯು ಪ್ರೇಮವಿವಾಹ ಆಗುವಳು.
* ಪುರುಷನ ಜಾತಕದಲ್ಲಿ ವ್ಯಯದಲ್ಲಿ ಶುಕ್ರನಿದ್ದು ಸ್ತ್ರೀ ಜಾತಕದಲ್ಲಿ ವ್ಯಯದಲ್ಲಿ ಕುಜನಿದ್ದು ಶುಭಗ್ರಹವಾದ ಗುರು ದೃಷ್ಠವಿಲ್ದಿದ್ದಲ್ಲಿ ಪ್ರೇಮವಿವಾಹವಾಗುವುದು.


* ಸ್ತ್ರೀ ಜಾತಕದಲ್ಲಿ ಕುಜಗ್ರಹ ಉಚ್ಚನಾಗಿ ಅಥವಾ ಶುಭನಾಗಿ ಪಂಚಮದಲ್ಲಿದ್ದರೆ ಹುಡುಗಿ ಪ್ರೇಮವಿವಾಹವಾಗುವಳು.
* ಪಂಚಮಭಾವದಲ್ಲಿ ಸಪ್ತಮಾಧಿಪತಿಯು ಇದ್ದರೆ ಪ್ರೇಮವಿವಾಹವಾಗುವರು.
* ಯಾರದೇ ಜಾತಕದಲ್ಲಿ ಶುಕ್ರ ಕುಜರು ಪಂಚಮ ಅಥವಾ ಸಪ್ತಮದಲ್ಲಿ ಜೊತೆ ಇದ್ದರೆ ಪ್ರೇಮವಿವಾಹವಾಗುವರು.
* ಪಂಚಮಾಧಿಪತಿಯೊಂದಿಗೆ ಶುಕ್ರನು ಲಗ್ನದಲ್ಲೆ ಶುಭನಾಗಿದ್ದರೆ ಹುಡುಗನು ಪ್ರೇವಿವಾಹವಾಗುವನು.

ಎನ್.ಶರತ್ ಶಾಸ್ತ್ರಿ
ಶೈವಾಗಮ,ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ
ಸುಣ್ಣದಕೇರಿ  ಮೈಸೂರು
9845371416