ದೇವಾಲಯಗಳಲ್ಲಿ ಮದುವೆ ನಿಷೇಧಿಸಿ ಸರಳ ವಿವಾಹ ಮಾಡಿಕೊಳ್ಳುವವರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಮುಜರಾಯಿ ಇಲಾಖೆ!!

0
649

ಪ್ರೇಮಿಗಳ ಮದುವೆಗೆ ಮನೆಯವರು ವಿರೋಧ ಸಾಮಾನ್ಯ ಹಾಗಂತ ಎಷ್ಟೋ ಜನರು ಮನೆಯವರ ಮಾತು ಕೇಳಿ ಪ್ರೇಮವಿವಾಹಕ್ಕೆ ವಿರಾಮ ಹೇಳುವರು ಕಡಿಮೇನೆ. ಯಾಕೆಂದ್ರೆ ಮನೆಯಲ್ಲಿ ಅನುಮತಿ ಇಲ್ಲದಿದ್ದರು ದೇವಾಲಯಗಳಲ್ಲಿ ಸರಾಗವಾಗಿ ಮದುವೆಯಾಗಬಹುದು ಎಂಬ ದೈರ್ಯದಿಂದ ಹೆಚ್ಚಾನು ಹೆಚ್ಚು ಪ್ರೇಮಿಗಳು ದೇವಾಲಯಗಳ ಮೊರೆಹೋಗುವುದು ಹೆಚ್ಚಾಗುತ್ತಿದೆ. ಇದರಿಂದ ಅಲ್ಲಿನ ಅರ್ಚಕರಿಗೆ ತೊಂದರೆಯಾಗುತ್ತಿದೆ. ಏಕೆಂದರೆ ದೇವಾಲಯಕ್ಕೆ ಮದುವೆಗೆಂದು ಬರುವ ಪ್ರೇಮಿಗಳ ಸರಿಯಾದ ಮಾಹಿತಿ ಇರುವುದಿಲ್ಲ ಅದರಲ್ಲಿ ಕೆಲವೊಬ್ಬರಿಗೆ ಮೊದಲೇ ಮದುವೆಯಾಗಿರುತ್ತೆದೆ, ಈ ವಿಚಾರ ತಿಳಿಯದೆ ಅರ್ಚಕರು ಮದುವೆ ಮಾಡಿಸಿದ್ದರೆ, ಮುಂದೆ ಆಗುವ ಪೋಲಿಸ್ ಕೇಸ್ ಕೋರ್ಟ್ ಅಂತ ಸಾಕ್ಷಿ ಹೇಳಲು ಅರ್ಚಕರು ಅಲೆಬೇಕಾಗುತ್ತೆ. ಇದೆಲ್ಲ ತೊಂದರೆಯಿಂದ ಬೇಸತ ಅರ್ಚಕರೇ ಸ್ವತಃ ಮುಜರಾಯಿಗೆ ಮನವಿ ಮಾಡಿದ್ದು, ಮುಜರಾಯಿ ಇಲಾಖೆ ದೇಗುಲದಲ್ಲಿ ಮದುವೆಯನ್ನು ನಿಷಿದ್ಧ ಮಾಡಿದೆ.

Also read: ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾಂಸಾಹಾರಕ್ಕೆ ನಿಷೇಧ ಹೇರಿದ UP-ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ನಡೆ ನಿಮಗೆ ಒಳ್ಳೇದು ಅನ್ನಿಸುತ್ತಾ??

ಅರ್ಚಕರ ಮನವಿಯಲ್ಲೇನಿದೆ:

ತಂದೆ-ತಾಯಿ ವಿರೋಧ ವ್ಯಕ್ತಪಡಿಸಿ, ಮದುವೆ ಇಷ್ಟವಿಲ್ಲವೆಂದ್ರೆ ಪ್ರೇಮಿಗಳು ದೇವಸ್ಥಾನಕ್ಕೆ ಬಂದು ತಾಳಿ ಕಟ್ಟಿ ಹೋಗುತ್ತಿದ್ದರು. ಇದಕ್ಕೆ ಅರ್ಚಕರು ಒಪ್ಪದಿದ್ದರೆ ಹೆದರಿಸಿ ಬೆದರಿಸಿ ಮದುವೆ ಮಾಡುವಂತೆ ಕಿರಿಕ್ ಮಾಡುತ್ತಿದ್ದಾರೆ ನಂತರ ಹೆತ್ತವರ ಗಲಾಟೆಗಳಿಂದ ಮದುವೆ ಮುರಿದುಕೊಂಡು ಬಿಟ್ಟು ಹೋಗುತ್ತಿದ್ದರು. ಇಂತಹ ಅನೇಕ ಘಟನೆಗಳು ನಡೆಯುತ್ತಿವೆ. ಇದರಿಂದ ನಮಗೆ ತುಂಬಾ ತೊಂದರೆಗಳಾಗುತ್ತಿದೆ. ಹೀಗಾಗಿ ದಯಮಾಡಿ ದೇವಸ್ಥಾನಗಳಲ್ಲಿ ಮದುವೆಗಳನ್ನು ಮುಜರಾಯಿ ಇಲಾಖೆ ನಿಷಿದ್ಧ ಮಾಡಿಲು ಮನವಿ ನೀಡಿದ್ದರು. ಹೀಗಾಗಿ ಸದ್ಯ ಕೆಲ ದೇವಸ್ಥಾನಗಳನ್ನು ಬಿಟ್ಟು ಉಳಿದೆಲ್ಲಾ ದೇವಾಲಯಗಳಲ್ಲಿ ಪ್ರೇಮಿಗಳಿಗೆ ಮದುವೆ ಮಾಡುವುದುನ್ನು ನಿಲ್ಲಿಸಲಾಗಿದೆ.

Also read: ಕರ್ನಾಟಕದ ಈ ಗ್ರಾಮ, ಬಯಲು ಶೌಚಾಲಯವನ್ನು ನಿಷೇಧಿಸಿ ಇಡೀ ದೇಶಕ್ಕೆ ಮಾದರಿಯಾಗಿದೆ, ಮೋದಿಯವರ ಸ್ವಚ್ಛ ಭಾರತಕ್ಕೆ ಮುನ್ನುಡಿ ಬರೆಯುತ್ತಿದೆ

ಇನ್ಮುಂದೆ ದೇವಾಲಯದ ಮದುಗೆ ಏನ್ ಸಾಕ್ಷಿ ಬೇಕು?

ಪತಿ ಅಥವಾ ಪತ್ನಿಗೆ ಹೇಳದೇ ಇನ್ನೊಂದು ವಿವಾಹ, ಕುಟುಂಬಕ್ಕೆ ಮಾಹಿತಿ ನೀಡದೇ ಮದ್ವೆ, ಅಥವಾ ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡಿಕೊಳ್ಳುವುದು ಹೀಗೆ ಅನೇಕ ಪ್ರಕರಣ ನಡೆಯುತ್ತಿದ್ದು, ಕೇಸ್‍ಗಳಾದರೆ ಅರ್ಚಕರೇ ಸಾಕ್ಷಿಗಳಾಗಬೇಕಾಗುತ್ತೆ ಎಂಬ ಹಿನ್ನೆಲೆಯಲ್ಲಿ ಮದುವೆ ಮಾಡಿಕೊಳ್ಳುವ ಮೊದಲು ಕಮಿಷನ್ ಗೆ ಪತ್ರ ಬರೆದು ಎರಡೂ ಮನೆಯವರು ಒಪ್ಪಿಕೊಂಡ ನಂತರ ಕಮಿಷನರ್ ಆಯಾ ಪ್ರದೇಶದ ದೇವಸ್ಥಾನದಲ್ಲಿ ಮದುವೆ ಮಾಡಿಕೊಡಲು ಅನುಮತಿ ನೀಡಬೇಕು. ಮತ್ತು ದೇಗುಲಕ್ಕೆ ಹೊಂದಿಕೊಂಡ ಕಲ್ಯಾಣ ಮಂಟಪದಲ್ಲಿ ಮದುವೆಯಾಗಬೇಕು ಎಂದರೂ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಿ ಮೂವತ್ತು ದಿನಗಳಾಗಿರಬೇಕು. ನಂತರವಷ್ಟೇ ಮದುವೆಗೆ ಅನುಮತಿ ನೀಡಲಾಗುತ್ತಿದೆ.

Also read: ತಿರುಮಲದಲ್ಲಿ ಕಲ್ಲಂಗಡಿ ಹಣ್ಣು ನಿಷೇಧ ಏಕೆ ಅಂತೀರಾ ಇಲ್ಲಿ ನೋಡಿ…!

ಮದುವೆ ಅನುಮತಿ ಇದ್ದ ಮುಜರಾಯಿ ದೇವಾಲಯಗಳು:

ಹಲಸೂರು ಸುಬ್ರಮಣ್ಯ ದೇಗುಲ, ಬೆಂಗಳೂರು, ಬನಶಂಕರಿ ದೇಗುಲ ಬೆಂಗಳೂರು, ಕುಕ್ಕೆ ಸುಬ್ರಮಣ್ಯ ದೇಗುಲ, ಗವಿಗಂಗಾಧರ ದೇಗುಲ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನ, ನಿಮಿಷಾಂಬಾ ದೇಗುಲ ಮಂಡ್ಯ, ಕೊಲ್ಲೂರು ಮೂಕಾಂಬಿಕ ದೇಗುಲ.