ಪ್ರೀತಿಗೆ ಮುಪ್ಪಿನ ಭಯವಿಲ್ಲ ದಾಂಪತ್ಯದ ಜೀವನದಲ್ಲಿ ಪ್ರೀತಿಯ ಪಯಣ ಹೇಗಿದೆ ನೋಡಿ..!

0
976

ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ. ಎಂಭತ್ತು ವರುಷದ ಮುದುಕಿ ತೊಂಭತ್ತರ ಗಂಡನಿಗೆ ಹೇಳುತ್ತಾಳೆ :

” ಈ ದಾಂಪತ್ಯಯಾನದಲಿ ಎನ್ನ ಕೈ ಪಿಡಿದವರ ಹಿಡಿದ ಕೈ ಬಿಡದವರು ನೀವಲ್ಲವೇ ನನ್ನ ದೊರೆ ನೀವಲ್ಲವೇ !
ಹಬ್ಬಗಳು ಬಂದಾಗ ಹೊಸಪಂಚೆ ನಿಮಗಿರಲಿ, ಇರದಿರಲಿ ನಾ ಹಳೆ ಸೀರೆ ಉಟ್ಟಾಗ ಬಿಟ್ಟುಬಿಡು ಎಂದವರು ಸಾಕುಬಿಡು ಎಂದವರು ಹೊಸಸೀರೆ ಕೊಟ್ಟವರು, ಮಲ್ಲಿಗೆಯನಿತ್ತವರು, ನೀವಲ್ಲವೇ ನನ್ನ ದೊರೆ ನೀವಲ್ಲವೇ ?

ಮತ್ತೆ ನಾ ತವರೂರು ಹೊರಟಾಗ ಬಾಗಿಲಬಳಿ ಬಂದು ಬೇಗ ಬಾ ಎಂದವರು ನೀವಲ್ಲವೇ ನನ್ನ ದೊರೆ ನೀವಲ್ಲವೇ ಮತ್ತೆ ಫೋನುಗಳ ಮಾಡುತ್ತ ,ಮತ್ತೆ ಫೋನುಗಳ ಮಾಡುತ್ತ ,ಮನೆಯೊಳಗೆ ನೀನಿಲ್ಲ ಬಳೆಗಳ ಸದ್ದಿಲ್ಲ , ಬಾಯಿಗೆ ರುಚಿಯಿಲ್ಲ ಬೇಗನೆ ಬರುವೆಯಲ್ಲ ಎಂದವರು ನೀವಲ್ಲವೇ, ನನ್ನ ದೊರೆ ನೀವಲ್ಲವೇ ?

ಅದಕ್ಕೆ ಗಂಡ ಹೇಳ್ತಾನೆ…” ಬೇರಿಲ್ಲದೆ ಮರವೆಲ್ಲಿದೆ, ಮರವಿಲ್ಲದೆ ಹೂವೆಲ್ಲಿದೆ ,ಹೂವಿಲ್ಲದೆ ಹಣ್ಣೆಲ್ಲಿದೆ ನೀನಿಲ್ಲದ ಮನೆ ಯಾರಿಗೆ ಬೇಕಾಗಿದೆ ?

” ಮನೆಯೊಳಗೆ ಬಂದವಳೇ , ಮನೆಯಾಕೆ ಆದವಳೇ,ಮನದೊಳಗೆ ನಿಂದವಳೇ, ನೀನಲ್ಲವೇ ನನ್ನರಸಿ ನೀನಲ್ಲವೇ ?
ಬಡತನವೊ ,ಸಿರಿತನವೊ ,ಕಷ್ಟನಷ್ಟಗಳಲಿ ಎನ್ನ ಜೊತೆ ಬಂದವಳು, ಜೊತೆಯಾಗಿ ನಿಂದವಳು ನೀನಲ್ಲವೇ ನನ್ನರಸಿ ನೀನಲ್ಲವೇ.?

ಮತ್ತೆ ಕೊನೆಗೆ ಆ ಮುದುಕ ಒಂದು ಮಾತು ಹೇಳುತ್ತಾನೆ.

ವೃದ್ಧಾಪ್ಯ ಬಂದಾಗ,ಆರೋಗ್ಯ ಹೋದಾಗ ,ಆದಾಯ ಇರದಾಗ ,ಹಣವೆಲ್ಲ ಸವೆದಾಗ‌ ,ಬಂಧುಗಳು ಬರದಾಗ ,ಮಕ್ಕಳು ಮರೆತಾಗ ,ನಾ ಒಳಗೊಳಗೆ ಅತ್ತಾಗ ,ಬಳಿ ಬಂದು ನಿಂದವಳು ,ಮರುಗದಿರಿ ಅಂದವಳು ,ಕಣ್ಣೀರ ತಡೆದವಳು ,ಯಾರಿರಲಿ, ಇರದಿರಲಿ ,ನಾನಿಲ್ಲವೇ ನಿಮ್ಮ ಜೊತೆ , ಎಂದವಳು ,ನೀನಲ್ಲವೇ ನನ್ನರಸಿ ನೀನಲ್ಲವೇ.?

ವಾವ್ ಏನ್ ಪ್ರೀತಿ ರೀ ಈ ವಯಸ್ಸಿನಲ್ಲೂ ಅದುಕ್ಕೆ ಹೇಳೋದು ಪ್ರೀತಿಗೆ ಯಾವುದೇ ವಯಸು ಮುಖ್ಯವಲ್ಲ ಮನಸಿನಲ್ಲಿ ಇರೋ ಪ್ರೀತಿ ಮುಖ್ಯ ಅಂತ..
ಸಂಗ್ರಹ ಮಾಹಿತಿ.