ಮಲಗಿದ ಗಂಡ, ಹೆಂಡತಿ, ಮಗುವನ್ನು ಕೊಂದು ಶವದ ಜೊತೆ 3 ಗಂಟೆ ಲೈಂಗಿಕ ಕ್ರಿಯೆ ನಡೆಸಿ ಕೃತ್ಯವನ್ನು ಮೊಬೈಲ್-ನಲ್ಲಿ ವೀಡಿಯೋ ಮಾಡಿಕೊಂಡ ಪಾಪಿ.!

0
887

ಕೆಲವು ಹೇಸಿಗೆಯ ವ್ಯಕ್ತಿಗಳು ಮಾನವ ಕುಲಕ್ಕೆ ಕಳಂಕ ತರುತ್ತಿರುವುದು ದಿನನಿತ್ಯವೂ ನಡೆಯುತ್ತಾನೆ ಇದೆ. ಮೊನ್ನೆಯಷ್ಟೇ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಇಡಿ ದೇಶವನ್ನೇ ಬೆಚ್ಚಿಬಿಳಿಸಿದ್ದು, ಅಂತಹದೇ ಒಂದು ಘಟನೆ ನಡೆದಿದ್ದು, ಪಾಪಿ ವಿಕೃತಕಾಮಿಯೋರ್ವ ಮನೆಯೊಂದಕ್ಕೆ ನುಗ್ಗಿ ದಂಪತಿಯನ್ನು ಮತ್ತು ಮಗುವನ್ನು ಕೊಲೆ ಮಾಡಿ ಮಹಿಳೆ ಶವದ ಮೇಲೆ ಅತ್ಯಾಚಾರವೆಸೆಗಿದ್ದಲ್ಲದೆ, ಅವರ 10 ವರ್ಷದ ಮಗಳನ್ನು ರೇಪ್‍ಗೈದ ವೀಡಿಯೋ ಮಾಡಿಕೊಂಡು ಪರಾರಿಯಾಗಿದ್ದಾನೆ.

Also read: ಆತ್ಮ ರಕ್ಷಣೆಗಾಗಿ ಇನ್ಮುಂದೆ ಮಹಿಳೆಯರು ಬೆಂಗಳೂರಿನ ಮೆಟ್ರೋ ನಿಲ್ದಾಣದೊಳಗೆ ಪೆಪ್ಪರ್​ ಸ್ಪ್ರೇ; ಕೊಂಡೊಯ್ಯಬಹುದು.!

ಹೌದು ಭಯಾನಕ ಪ್ರಕರಣ ಒಂದು ಉತ್ತರ ಪ್ರದೇಶದ ಅಜಮ್‍ಗಢ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ನಾಸಿರುದ್ಧೀನ್(38) ಎಂದು ಗುರುತಿಸಲಾಗಿದೆ. ಈತ ನವೆಂಬರ್ 24ರಂದು ಮುಬಾರಕ್‍ಪುರ ಪ್ರದೇಶದಲ್ಲಿನ ಮನೆಯೊಂದಕ್ಕೆ ನುಗ್ಗಿ ದಂಪತಿ ಹಾಗೂ ಅವರ 4 ತಿಂಗಳ ಮಗನನ್ನು ಕಲ್ಲಿಂದ ಜಜ್ಜಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಅಲ್ಲದೆ ದಂಪತಿಯ 10 ವರ್ಷದ ಮಗಳ ಮೇಲೆ ರೇಪ್ ಮಾಡಿ, ಮಹಿಳೆಯ ಮೃತದೇಹದ ಮೇಲೆ 3 ಗಂಟೆ ಸತತವಾಗಿ ಅತ್ಯಾಚಾರಗೈದು, ದಂಪತಿಯ ಇನ್ನಿಬ್ಬರು ಮಕ್ಕಳನ್ನು ಕೊಲ್ಲಲು ಯತ್ನಿಸಿದ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದನು.

Also read: ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮಾಡಿ ಕೊಂದ ರೀತಿಯಲ್ಲಿ ನಮ್ಮ ಮಕ್ಕಳನ್ನು ಕೊಲ್ಲಿ; ಆರೋಪಿಗಳ ಕುಟುಂಬಸ್ಥರ ಹೇಳಿಕೆಗೆ ಭಾರಿ ಮೆಚ್ಚುಗೆ.!

ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ನ. 24ರಂದು ರಾತ್ರಿ ದಂಪತಿಯ ಮನೆಗೆ ತೆರಳಿದ್ದ ನಾಸಿರುದ್ದೀನ್ ಕೊಲೆ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಂಡಿದ್ದ. ಎಲ್ಲರೂ ಮಲಗಿದ್ದರಿಂದ ಸದ್ದಾಗದಂತೆ ಮನೆಯೊಳಗೆ ನುಸುಳಿದ್ದ. ಆಗ 30 ವರ್ಷದ ಮಹಿಳೆ, ಆಕೆಯ 35 ವರ್ಷದ ಗಂಡ, ಮತ್ತು ಮಗುವನ್ನು ಕೊಂದಿದ್ದ. ಮಹಿಳೆಯ ಶವದ ಜೊತೆ ಲೈಂಗಿಕ ಕ್ರಿಯೆ ನಡೆಸಿ ವಾಪಾಸ್ ಹೊರಡುವಾಗ ಪಕ್ಕದ ರೂಮಿನಲ್ಲಿದ್ದ ದಂಪತಿಯ 10 ವರ್ಷದ ಮಗಳು ಕಣ್ಣಿಗೆ ಬಿದ್ದಿದ್ದರಿಂದ ಆಕೆಯ ಮೇಲೂ ಅತ್ಯಾಚಾರವೆಸಗಿ ಕಲ್ಲಿನಿಂದ ಹೊಡೆದಿದ್ದ. ನಂತರ ಆಕೆಯ 4 ವರ್ಷದ ತಮ್ಮನ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದ.

ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಅಜಂಗರ್ ಎಸ್​ಪಿ ತ್ರಿವೇಣಿ ಸಿಂಗ್, ‘ಮಹಿಳೆಯ ಮೃತದೇಹದೊಂದಿಗೆ 3 ಗಂಟೆಗಳ ಕಾಲ ಲೈಂಗಿಕ ಕ್ರಿಯೆ ನಡೆಸಿದ್ದ ನಾಸಿರುದ್ದೀನ್ ತನ್ನ ಮೊಬೈಲ್​ನಲ್ಲಿ ಅದರ ವಿಡಿಯೋ ಮಾಡಿಕೊಂಡಿದ್ದ. ಮನೆಗೆ ಹೋದ ನಂತರ ಆ ವಿಡಿಯೋವನ್ನು ತನ್ನ ಅತ್ತಿಗೆಗೆ ತೋರಿಸಿದ್ದ. ಆ ವಿಡಿಯೋ ನೋಡಿದ ಆತನ ಅತ್ತಿಗೆ ಆಘಾತಗೊಂಡಿದ್ದಳು. ಈ ಕೃತ್ಯ ಎಸಗುವ ಮೊದಲು ಡ್ರಗ್ಸ್​ ಸೇವಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಹಾಗೇ, ತಾನು ಅತ್ಯಾಚಾರ ನಡೆಸಿದ ಬಗ್ಗೆ ಯಾರಿಗೂ ಅನುಮಾನ ಬರಬಾರದು ಎಂದು ಕಾಂಡೋಮ್​ಗಳನ್ನು ತೆಗೆದುಕೊಂಡು ಹೋಗಿದ್ದ.

ಜೊತೆಗೆ ಈ ಕೃತ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿದು, ನಾನು ಇಲ್ಲಿಯವರೆಗೆ ಎಲ್ಲರನ್ನೂ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದೇ ಕೊಲೆ ಮಾಡಿದ್ದು ಎನ್ನುವ ಭಯಾನಕ ವಿಚಾರವನ್ನು ಪೊಲೀಸರಿಗೆ ಆರೋಪಿ ಹೇಳಿದ್ದಾನೆ. ಆರೋಪಿಯ ಈ ವಿಕೃತ ಮನಸ್ಥಿತಿ ನೋಡಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ. ಅದಕ್ಕಾಗಿ ಮಲಗುವ ಮುನ್ನ ಮನೆಯ ಎಲ್ಲ ಬಾಗಿಲು ಕಿಡಕಿಗಳನ್ನು ಸರಿಯಾದ ರೀತಿಯಲ್ಲಿ ಭದ್ರವಾಗಿಸುವುದು ಒಳ್ಳೆಯದು.