ಇ-ಪೇಮೆಂಟ್ ಲಕ್ಕಿ ಡ್ರಾ: 3 ವಾರದಲ್ಲಿ ಲಕ್ಷಾಧೀಶರಾದ 45 ಮಂದಿ

0
962
  1. 21 ದಿನದಲ್ಲಿ 45 ಮಂದಿ ಲಕ್ಷಾಧೀಶರರು
  2. ವಾರಕ್ಕೆ 15 ಮಂದಿ ಅದೃಷ್ಟಶಾಲಿಗಳ ಆಯ್ಕೆ
  3. ಏಪ್ರಿಲ್ 14ರಂದು ಮೆಗಾ ಡ್ರಾ ಬಹುಮಾನ
  4. 614 ಮಂದಿಗೆ ತಲಾ 50,000 ರೂ. ಬಹುಮಾನ
  5. 6500 ಮಂದಿಗೆ ತಲಾ 10,000ರೂ. ಬಹುಮಾನ
  6. 15 ಸಾವಿರ ಮಂದಿ ತಲಾ 1000 ರೂ. ಬಹುಮಾನ

ನೋಟ್‍ ಬ್ಯಾನ್ ನಂತರ ದೇಶದಲ್ಲಿ ಡಿಜಿಟಲ್‍ ಪೇಮೆಂಟ್‍ ಉತ್ತೇಜಿಸುವ ಸಲುವಾಗಿ ಕೇಂದ್ರ ಸರಕಾರ ಪ್ರಾರಂಭಿಸಿದ ಲಕ್ಕಿ ಡ್ರಾದಿಂದ ಮೂರು ವಾರಗಳಲ್ಲಿ 45 ಮಂದಿ ಲಕ್ಷಾಧೀಶರರಾಗಿದ್ದಾರೆ.

ಹೌದು, ಈ ವಿಷಯವನ್ನು ಕೇಂದ್ರ ಸರಕಾರದ ಜಾರಿಗೊಳಿಸಿದ ಇ-ಪೇಮೆಂಟ್‍ ಉಸ್ತುವಾರಿ ಹೊತ್ತಿರುವ ಆರ್‍ ಬಿಐನ ರಾಷ್ಟ್ರೀಯ ಪೇಮೆಂಟ್‍ ಕಾರ್ಪೊರೇಷನ್‍ ಆಫ್‍ ಇಂಡಿಯಾ (ಎನ್‍ಪಿಸಿಐ) ಈ ವಿಷಯವನ್ನು ಪ್ರಕಟಿಸಿದೆ.

ನೋಟ್‍ ಬ್ಯಾನ್ ನಂತರ ದೇಶದಲ್ಲಿ ಡಿಜಿಟಲ್‍ ಪೇಮೆಂಟ್‍ ಉತ್ತೇಜಿಸುವ ಸಲುವಾಗಿ ಕೇಂದ್ರ ಸರಕಾರ ಪ್ರಾರಂಭಿಸಿದ ಲಕ್ಕಿ ಡ್ರಾದಿಂದ ಮೂರು ವಾರಗಳಲ್ಲಿ 45 ಮಂದಿ ಲಕ್ಷಾಧೀಶರರಾಗಿದ್ದಾರೆ.

ಡಿಸೆಂಬರ್‍ 25ರಿಂದ ಲಕ್ಕಿ ಡ್ರಾ ಯೋಜನೆ ಜಾರಿಗೆ ಬಂದಿದ್ದು, ಇದುವರೆಗೂ ವಾರಕ್ಕೆ ಕನಿಷ್ಠ 15 ಜನ 1,00,000 ರೂ. ಬಹುಮಾನ ಪಡೆಯುತ್ತಿದ್ದಾರೆ. 614 ಮಂದಿ (500 ವ್ಯಾಪಾರಿಗಳು ಮತ್ತು 114 ಗ್ರಾಹಕರು) ತಲಾ 50,000 ರೂ., 6500 ಮಂದಿ ತಲಾ 10,000ರೂ., 15 ಸಾವಿರ ಮಂದಿ ತಲಾ 1000 ರೂ. ಬಹುಮಾನ ಪಡೆದಿದ್ದಾರೆ.

ಬಹುಮಾನ ವಿಜೇತರ ಖಾತೆಗಳಿಗೆ ಕೂಡಲೇ ಈ ಮೊತ್ತ ವರ್ಗಾವಣೆ ಆಗುತ್ತಿದೆ. ಹಣ ವರ್ಗಾವಣೆ ಆಧಾರದ ಮೇಲೆ ಕಂಪ್ಯೂಟರ್ ಒಟ್ಟಾರೆಯಾಗಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡುತ್ತದೆ ಮತ್ತು ಇಡೀ ಪ್ರಕ್ರಿಯೆ ವೀಡೀಯೊ ಮೂಲಕ ಸಂಗ್ರಹಿಸಲಾಗುತ್ತಿದೆ. ಏಪ್ರಿಲ್ 14ರಂದು ಮೇಗಾ ಬಹುಮಾನಗಳಾದ 1 ಕೊಟಿ, 50 ಲಕ್ಷ ಮತ್ತು 25 ಲಕ್ಷ ರೂ. ಮೊತ್ತದ ಡ್ರಾ ನಡೆಯಲಿದೆ ಎಂದು ಎನ್‍ಪಿಸಿಐ ಮುಖ್ಯಸ್ಥ ಎಸ್‍.ಕೆ. ಗುಪ್ತ ತಿಳಿಸಿದ್ದಾರೆ.

ನವೆಂಬರ್ 9, 2016ರಿಂದ ಏಪ್ರಿಲ್ 14, 2017ರವರೆಗೆ ರುಪೇ ಕಾರ್ಡ್‍, ಎನ್‍ಪಿಸಿಐನ ಭೀಮ್‍ ಆಪ್‍, ಯುಎಸ್‍ಎಸ್‍ಡಿ ಆಧಾರಿತ *99# ಬಳಸಿ ಆಧಾರ್‍ ಸಂಖ್ಯೆಯೊಂದಿಗೆ ಹಣ ವರ್ಗಾವಣೆ ಮಾಡಿದವರು ಈ ಲಕ್ಕಿ ಡ್ರಾಗೆ ಅರ್ಹರಾಗಿರುತ್ತಾರೆ. ಮೆಗಾ ಡ್ರಾ ನಡೆಯುವವರೆಗೂ ಪ್ರತಿದಿನ ಹಾಗೂ ವಾರಕ್ಕೊಮ್ಮೆ ಕೂಡ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಗುಪ್ತಾ ವಿವರಿಸಿದರು.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳು ಡಿಜಿಟಲ್‍ ಪೇಮೆಂಟ್‍ ಬಳಕೆ ಹೆಚ್ಚಾಗಿದೆ.