ಇಂದು ಕೇತುಗ್ರಸ್ತ ಸಂಪೂರ್ಣ ಚಂದ್ರಗ್ರಹಣವಿದ್ದು ..! ಈ ದಿನದಂದು ಈ ಕೆಳಗಿನ ನಿಯಮಗಳನ್ನು ಪಾಲಿಸದಿದ್ದರೆ ನಿಮಗೆ ಗ್ರಹಣ ಹಿಡಿಯುತ್ತದೆ..!

0
385

ಈ ವರ್ಷ ಶ್ರೀ ವಿಕಾರಿ ನಾಮ ಸಂವತ್ಸರದ ಆಷಾಡ ಶುಕ್ಲ ಪೂರ್ಣಿಮಾ 16-07-2019 ಮಂಗಳವಾರ ಉತ್ತರಾಷಾಢ ನಕ್ಷತ್ರದಲ್ಲಿ, ಧನಸ್ಸು ಹಾಗೂ ಮಕರ ರಾಶಿಯಲ್ಲಿ, ಮೇಷ, ವೃಷಭ ಮತ್ತು ಮಿಥುನ ಲಗ್ನಗಳಲ್ಲಿ , ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸುತ್ತದೆ. ಇಂದು ಸೂರ್ಯ, ಭೂಮಿ ಮತ್ತು ಚಂದ್ರ, ಈ ಮೂರೂ ಕಾಯಗಳು ಒಂದೇ ರೇಖೆಯ ಮೇಲೆ ಇರುತ್ತವೆ.

ಗ್ರಹಣವು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.

Also read: ಕೇತುಗ್ರಸ್ತ ಚಂದ್ರಗ್ರಹಣ ದಿಂದ ಯಾವ ನಕ್ಷತ್ರ-ರಾಶಿಗಳಿಗೆ ಪ್ರಭಾವ, ಯಾವ ಮಂತ್ರ ಪಠಿಸಬೇಕು?? ಇದರ ಸಂಪೂರ್ಣ ಮಾಹಿತಿ!!

ಗ್ರಹಣದ ಅವಧಿ: 16/07/2019 – 17/07/2019

ಗ್ರಹಣ ಸ್ಪರ್ಶ ಕಾಲ : ಮಧ್ಯ ರಾತ್ರಿ 01-30 am

ಗ್ರಹಣ ಮಧ್ಯ ಕಾಲ : ಮುಂಜಾನೆ 03-00 am

ಗ್ರಹಣ ಮೋಕ್ಷ ಕಾಲ : ಮುಂಜಾನೆ 04-30 am

ಗ್ರಹಣದ ದಿನ ಏನು ಮಾಡಬೇಕು?

ಗ್ರಹಣದ ಆಚರಣೆ ಶಾಸ್ತ್ರದ ವಚನ, ಎಂದರೆ ಭಗವಂತನ ಆದೇಶ. ಪರಮಾತ್ಮ ನಮ್ಮ ಬದುಕಿಗೆ ಹಾಕಿದ ಸಂವಿಧಾನ ಅದು. ಅವಶ್ಯವಾಗಿ ಆಚರಣೆ ಮಾಡಲೇಬೇಕು. ಗ್ರಹಣ ಕಾಲವನ್ನು ಸೂತಕ ಸಮಯ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಆ ಸಮಯ ಬಹಳ ಅಶುಭ ಕಾಲವಾಗಿರುತ್ತದೆ.

ಗ್ರಹಣದ ಆರಂಭ ಅಂತ್ಯಗಳಲ್ಲಿ ಸ್ನಾನವನ್ನು ಮಾಡಲೇಬೇಕು.

ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ. ‌ ‌

ಚಂದ್ರ ಗ್ರಹಣದ ಸೂತಕ ವು ಗ್ರಹಣ ಆರಂಭದ ಒಂಬತ್ತು ಗಂಟೆಗಳ ಮೊದಲು ಆರಂಭವಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನದ ನಂತರ ಸೂತಕ ಮುಕ್ತಾಯವಾಗುತ್ತದೆ.

ಗ್ರಹಣ ಆರಂಭಕ್ಕೂ ಮುನ್ನ ಒಂದು ಸಾರಿ ಸ್ನಾನ ಮಾಡಬೇಕು, ನಂತರ ಗ್ರಹಣ ಬಿಟ್ಟ ಮೇಲೆ ಇನ್ನೊಂದು ಸಾರಿ ಸ್ನಾನ ಮಾಡಬೇಕು. ಗ್ರಹಣದ ಎರಡೂ ಸ್ನಾನಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.

ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ.

ಗ್ರಹಣ ಕಾಲದಲ್ಲಿ ಆಹಾರ ಸೇವಿಸುವುದು ನಿಷಿದ್ಧ.

ದೇವಾಲಯ ಅಥವಾ ಪೂಜಾ ಸ್ಥಳಗಳಿಗೆ ಪ್ರವೇಶ ಹಾಗೂ ದೇವರ ಮೂರ್ತಿಗಳ ಸ್ಪರ್ಶವನ್ನು ಮಾಡಬಾರದು. ಕೆಲವು ಕಡೆ ಮನೆಯ ಪೀಠದಲ್ಲಿರುವ ದೇವರನ್ನು ನೀರಿನಲ್ಲಿ ಮುಳುಗಿಸಿಡುವ ಸಂಪ್ರದಾಯವೂ ಇದೆ. ಇಲ್ಲಾ ಗ್ರಹಣ ಹಿಡಿದಲ್ಲಿಂದ ಬಿಡುವವರೆಗೆ ದೇವರಿಗೆ ನಿರಂತರ ಅಭಿಷೇಕ ಪೂಜೆ ಮಾಡಲಾಗಿತ್ತದೆ. ‌

Also read: ನಾಳೆ ಇರುವ ಚಂದ್ರ ಗ್ರಹಣದಿಂದ ನಿಮ್ಮ ರಾಶಿಯನುಸಾರ ಯಾವ ಯಾವ ಯೋಗವಿದೆಯೆಂದು ತಿಳಿದುಕೊಳ್ಳಿ!!

ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು. ‌

ಗ್ರಹಣ ಕಾಲದಲ್ಲಿ ಲೈಂಗಿಕ ಸಂಪರ್ಕ ಯಾವುದೇ ಕಾರಣಕ್ಕೂ ಮಾಡಬಾರದು ಹಾಗೂ ಅಲಂಕಾರ ಮಾಡಿಕೊಳ್ಳಬಾರದು. ‌ ‌

“ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುಸೂತಕೇ” ಎಲ್ಲಾ ವರ್ಣದವರೂ ಗ್ರಹಣ ಕಾಲದಲ್ಲಿ ಮೈಲಿಗೆಯನ್ನು ಆಚರಿಸಬೇಕು. ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಗೋಮೂತ್ರವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬೇಕು. ‌ ‌ ‌

ಜನನ ಶೌಚವಿರುವವರು, ಮೃತ ಶೌಚವಿರುವವರು ಮತ್ತು ರಜಸ್ವಲೆಯಾದವರೂ ಸಹ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇಬೇಕು. ಆದರೆ, ಅವರು ಜಪ ಪಾರಾಯಣಗಳನ್ನು ಮಾಡಬಾರದು.

Also read: ಲಲಿತ ಸಹಸ್ರನಾಮದ ಮಹತ್ವ ಹಾಗು ಪ್ರಾಮುಖ್ಯತೆ ತಿಳಿದು ಮಾತೆ ಶ್ರೀಲಲಿತಾಂಬಿಕೆಯ ಕೃಪೆಗೆ ಪಾತ್ರರಾಗಿ!!

ಗ್ರಹಣ ಆರಂಭದಿಂದ ಅಂತ್ಯದ ಕಾಲದವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು. ಹೋಮ, ಶ್ರಾದ್ಧ, ಪಾರಾಯಣ, ದಾನಗಳನ್ನು ಮಾಡಬೇಕು. ‌ ‌ ‌

ದಾನ :- ಶ್ವೇತ ವರ್ಣದ ವಸ್ತ್ರದೊಂದಿಗೆ ಅಕ್ಕಿ ಹಾಗೂ ಚಿತ್ರ ವರ್ಣದ ವಸ್ತ್ರದೊಂದಿಗೆ ಹುರುಳಿ – ಇವುಗಳನ್ನು ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು.

ಈ ದಿನ ಗ್ರಹಣ ಮಧ್ಯಕಾಲಾನಂತರ ಅಂದರೆ ರಾತ್ರಿ 03-00 ಗಂಟೆಯ ನಂತರ ಗ್ರಹಣ ಮೋಕ್ಷ ಕಾಲಕ್ಕೆ ಮುಂಚೆ ತರ್ಪಣ ಮಾಡುವುದು.

ದಿನಾಂಕ : 16-07-2019 ಮಂಗಳವಾರ ನಡೆಸತಕ್ಕ ಆಷಾಢ ಶುಕ್ಲ ಪೌರ್ಣಿಮೆ ಶ್ರಾದ್ಧವನ್ನು ಮಾರನೇ ದಿನ 17-07-2019 ಬುಧವಾರ ನಡೆಸುವುದು.