ಕೇತುಗ್ರಸ್ತ ಚಂದ್ರಗ್ರಹಣ ದಿಂದ ಯಾವ ನಕ್ಷತ್ರ-ರಾಶಿಗಳಿಗೆ ಪ್ರಭಾವ, ಯಾವ ಮಂತ್ರ ಪಠಿಸಬೇಕು?? ಇದರ ಸಂಪೂರ್ಣ ಮಾಹಿತಿ!!

0
830

ಹೌದು ಇಂದು ರಾತ್ರಿ ಮಧ್ಯ ರಾತ್ರಿ 01-30 am ಮುಂಜಾನೆ 04-30 amರವರೆಗೆ ಕೇತುಗ್ರಸ್ತ ಸಂಪೂರ್ಣ ಚಂದ್ರಗ್ರಹಣ ನೆಡೆಯಲಿದೆ. ಈ ಗ್ರಹಣವು ಭಾರತ ದೇಶದಲ್ಲಿ ಕಾಣಿಸಿಕೊಳ್ಳಲಿದೆ. ಶ್ರೀ ವಿಕಾರಿ ನಾಮ ಸಂವತ್ಸರದ ಆಷಾಡ ಶುಕ್ಲ ಪೂರ್ಣಿಮಾ 16-07-2019 ಮಂಗಳವಾರ ಉತ್ತರಾಷಾಢ ನಕ್ಷತ್ರದಲ್ಲಿ, ಧನಸ್ಸು ಹಾಗೂ ಮಕರ ರಾಶಿಯಲ್ಲಿ, ಮೇಷ, ವೃಷಭ ಮತ್ತು ಮಿಥುನ ಲಗ್ನಗಳಲ್ಲಿ , ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸುತ್ತದೆ.

Also read: ನಾಳೆ ಇರುವ ಚಂದ್ರ ಗ್ರಹಣದಿಂದ ನಿಮ್ಮ ರಾಶಿಯನುಸಾರ ಯಾವ ಯಾವ ಯೋಗವಿದೆಯೆಂದು ತಿಳಿದುಕೊಳ್ಳಿ!!

ವಿಜ್ಞಾನದ ಪ್ರಕಾರ ಇದು ಒಂದು ಪ್ರಕೃತಿ ವಿಸ್ಮಯವಷ್ಟೇ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣವು ಮಾನವರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಚಂದ್ರಗ್ರಹಣದ ವೇಲೆ ನಡೆಯುವ ಕ್ರಿಯೆಗಳಿಂದ ಮಾನವರ ರಾಶಿಗಳ ಮೇಲೆ ಕೂಡ ಪರಿಣಾಮ ಬೀರುತ್ತವೆ. ಅದೇ ರೀತಿ ಈ ಗ್ರಹಣದಿಂದ ಕೆಲವು ರಾಶಿಗೆ ಶುಭ ಫಲ ದೊರೆಯುವುದು. ಇನ್ನು ಕೆಲವು ರಾಶಿಗೆ ಆಶುಭವಾಗುವುದು. ಇದರ ಫಲ ಗ್ರಹಣದ ದಿನ ಅಥವಾ ತಕ್ಷಣವೇ ಅನುಭವಕ್ಕೆ ಬರುವುದಿಲ್ಲ. ಎರಡು, ಮೂರು ತಿಂಗಳ ನಂತರ ಅನುಭವಕ್ಕೆ ಬರುವುದು. ಭಯ, ನಡುಕ ಹುಟ್ಟಿಸುವಂತಹದ್ದು ರಾಹು. ಹಾಗಾಗಿ ತೊಂದರೆ ಹೆಚ್ಚು.

ಈ ಗ್ರಹಣವು ಯಾವ ಯಾವ ರಾಶಿಯವರ ಮೇಲೆ ಗ್ರಹಣದ ಪರಿಣಾಮ ಹೇಗಿರುತ್ತೆ ಅಂತ ತಿಳಿಯೋಣ ಬನ್ನಿ:

ಕುಂಭ, ಮೀನ, ಕರ್ಕ, ತುಲಾ ಈ ರಾಶಿಗಳು ಚಂದ್ರಗ್ರಹಣದಿಂದ ಶುಭ ಫಲ ಪಡೆಯುತ್ತವೆ. ಈ ನಾಲ್ಕು ರಾಶಿಯವರಿಗೆ ತುಂಬಾ ಒಳ್ಳೆಯದಾಗುತ್ತದೆ. ಮತ್ತು ಇವರು ಕೈ ಹಾಕಿದ ಕೆಲಸ ನೆರವೇರುತ್ತದೆ.

ಮೇಷ, ಸಿಂಹ, ವೃಶ್ಚಿಕ, ಮಿಥುನ ಈ ರಾಶಿಗಳು ಚಂದ್ರಗ್ರಹಣದಿಂದ ಮಿಶ್ರ ಫಲ ಪಡೆಯುತ್ತವೆ. ಅಂದರೆ ಈ ರಾಶಿಯವರಿಗೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡು ಸಹ ಲಭಿಸುತ್ತವೆ. ಅಂತ್ಯ ಕಾಲದಲ್ಲಿ ಸ್ನಾನ ಮಾಡಿದರೆ ಅನಂತ ಫಲ ಸಿಗುತ್ತದೆ. ಇನ್ನು ಗ್ರಹಣ ಸಂಭವಿಸಿದ ಮೇಲೆ ಹೋಮ ಮಾಡಿದರೆ ಕೋಟಿ ಪುಣ್ಯ ಫಲ ಸಿಗುತ್ತದೆ.

ಧನಸ್ಸು, ಮಕರ, ವೃಷಭ, ಕನ್ಯಾ ಈ ರಾಶಿಗಳು ಚಂದ್ರಗ್ರಹಣದಿಂದ ಅಶುಭ ಫಲ ಪಡೆಯುತ್ತವೆ. ಇದಕ್ಕೆ ಸೂಕ್ತ ಪರಿಹಾರ ಈ ನಾಲ್ಕು ರಾಶಿಯವರು ಮಾಡಿಸಿಕೊಂಡರೆ ಒಳ್ಳೆಯದು.

Also read: ಜ್ಯೋತಿಷ್ಯದ ಪ್ರಕಾರ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಯಾವ ಉದ್ಯೋಗ ಸೂಕ್ತ ನೋಡಿ..

ಗರ್ಭಿಣಿಯರು, ಬಾಣಂತಿಯರು, ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವವರು ಮತ್ತು ಪುಟಾಣಿಗಳು ಕೂಡ ಗ್ರಹಣಾಚರಣೆ ಮಾಡಬಹುದು. ಮತ್ತು ಗ್ರಹಣದ ಸಮಯದಲ್ಲಿ ಸ್ವಲ್ಪ ಅಕ್ಕಿಯನ್ನು ಒಂದು ಬಟ್ಟೆಯಲ್ಲಿ ಒಂದು ಕಡೆ ತೆಗೆದಿಟ್ಟು ಕೊಂಡಿರಿ. ಮರುದಿನ ದೇವಸ್ಥಾನಕ್ಕೆ ಅಥವಾ ಬಡವರಿಗೆ ತೆಗೆದಿಟ್ಟ ಅಕ್ಕಿಯನ್ನು ದಾನ ನೀಡಬೇಕು. ಗ್ರಹಣದ ಸಮಯದಲ್ಲಿ ಸ್ನಾನ ಮಾಡಿಕೊಂಡು ಪೂಜಾದಿ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಗ್ರಹಣ ಸಂಭವಿಸಿದಾಗ ಆಹಾರ ಸ್ವೀಕಾರ ನಿಷಿದ್ಧವಾಗಿದ್ದು, ಗ್ರಹಣ ಮೋಕ್ಷವಾದ ನಂತರವೇ ಸ್ನಾನಾದಿಗಳನ್ನು ಪೂರೈಸಿ ಆಹಾರ ಸ್ವೀಕರಿಸಬೇಕು.

ಗ್ರಹಣದಿಂದ ಯಾವ ನಕ್ಷತ್ರ-ರಾಶಿಗಳಿಗೆ ಪ್ರಭಾವ, ಯಾವ ಮಂತ್ರ ಪಠಿಸಬೇಕು ಎಂದು ತಿಳಿಯೋಣವೇ

“ಉತ್ತರಾಷಾಢ” ನಕ್ಷತ್ರದವರೂ, ” ಧನಸ್ಸು ಮತ್ತು ಮಕರ” ರಾಶಿಯವರೂ, ” ಮೇಷ, ವೃಷಭ ಹಾಗೂ ಮಿಥುನ ” ಲಗ್ನಗಳಲ್ಲಿ ಜನಿಸಿದವರೂ ಇಲ್ಲಿ ಕೊಟ್ಟಿರುವ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದು ಗ್ರಹಣ ಮುಗಿಯುವವರೆಗೂ ತಮ್ಮಲ್ಲಿಟ್ಟುಕೊಂಡು, ಗ್ರಹಣ ಮೋಕ್ಷಾ ನಂತರ ಯಥಾಶಕ್ತಿ ದಕ್ಷಿಣೆ ಸಮೇತ ದಾನ ಮಾಡತಕ್ಕದ್ದು.

ಶ್ಲೋಕ :
ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 ||

ಇನ್ನು ಧನಸ್ಸು, ಮಕರ, ವೃಷಭ, ಕನ್ಯಾ ಈ ರಾಶಿಗಳ ಮೇಲೆ ಈ ಗ್ರಹಣದ ಶಾಕ ಬಿರಲ್ಲಿದು ತುಂಬಾ ಜಾಗ್ರತೆ ವಹಿಸಬೇಕು ಇದರ ಪರಿಹಾರಕ್ಕಾಗಿ ಸ್ವಲ್ಪ ಅಕ್ಕಿಯನ್ನು ಮತ್ತು ಹುರುಲಿಕಾಳನ್ನು ಹತ್ತಿರದ ದೇವಸ್ಥಾನದಲ್ಲಿ ದಾನಮಾಡುವ ಮೂಲಕ ಗ್ರಹಣದ ಸಮಯದಲ್ಲಿ ಹೋಮ ಮಾಡಿದರೆ ಕೋಟಿ ಪುಣ್ಯಕ್ಕೆ ಸಮ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತೆ. ಮನಸ್ಸು ಉದ್ವಿಗ್ನಗೊಲಿಸುವ ಸಂಭವಿರುವುದರಿಂದ ಮುಖ್ಯವಾಗಿ ಗ್ರಹಣ ಸಮಯದಲ್ಲಿ ಈ ಮಂತ್ರಯನ್ನು ಹೇಳಲೇಬೇಕು.

Also read: ಪರಿಹಾರ ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರು ಯಾವ ರುದ್ರಾಕ್ಷಿ ಧರಿಸುದರೆ ಶಿವನ ಕೃಪೆಗೆ ಪಾತ್ರವಾಗುವುದು ಅಂತ ತಿಳಿಯಿರಿ..!!

ಶ್ರೀ ಚಂದ್ರ ಗಾಯತ್ರಿ ಮಂತ್ರ :
|| ಓಂ ಕೃಷ್ಣ ಪುತ್ರಾಯ ವಿದ್ಮಹೇ ಅಮ್ರುತದ್ವಾಯ ಧೀಮಹಿ ತನ್ನೋ ಚಂದ್ರ ಪ್ರಚೋದಯಾತ್ಶ್ರೀ||

ಕೇತು ಗಾಯತ್ರಿ ಮಂತ್ರ:
|| ಓಂ ಅಷ್ವಧ್ವಜಾಯ ವಿದ್ಮಹೇ ಶೂಲಹಸ್ತಾಯ ಧೀಮಹಿ ತನ್ನೋ ಕೇತು ಪ್ರಚೋದಯಾತ್||
ಎಲ್ಲಾ ರಾಶಿಯವರು ಗ್ರಹಣದ ದಿನ ಮೂರು ಹೊತ್ತು ಸ್ನಾನ ಮಾಡಿದರೆ ತುಂಬಾ ತುಂಬಾ ಒಳ್ಳೆಯದಾಗುತ್ತೆ.