ನಾಳೆ ಇರುವ ಚಂದ್ರ ಗ್ರಹಣದಿಂದ ನಿಮ್ಮ ರಾಶಿಯನುಸಾರ ಯಾವ ಯಾವ ಯೋಗವಿದೆಯೆಂದು ತಿಳಿದುಕೊಳ್ಳಿ!!

0
645

ಶ್ರೀ ವಿಕಾರಿ ನಾಮ ಸಂವತ್ಸರದ ಆಷಾಡ ಶುಕ್ಲ ಪೂರ್ಣಿಮಾ 16-07-2019 ಮಂಗಳವಾರ ಉತ್ತರಾಷಾಢ ನಕ್ಷತ್ರದಲ್ಲಿ, ಧನಸ್ಸು ಹಾಗೂ ಮಕರ ರಾಶಿಯಲ್ಲಿ, ಮೇಷ, ವೃಷಭ ಮತ್ತು ಮಿಥುನ ಲಗ್ನಗಳಲ್ಲಿ , ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಗ್ರಹಣದಿಂದ ಕೆಲ ರಾಶಿಯವರಿಗೆ ತುಂಬಾ ಒಳ್ಳೆಯ ದಿನಗಳು ಬರಲಿವೆ ಹಾಗು ಕೆಲವು ರಾಶಿಗಳಿಗೆ ಸ್ವಲ್ಪ ಕಷ್ಟಗಳು ಬರಲಿವೆ.

ಕೇತುಗ್ರಸ್ತ ಸಂಪೂರ್ಣ ಚಂದ್ರಗ್ರಹಣ ಯಾರಿಗೆಲ್ಲ ಶುಭ ಯಾರಿಗೆಲ್ಲ ಅಶುಭ ಎಂದು ತಿಳಿಯೋಣವೇ

ಮೇಷ:

ಈ ರಾಶಿಯವರಿಗೆ ಚಂದ್ರಗ್ರಹಣದ ಫಲಿತಾಂಶ ದಿಂದ ಒಳ್ಳೆಯದು ಮತ್ತು ಕೆಟ್ಟದ್ದು ಎರಡು ಸಹ ಲಭಿಸುತ್ತವೆ. ತುಂಬ ಸಾಮಾನ್ಯವಾಗಿ ಕಂಡುಬರುವುದು ಆರ್ಥಿಕ ನಷ್ಟ. ಯಾರಿಗಾದರೂ ಸಾಲ ಕೊಡಲಿಕ್ಕೆ ಹೋಗಬೇಡಿ. ಹಣಕಾಸಿನ ವ್ಯವಹಾರದಲ್ಲಿ ಬಹಳ ಎಚ್ಚರವಾಗಿರಬೇಕು. ಅಂತ್ಯ ಕಾಲದಲ್ಲಿ ಸ್ನಾನ ಮಾಡಿದರೆ ಅನಂತ ಫಲ ಸಿಗುತ್ತದೆ. ಇನ್ನು ಗ್ರಹಣ ಸಂಭವಿಸಿದ ಮೇಲೆ ಹೋಮ ಮಾಡಿದರೆ ಕೋಟಿ ಪುಣ್ಯ ಫಲ ಸಿಗುತ್ತದೆ.

ವೃಷಭ:

ವೃಶ್ಚಿಕ ರಾಶಿಯವರು ನೀವು ಅಂದುಕೊಂಡಂತೆ ನಿಮಗೆ ಸಮಾಜದಲ್ಲಿ ಮಾನ್ಯತೆ ಲಭಿಸಲಿ ತಮ್ಮ ವರ್ಚಸ್ಸು ಹಾಗೂ ಸಮಾಜದಲ್ಲಿನ ಗೌರವದ ಬಗ್ಗೆ ಎಚ್ಚರ ವಹಿಸಬೇಕು. ಏಕೆಂದರೆ ಈ ಗ್ರಹಣವು ನಷ್ಟ ಮತ್ತು ಅವಮಾನವನ್ನು ಸೂಚಿಸುತ್ತಿದೆ. ದುಷ್ಟರ ಕಂಡರೆ ದೂರವಿರಿ. ನೀವು ಋಣಾತ್ಮಕ ಚಿಂತನೆಗಳಿಂದ ಹೊರ ಬರುವ ಅವಕಾಶ ಒದಗಿ ಬರಲಿದ್ದು, ಸ್ವಲ್ಪ ಮಟ್ಟಿಗೆ ನೆಮ್ಮದಿಯೆನಿಸಲಿದೆ.

ಮಿಥುನ:

ಎಲ್ಲದಕ್ಕೂ ಹಿರಿಯರ ಮಾರ್ಗದರ್ಶನ ಪಡೆಯುವುದರಿಂದ ಬಲಬರಲಿದೆ. ಏನಾಗುತ್ತಿದೆ ಅಂತಲೇ ಗೊತ್ತಾಗದಂಥ ಸನ್ನಿವೇಶ ನಿಮ್ಮದು. ಏಕೆ ತೊಂದರೆ ಆಗುತ್ತಿದೆ, ಇಂಥ ಸನ್ನಿವೇಶದಲ್ಲಿ ಸಿಕ್ಕಿಬಿದ್ದಿದ್ದು ಹೇಗೆ ಎಂದು ಗೊತ್ತಾಗುವಷ್ಟರಲ್ಲಿ ತಲೆ ಹಾರಿ ಹೋಗಿರುತ್ತದೆ. ಲೇವಾದೇವಿ ವಹಿವಾಟುಗಳಲ್ಲಿನ ತೊಂದರೆಯಿಂದ ಪಾರಾಗಲು ಶ್ರಮಿಸಬೇಕಾಗುವುದು. ಮೈ ಮೇಲೆ ಎಚ್ಚರವಿರಲಿ

ಕಟಕ:

ದಿನ ಭವಿಷ್ಯ

ನಿಮ್ಮ ರಾಶಿಗೆ ಸಂತೋಷದ ಫಲಿತಾಂಶ ಕೊಡುತ್ತದೆ ಚಂದ್ರ ಗ್ರಹಣ. ಹೊಸ ಉದ್ಯೋಗಿಗಳಿಗೆ ಔದ್ಯೋಗಿಕ ರಂಗದಲ್ಲಿ ಅನುಕೂಲ, ಪ್ರಗತಿ ಇದೆ. ನಿಮ್ಮ ವಯಕ್ತಿಕ ಸಂಬಂಧಗಳು ವೃದ್ಧಿಯಾಗುತ್ತವೆ. ಎಲ್ಲದರಲ್ಲೂ ಗೌರವ-ಮನ್ನಣೆಗಳು ಹೆಚ್ಚಾಗುತ್ತವೆ. ಸಾಮಾಜಿಕ ಬದುಕಿನಲ್ಲಿ ಮಿಂಚುತ್ತೀರಿ. ಒಟ್ಟಿನಲ್ಲಿ ಈ ಗ್ರಹಣದಿಂದ ನಿಮಗೆ ಶುಭ ಫಲಗಳೇ ಜಾಸ್ತಿ.

ಸಿಂಹ:

ದಿನ ಭವಿಷ್ಯ

ಈ ಗ್ರಹಣದಿಂದ ಸಿಂಹ ರಾಶಿಯವರಿಗೆ ಮಿಶ್ರ ಫಲ ಲಭಿಸಲಿದೆ. ಆದಾಯ ಹೆಚ್ಚುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಏಳ್ಗೆ ಕಾಣುತ್ತದೆ. ಸರಕಾರಿ ಉದ್ಯೋಗಿಗಳಿಗೆ ಅಧಿಕಾರಿಗಳ ಸಹಾಯದಿಂದ ಬದಲಾವಣೆ ಕಾಣುವಿರಿ. ಸಾವಧಾನದಿಂದ ಹೆಜ್ಜೆ ಹಾಕಿದರೆ ಯಶಸ್ಸು ಸಾಧಿಸುವಿರಿ. ನಿಮ್ಮ ಪ್ರೀತಿ ಪಾತ್ರರ ರೊಂದಿಗೆ ಯಾವುದೇ ವಿಚಾರದಲ್ಲಿ ಜಗಳ ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ. ಆ ಮೂಲಕ ಯಾವುದೇ ಬಿಕ್ಕಟ್ಟು ಎದುರಾಗದಂತೆ ಎಚ್ಚರ ವಹಿಸಿ. ಕುಟುಂಬ ಸದಸ್ಯರ ಸಹಕಾರದಿಂದ ಅರ್ಧಕ್ಕೆ ನಿಂತ ಸಮಸ್ಯೆಗಳು ಸುಧಾರಿಸಲಿದೆ.

ಕನ್ಯಾ:

ದಿನ ಭವಿಷ್ಯ

ಈ ದಿನ ವೈಯಕ್ತಿಕ ಸಮಸ್ಯೆಗಳ ನಿರ್ವಹಣೆಗೆ ಅಧಿಕ ಪ್ರಯತ್ನ ಬೇಡ ತಾನಾಗಿಯೇ ಪರಿಹಾರಗೊಳ್ಳಲಿದೆ. ಹಣಕಾಸಿನ ವಿಚಾರವಾಗಿ ಎಷ್ಟು ಹುಷಾರಾಗಿರುತ್ತೀರೋ ಅಷ್ಟು ಒಳ್ಳೆಯದು. ದಿಢೀರ್ ನಷ್ಟ ತಂದೊಡ್ಡುವ ಗ್ರಹಣ ಇದು. ತುರ್ತು ಯೋಜನೆಗೆ ಕೈ ಹಾಕಲು ಹೋಗಬೇಡಿ. ಯಾವುದೇ ನ್ಯಾಯಾಂಗ ಮತ್ತು ಹಣ ಕಾಸಿನ ವಿಷಯಕ್ಕೆ ಸಂಬಂಧಿಸಿದ್ದು ಅನ್ನೋವಾಗ ಒಂದಕ್ಕೆ ಎರಡು ಸಲ ಪರಿಶೀಲಿಸಿ, ಸಹಿ ಮಾಡಿ. ಇನ್ನೊಬ್ಬರನ್ನು ಕುರುಡಾಗಿ ನಂಬಬೇಡಿ.

ತುಲಾ:

ದಿನ ಭವಿಷ್ಯ

ಚಂದ್ರ ಗ್ರಹಣದ ಫಲಿತಾಂಶ ಶುಭವಾಗಿದೆ. ಕುಟುಂಬದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲಿದೆ. ಕುಟುಂಬದಲ್ಲಿನ ಹಿರಿಯರ ಸಹಕಾರ ಮತ್ತು ಸ್ನೇಹಿತರಿಂದ ದೈಹಿಕ ಬಲ, ಆರ್ಥಿಕ ಬಲ ಹೆಚ್ಚಲಿದೆ. ಸಹಾಯ ಅನ್ನೋದರ ಜತೆಗೆ ನಿಮಗೆ ಬೇಕಾದ ಸಹಕಾರ ದೊರೆಯುತ್ತದೆ.

ವೃಶ್ಚಿಕ:

ದಿನ ಭವಿಷ್ಯ

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಹುಟ್ಟಿದ ತಿಂಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಎಂಬುವುದು ನಿಮಗೆ ತಿಳಿದಿದೆಯೇ..?

ಚಂದ್ರ ಗ್ರಹಣದ ಫಲಿತಾಂಶ ಮಿಶ್ರ ಫಲವಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ನಿರೀಕ್ಷೆ ಸಾಧ್ಯವಾಗದಿದ್ದುರಿಂದ ಗುರು ರಾಘವೇಂದ್ರರ ಸೇವೆ ಉತ್ತಮ. ದುಡುಕಿನ ನಿರ್ಧಾರ ಕಾರ್ಯ ಭಂಗಕ್ಕೆ ಕಾರಣವಾಗಲಿದ್ದು, ಎಚ್ಚರಿಕೆ ವಹಿಸುವುದು ಒಳಿತು. ಕುಟುಂಬದಲ್ಲಿ ಸ್ವಲ್ಪ ಅಡಚಣೆಗಳಿದ್ದು, ತಾಳ್ಮೆ ಸಮಾಧಾನ ವಹಿಸುವುದು ಒಳ್ಳೆಯದು. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗುರುವಿನ ಮೊರೆ ಹೋಗುವಿರಿ. ಗುರುವಿನ ಶುಭ ಆಶೀರ್ವಾದದಿಂದ ಗೊಂದಲದ ಮನಸ್ಥಿತಿ ದೂರವಾಗುವುದು. ಆರ್ಥಿಕ ಸ್ಥಿತಿಯಲ್ಲಿ ಕೊಂಚ ಸುಧಾರಣೆ ಕಂಡುಬರುವುದು.

ಧನಸ್ಸು:

ದಿನ ಭವಿಷ್ಯ

ಧನಸ್ಸು ರಾಶಿಯವರಿಗೆ ಹಲವು ಬಗೆಯಲ್ಲಿ ಸಮಸ್ಯೆಗಳು ಕಾಣುತ್ತಿವೆ. ಕೆಲವು ಪ್ರಸಂಗಗಳಲ್ಲಿ ನೀವೇ ಹುಡುಕಿಕೊಂಡು ಹೋಗಿ, ಸಮಸ್ಯೆಗೆ ಸಿಲುಕುವ ಸಂಭವವೂ ಇದೆ. ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಸಮಸ್ಯೆಯ ಸುಳಿಯಲ್ಲಿ ಸಿಲುಕಿಸಬಹುದು ಹೊಸ ಸಾಹಸಗಳಿಗೆ ಕೈ ಹಾಕಲೇ ಬೇಡಿ. ಅತಿ ಮುಖ್ಯವಾದ ಕೆಲಸಗಳಿಗೆ ಮಾತ್ರ ಪ್ರಾಮುಖ್ಯತೆ ಕೊಡಿರಿ. ದಿಢೀರ್‌ ಪ್ರಯಾಣ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು

ಮಕರ:

ದಿನ ಭವಿಷ್ಯ

ಈ ಗ್ರಹಣವು ಅತ್ಯಂತ ಕೆಡಕು ತರುವುದು ನಿಮ್ಮ ರಾಶಿಗೆ ಎಚ್ಚರ ಎಚ್ಚರ!. ಆದ್ದರಿಂದ ಈ ತಿಂಗಳಿಡೀ ದೂರ ಪ್ರಯಾಣ ಮಾಡಲೇಬೇಡಿ. ಮನೆಯಲ್ಲಿ ಕೂಡ ವಿದ್ಯುತ್ ಉಪಕರಣ, ಗ್ಯಾಸ್ ಸ್ಟೌ ಇತ್ಯಾದಿಗಳ ಬಗ್ಗೆ ಎಚ್ಚರವಿರಲಿ. ಯಾವುದೇ ಅಪಾಯಕ್ಕೆ ನೀವಾಗಿಯೇ ಕೈ ಹಾಕದಿರುವುದು ಉತ್ತಮ. ತಾಳ್ಮೆಯ ವರ್ತನೆಗೆ ನಿಧಾನ ಶುಭ ವೆನಿಸಲಿದೆ.

ಕುಂಭ:

ದಿನ ಭವಿಷ್ಯ

ಈ ಗ್ರಹಣದಿಂದ ಕುಂಭ ರಾಶಿಯವರಿಗೆ ತುಂಬಾ ಒಳ್ಳೆಯದಾಗುತ್ತದೆ. ಮತ್ತು ಇವರು ಕೈ ಹಾಕಿದ ಕೆಲಸ ನೆರವೇರುತ್ತದೆ. ಅದರಲ್ಲೂ ಹಣಕಾಸಿನ ವಿಷಯದಲ್ಲಿ ಮುಟ್ಟಿದ್ದೆಲ್ಲ ಚಿನ್ನ ಎಂದು ಗೋಚರಿಸುತ್ತಿವೆ. ಅನಿರೀಕ್ಷೆತ ಧನಪ್ರಾಪ್ತಿ. ಅದು ಕೂಡ ನಿಮ್ಮ ಎಂದಿನ ಆದಾಯ ಮೂಲವಲ್ಲ. ಇದು ಹೊಸದಾದ ಆದಾಯ ಮೂಲದಿಂದ ಸಿಗುವ ಧನಲಾಭ

ಮೀನ:

ದಿನ ಭವಿಷ್ಯ

ಈ ಗ್ರಹಣದಿಂದ ನಿಮಗೆ ಶುಭ ಫಲಗಳು ಇವೆ. ಅದರ ಸದುಪಯೋಗ ಮಾಡಿಕೊಳ್ಳಬೇಕಷ್ಟೇ. ಕೋರ್ಟು ಕಚೇರಿಗಳಲ್ಲಿನ ಕಾರ್ಯಗಳು ಫಲ ನೀಡಲಿವೆ. ಧೈರ್ಯ ಕಾರ್ಯಗಳ ಬಲದಿಂದ ಹಣ ತರುವ ಅವಕಾಶಗಳು ಬರುವಾಗ ನೀವಾಗಿಯೇ ಅದನ್ನು ನಿರಾಕರಿಸಬೇಡಿ. ಒದಗಿ ಬಂದ ಅವಕಾಶವನ್ನು ಕೈ ಬಿಡಬೇಡಿ.

Also read: ಮದುವೆಗೆ ಜಾತಕ ಪರೀಶಲನೆ ಎಷ್ಟು ಮುಖ್ಯ ಹಾಗೂ ಯಾವ ವಿಚಾರಗಳು ಸಂಬಂಧವನ್ನು ಗಟ್ಟಿ ಗೊಳಿಸುತ್ತವೆ ಅಂತ ತಿಳ್ಕೊಳ್ಳಿ..