ನಿಮ್ಮ ಬಳಿ ಮೊಬೈಲ್ ಇದ್ದರೆ ಆಧಾರ್ ಕಾರ್ಡ್ ಇದೆ ಅಂದುಕೊಳ್ಳಿ. ಯಾಕೆ ಅಂತೀರಾ ಇಲ್ಲಿದೆ ನೋಡಿ ಎಂ ಆಧಾರ್..!

0
1932

ಹೌದು ಆಧಾರ್ ಇಲ್ಲದೆ ಏನು ಇಲ್ಲ ಎಂಬ ದಿನ ಇವತ್ತಿನ ದಿನಗಳಲ್ಲಿ ಬಂದಿದೆ.ನೀವು ಸಿಮ್ ತಗೋಬೇಕು ಅಂದು ಆಧಾರ್ ನೀವು ಬೇರೆ ಏನೇ ತಗೋಬೇಕು ಅಂದ್ರು ಆಧಾರ್ ಕಡ್ಡಾಯವಾಗಿದೆ. ಆದ್ರೆ ಕೆಲವರಿಗೆ ಆಧಾರ್ ಕಾರ್ಡ್ ಹಿಟ್ಟುಕೊಳ್ಳುವುದೇ ಸಮಸ್ಯೆಯಾಗಿದೆ. ಆದ್ರೆ ಇನ್ಮುಂದೆ ನೀವು ನಿಮ್ಮ ಆಧಾರ್ ನಿಮ್ಮ ಮೊಬೈಲ್ ನಲ್ಲಿ ಸಿಗುವಂತೆ ಮಾಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ವ್ಯವಹಾರಗಳಲ್ಲಿ ಆಧಾರ್‌ ಕಾರ್ಡ್ ಬಳಕೆ ಹೆಚ್ಚಿದೆ.ಆಧಾರ್‌ ಸಂಪರ್ಕಿತ ಸೇವೆಗಳಲ್ಲಿ ದೃಢೀಕರಣಕ್ಕಾಗಿ ಕಾರ್ಡ್‌ ತೆಗೆದುಕೊಂಡು ಹೋಗುವ ಅಗತ್ಯತೆ ಕೊನೆಗೊಳ್ಳಲಿದೆ. ಯಾಕೆ ಅಂದ್ರೆ ‘ಎಂಆಧಾರ್‌’ ಆ್ಯಪ್‌ ಬಿಡುಗಡೆಯಾಗಿದೆ.

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಬಿಡುಗಡೆ ಮಾಡಿರುವ ‘ಎಂಆಧಾರ್‌’ ಆ್ಯಪ್‌ ಮೂಲಕ ಸ್ಮಾರ್ಟ್‌ ಫೋನ್‌ನಲ್ಲಿ ಆಧಾರ್‌ ಸಂಖ್ಯೆಯನ್ನು ಒಳಗೊಂಡ ಮಾಹಿತಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದ್ದು, ಆಧಾರ್‌ ಪ್ರತಿ ತೆಗೆದುಕೊಂಡು ಹೋಗುವ ಅಗತ್ಯವಿರುವುದಿಲ್ಲ.

ನಿಮ್ಮ ಬಳಿ ಪ್ರಸ್ತುತ ಆ್ಯಂಡ್ರಾಯ್ಡ್‌ ಮೊಬೈಲ್ ಇದ್ರೆ ನೀವು ಈ ಕೂಡಲೇ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಎಂಆಧಾರ್
ಡೌನ್‌ಲೋಡ್‌ ಮಾಡಿಕೊಳ್ಳಿ. ಇದು ಯಾವಾಗಲೂ ನಿಮ್ಮ ಬಳಿಯೇ ಇರುತ್ತದೆ.