ಸ್ವಾದಿಷ್ಟ ಮ್ಯಾಕ್ರೋನಿ ತಿನಿಸು

0
2113

Kannada News | Recipe tips in Kannada

ಮ್ಯಾಕ್ರೋನಿ ಇದೇನಿದು? ಹೆಸರು ಕೇಳಿದರೆ ಇಟಾಲಿಯನ್ ಫುಡ್ ಹೆಸರು ಇದ್ದಂಗೆ ಇದೆಯೆಲ್ಲಾ ಅನ್ನಿಸುತ್ತಿದೆಯೇ? ಮ್ಯಾಕ್ರೋನಿ ಹೆಸರು ಇಟಾಲಿಯನ್‍ದಾದರೂ ಇದು ತಯಾರಾಗಿರುವುದು ಅಪ್ಪಟ ಭಾರತೀಯ ಚಿರೋಟಿರವೆಯಿಂದ,ಇದನ್ನು ಇಂಗ್ಲೀಷ್‍ನಲ್ಲಿ ಸೆಮೊಲಿನ ಏನ್ನುತ್ತಾರೆ ಶಾವಿಗೆ ಸಹ ಇದೇ ಚಿರೋಟಿರವೆಯಿಂದ ತಯಾರಾಗುವುದು, ಕೊಳವೆಯಾಕಾರದಲ್ಲಿ ಸಿಗುವ ಇದಕ್ಕೆ ಮಕ್ಕಳು ಆಕರ್ಷಿತರಾಗುತ್ತಾರೆ ಏಂಬುದರಲ್ಲಿ ಎರಡು ಮಾತಿಲ್ಲಾ. ಅಧಿಕ ಪ್ರೋಟಿನ ಇರುವ ಇದು ಮಕ್ಕಳಿಗೆ ಒಂದು ಸ್ವಾದಿಷ್ಟ ಅಹಾರ ಎಂದರೆ ತಪ್ಪಾಗಲಾರದು.

ಮ್ಯಾಕ್ರೋನಿ ಬೇಯಿಸುವ ವಿಧಾನ:

ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟು ಅದು ಕುದಿಯಲು ಪ್ರಾರಂಬಿಸಿದಾಗ ಅದಕ್ಕೆ ಒಂದು ಚಮಚ ಅಡುಗೆ ಏಣ್ಣೆ ಹಾಗು ಅರ್ಧ ಚಮಚ ಉಪ್ಪನ್ನು ಹಾಕಿ, ಇದಕ್ಕೆ ಮ್ಯಾಕ್ರೋನಿಯನ್ನು ಹಾಕಿ ಐದು ನಿಮಿಷ ಕುದಿಸಿ, ಹೀಗೆ ಕುದಿಸಿದ ಮ್ಯಾಕ್ರೋನಿಯನ್ನು ತೂತವಿರುವ ಪಾತ್ರೆಗೆ ಸುರಿದು ನೀರನ್ನು ಬಸಿಯಿರಿ,ಬಸಿದ ಮ್ಯಾಕ್ರೋನಿಯನ್ನು ಏರಡು ಲೋಟ ತಣ್ಣಿರಿನಿಂದ ತೋಳೆದು ನೀರನ್ನು ಬಸಿದುಹೋಗಲು ಬಿಡಿ, ನೆನಪಿಡಿ ಮ್ಯಾಕ್ರೋನಿಯನ್ನು ಐದು ನಿಮಿಷಕಿಂತ ಜಾಸ್ತಿ ಕುದಿಸಬೇಡಿ, ಹೀಗೆ ಕುದಿಸಿದರೆ ಅದು ತುಂಬಾ ಮೆದುವಾಗಿ ಹಿಟ್ಟಿನಂತಾಗುತ್ತದೆ.

ಒಗ್ಗರಣೆ ಅಥವಾ ಲೆಮನ್ ಮ್ಯಾಕ್ರೊನಿ

bhec04masala_magic

ಸಾಮಗ್ರಿ:

ಈರುಳ್ಳಿ ಒನ್ದು,ಹಸಿಮೇಣಸಿನಕಾಯಿ ಮೂರು, ಕರಿಬೇವಿನ ಸೊಪ್ಪು ಸ್ವಲ್ಪ, ಟೊಮೆಟೊ ಒಂದು, ನಿಂಬೆಹಣ್ಣು ಒಂದು, ಉಪ್ಪು ರುಚಿಗೆ ತಕ್ಕಷ್ಟು,ಓಗ್ಗರಣೆಗೆ ಸ್ವಲ್ಪ ಸಾಸುವೆ, ಉದ್ದಿನಬೇಳೆ ಹಾಗೂ ಕಡಲೆಬೇಳೆ ಹಾಗೂ ಓಗ್ಗರಣೆಗೆ ಏಣ್ಣೆ

ವಿಧಾನ:

ಹಸಿಮೆಣಸಿನಕಾಯಿ, ಈರುಳ್ಳಿ, ಟೋಮೆಟೊವನ್ನು ಸಣ್ಣಗೆ ಹೆಚ್ಚಿಕೊಂಡು ಬಾಣಲೆಯಲ್ಲಿ ಅಗತ್ಯಕ್ಕೆ ತಕಷ್ಟು ಏಣ್ಣೆಯನ್ನು ಹಾಕಿ ಕಾದ ನಂತರ ಅದಕ್ಕೆ ಸಾಸುವೆ, ಕಡಲೆಬೇಳೆ ಮತ್ತು ಉದ್ದಿನಬೇಳೆಯನ್ನು ಹಾಕಿ ಬೇಳೆಗಳು ಸ್ವಲ್ಪ ಕಂದುಬಣ್ಣಕ್ಕೆ ಬಂದ ನಂತರ ಅದಕ್ಕೆ ಹಸಿಮೆಣಸಿನಕಾಯಿ ಈರುಳ್ಳಿ ಹಾಗೂ ಟೋಮೆಟೊವನ್ನು ಹಾಕಿ ಒಂದೆರಡು ನಿಮಿಷ ಬಾಡಿಸಿರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮೇಲೆ ಬೇಯಿಸಿಟ್ಟುಕೊಂಡ ಮ್ಯಾಕ್ರೊನಿಯನ್ನು ಹಾಕಿ ಚೆನ್ನಾಗಿ ಕ್ಯೆಯಾಡಿಸಿರಿ,ಇದಕ್ಕೆ ನಿಂಬೆಹಣ್ಣುನ್ನು ಹಿಂಡಿದರೆ ರುಚಿಕರ ಓಗ್ಗರಣೆ ಅಥವಾ ಲೆಮನ್ ಮ್ಯಾಕ್ರೋನಿ ತಿನ್ನಲು ರೆಡಿ.